Thursday, May 2, 2024
Homeರಾಜ್ಯಡಿ.1ರಿಂದ ವಾಹನಗಳಲ್ಲಿ ತುರ್ತು ಪ್ಯಾನಿಕ್ ಬಟನ್ ಅಳವಡಿಕೆಗೆ ಆದೇಶ

ಡಿ.1ರಿಂದ ವಾಹನಗಳಲ್ಲಿ ತುರ್ತು ಪ್ಯಾನಿಕ್ ಬಟನ್ ಅಳವಡಿಕೆಗೆ ಆದೇಶ

ಬೆಂಗಳೂರು, ನ.25- ರಾಜ್ಯದಲ್ಲಿನ ಸಾರ್ವಜನಿಕ ಸೇವಾ ವಾಹನಗಳಿಗೆ ಹಾಗೂ ರಾಷ್ಟ್ರೀಯ ರಹದಾರಿ ಹೊಂದಿರುವ ಸರಕು ಸಾಗಾಣಿಕೆ ವಾಹನಗಳಿಗೆ ಡಿಸೆಂಬರ್ ಒಂದರಿಂದ ತುರ್ತು ಪ್ಯಾನಿಕ್ ಬಟನ್ ಒಳಗೊಂಡ ವಾಹನಗಳ ಸ್ಥಳ ಪತ್ತೆ (ವೆಹಿಕಲ್ ಲೋಕೇಷನ್ ಟ್ರ್ಯಾಕಿಂಗ್ ಡೆವಿಸ್ ವಿತ್ ಎಮರ್‍ಜೆನ್ಸಿ ಪ್ಯಾನಿಕ್ ಬಟನ್) ಮಾಡುವ ಸಾಧನ ಅಳವಡಿಸಲು ಸರ್ಕಾರ ಆದೇಶ ಹೊರಡಿಸಿದೆ.

ಡಿಸೆಂಬರ ಒಂದರಿಂದ 2024ರ ನವೆಂಬರ್ 30ರೊಳಗೆ ಈ ಸಾಧನವನ್ನು ಸಾರ್ವಜನಿಕ ಸೇವಾ ವಾಹನಗಳು ಹಾಗೂ ರಾಷ್ಟ್ರೀಯ ರಹದಾರಿ ಹೊಂದಿರುವ ಸರಕು ಸಾಗಾಣಿಕೆ ವಾಹನಗಳಿಗೆ ಅಳವಡಿಸಿಕೊಳ್ಳಲು ಸಾರಿಗೆ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಬಿಜೆಪಿಯಲ್ಲಿ ನಿಲ್ಲದ ಬಡಿದಾಟ: ದೆಹಲಿಯತ್ತ ಅತೃಪ್ತರ ಬಣ

ಅರ್ಹ ಕಂಪೆನಿಗಳಿಂದ ಈ ಸಾಧನವನ್ನು ಅಳವಡಿಸಿಕೊಳ್ಳಬಹುದಾಗಿದೆ. ಜಿಎಸ್‍ಟಿ ಹೊರತುಪಡಿಸಿ ಈ ಸಾಧನಕ್ಕೆ 7599 ರೂ. ನಿಗದಿಪಡಿಸಲಾಗಿದೆ. ವಿಎಲ್‍ಟಿ ಸಾಧನ ಅಳವಡಿಸಿಕೊಳ್ಳಲು ಒಂದು ವರ್ಷದ ಕಾಲಾವಕಾಶ ನೀಡಲಾಗಿದೆ.

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಈ ಯೋಜನೆಗೆ ಒಳಪಡುವ ವಾಹನಗಳ ಅರ್ಹತಾಪತ್ರ ನವೀಕರಣಕ್ಕೆ ಹಾಜರುಪಡಿಸಿದ ಸಮಯದಲ್ಲಿ ಈ ಸಾಧನಗಳನ್ನು ಅಳವಡಿಸಿರುವ ಬಗ್ಗೆ ಕಡ್ಡಾಯವಾಗಿ ಖಚಿತಪಡಿಸಿಕೊಂಡು ಅರ್ಹತಾಪತ್ರ ನವೀಕರಿಸುವಂತೆ ಸಾರಿಗೆ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

RELATED ARTICLES

Latest News