Friday, May 3, 2024
Homeರಾಷ್ಟ್ರೀಯಯುದ್ಧ ವಿಮಾನ ತೇಜಸ್‍ನಲ್ಲಿ ಪ್ರಧಾನಿ ಮೋದಿ ಹಾರಾಟ

ಯುದ್ಧ ವಿಮಾನ ತೇಜಸ್‍ನಲ್ಲಿ ಪ್ರಧಾನಿ ಮೋದಿ ಹಾರಾಟ

ಬೆಂಗಳೂರು,ನ.25- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಚ್‍ಎಎಲ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇಶದ ಹೆಮ್ಮೆಯ ಲಘು ಯುದ್ಧ ವಿಮಾನ ತೇಜಸ್‍ನಲ್ಲಿ ಹಾರಾಟ ನಡೆಸಿದ್ದಾರೆ. ಈ ಮೂಲಕ ಯುದ್ಧ ವಿಮಾನದಲ್ಲಿ ದೇಶದ ಪ್ರಧಾನಿಯೊಬ್ಬರು ಬಹು ವರ್ಷಗಳ ನಂತರ ಹಾರಾಟ ನಡೆಸಿದ ಹೆಗ್ಗಳಿಕೆಗೆ ಮೋದಿಯವರು ಪಾತ್ರರಾಗಿದ್ದಾರೆ.

ಬೆಳಗ್ಗೆ 9.30ಕ್ಕೆ ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಎಚ್‍ಎಚ್‍ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿಯವರ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದಲ್ಲಿ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಹಾರಾಟ ನಡೆಸಿದ್ದಾರೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭದ್ರತಾ ದೃಷ್ಟಿಯಿಂದ ಇದನ್ನು ಗೌಪ್ಯವಾಗಿ ಇಡಲಾಗಿತ್ತು. ಈ ಮೊದಲೇ ಮೋದಿಯವರು ಬೆಂಗಳೂರಿಗೆ ಆಗಮಿಸಿದ ವೇಳೆ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಹೀಗಾಗಿ ಅವರಿಗೆ ಕಳೆದ ಒಂದು ವಾರದಿಂದ ವೈದ್ಯರು ನಿರಂತರವಾಗಿ ವೈದ್ಯಕೀಯ ತಪಾಸಣೆ ನಡೆಸಿದ್ದರು. ಏಕೆಂದರೆ ಯುದ್ಧ ವಿಮಾನದಲ್ಲಿ ಹಾರಾಟ ನಡೆಯುವ ವೇಳೆ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸವಾದರೂ ಬಹುದೊಡ್ಡ ಸಮಸ್ಯೆಗೆ ಸಿಲುಕುವ ಸಂಭವವಿರುತ್ತದೆ.

ಹೀಗಾಗಿ ಬೆಂಗಳೂರಿಗೆ ಬಂದ ಮೋದಿಯವರನ್ನು ನುರಿತ ತಜ್ಞ ವೈದ್ಯರ ತಂಡ ದೈಹಿಕ ತಪಾಸಣೆ ನಡೆಸಿದ ಬಳಿಕವೇ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲು ಅನುಮತಿ ನೀಡಿದರು. ನಿಯಮದಂತೆ ಮೋದಿಯವರಿಗೆ ಭಾರತೀಯ ವಾಯುಪಡೆಯ ಸಮವಸ್ತ್ರವನ್ನು ನೀಡಲಾಗಿತ್ತು. ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಹೊರಟ ತೇಜಸ್ ಯುದ್ಧ ವಿಮಾನ ಆಗಸದಲ್ಲಿ ಸುಮಾರು 10 ನಿಮಿಷಕ್ಕೂ ಹೆಚ್ಚು ಹಾರಾಟ ನಡೆಸಿದೆ.

ಬಿಜೆಪಿಯಲ್ಲಿ ನಿಲ್ಲದ ಬಡಿದಾಟ: ದೆಹಲಿಯತ್ತ ಅತೃಪ್ತರ ಬಣ

ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣವಾದ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿಯವರು ತೇಜಸ್‍ನಲ್ಲಿ ಒಂದು ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ. ಈ ಅನುಭವವು ವಿಸ್ಮಯಕಾರಿಯಾಗಿ ಪುಷ್ಟೀಕರಿಸಿದೆ, ನಮ್ಮ ದೇಶದ ಸ್ಥಳೀಯ ಸಾಮಥ್ರ್ಯಗಳಲ್ಲಿ ವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ನಮ್ಮ ರಾಷ್ಟ್ರೀಯ ಸಾಮಥ್ರ್ಯದ ಬಗ್ಗೆ ನನಗೆ ಹೊಸ ಹೆಮ್ಮೆ ಮತ್ತು ಆಶಾವಾದವನ್ನು ನೀಡಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಾವು ಜಗತ್ತಿನಲ್ಲಿ ಯಾರಿಗೂ ಕೂಡ ಕಡಿಮೆಯಿಲ್ಲ. ನಮ್ಮ ಎಚ್‍ಎಎಲ್, ಡಿಆರ್‍ಡಿಒ, ಇಸ್ರೊ ಹೆಮ್ಮೆಯ ಸಂಸ್ಥೆಗಳಾಗಿವೆ. ತೇಜಸ್ ಯುದ್ಧ ವಿಮಾನ ನನಗೆ ರೋಮಾಂಚನಕಾರಿ ಅನುಭವ ಉಂಟು ಮಾಡಿತು ಇದಕ್ಕಾಗಿ ಭಾರತೀಯರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಲಘು ಯುದ್ಧ ವಿಮಾನವಾದ ತೇಜಸ್ ಅನ್ನು ಖರೀದಿಸಲು ಹಲವಾರು ದೇಶಗಳು ಆಸಕ್ತಿ ತೋರಿಸಿವೆ. 2022-2023ರ ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ 15,920 ಕೋಟಿ ರೂ.ಗಳನ್ನು ತಲುಪಿದೆ.

ಭಾರತೀಯ ವಾಯುಪಡೆಯು ಹೆಚ್ಚಿನ ಫೈಟರ್ ಜೆಟ್‍ಗಳು ಮತ್ತು ಲಘು ಯುದ್ಧ ಹೆಲಿಕಾಪ್ಟರ್‍ಗಳನ್ನು (ಎಲ್‍ಸಿಎಚ್) ಖರೀದಿಸುವ ಮತ್ತು ಅದರ ಸುಖೋಯ್-30 ಅನ್ನು ನವೀಕರಿಸುವ ಯೋಜನೆಗಳನ್ನು ಘೋಷಿಸಿದ ನಂತರದ ಗಮನಾರ್ಹ ಬೆಳವಣಿಗೆ ಎಂದು ಹೇಳಲಾಗುತ್ತಿದೆ. ಭಾರತೀಯ ಸೇನೆಯ ಜತೆಗೆ ಎಚ್‍ಎಎಲ್ ಮಾಡಿಕೊಂಡಿರುವ ಒಪ್ಪಂದಗಳು ಬಹುಕೋಟಿ ಮೌಲ್ಯದ್ದು ಎಂದು ಮೂಲಗಳು ತಿಳಿಸಿರುವುದಾಗಿ ಎಎನ್‍ಐ ವರದಿ ಮಾಡಿದೆ.

ಫ್ರೆಂಚ್ ಸಂಸ್ಥೆ ಸಫ್ರಾನ್ ಜತೆಗೆ ಜಂಟಿಯಾಗಿ ಹೆಲಿಕಾಪ್ಟರ್ ಎಂಜಿನ್‍ಗಳನ್ನು ವಿನ್ಯಾಸಗೊಳಿಸುವ ಮತ್ತು ಅಭಿವೃದ್ಧಿಪಡಿಸುವ ಕೆಲಸವನ್ನು ಎಚ್‍ಎಎಲ್ ಪ್ರಾರಂಭಿಸಲು ಸಿದ್ಧವಾಗಿದೆ. ಅದೇ ರೀತಿ, ಅಮೆರಿಕನ್ ಸಂಸ್ಥೆ ಜಿಇ ಏರೋಸ್ಪೇಸ್‍ನೊಂದಿಗೆ ದೇಶದಲ್ಲಿ ಫೈಟರ್ ಜೆಟ್ ಎಂಜಿನ್‍ಗಳ ಜಂಟಿ ಉತ್ಪಾದನೆಯ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆ ನಡೆಸಿದೆ.

ಭಾರತೀಯ ವಾಯುಪಡೆಯ ಫೈಟರ್ ಜೆಟ್‍ಗಳು ಮತ್ತು ತರಬೇತುದಾರರಿಗೆ ಅಗತ್ಯಗಳನ್ನು ಪೂರೈಸಲು ಎಲ್‍ಸಿಎ ಎಂಕೆ-1ಎ ಮತ್ತು ಹಿಂದೂಸ್ತಾನ್ ಟರ್ಬೊ ಟ್ರೈನರ್-40 (ಎಚ್‍ಟಿಟಿ-40) ವಿಮಾನಗಳಿಗಾಗಿ ನಾಸಿಕ್‍ನಲ್ಲಿ ಹೊಸ ಉತ್ಪಾದನಾ ಘಟಕವನ್ನು ಸಕ್ರಿಯಗೊಳಿಸಲು ಎಚ್‍ಎಎಲ್ ಸಿದ್ಧತೆ ನಡೆಸುತ್ತಿದೆ.

ಎಂಕೆ -1ಎ ತಯಾರಿಕೆ ಮಾಡುವ ಹೊಸ ಸ್ಥಾವರವು 2021 ರ ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆಯಿಂದ 48,000 ಕೋಟಿ ರೂಪಾಯಿ ಮೌಲ್ಯದ ಆರ್ಡರ್ ಪಡೆದುಕೊಂಡಿದೆ. ಇದರಂತೆ ಎಚ್‍ಎಎಲ್, 83 ಎಂಕೆ 1ಎ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಬೇಕಾಗಿದೆ.

ಬಿಜೆಪಿಯಲ್ಲಿ ನಿಲ್ಲದ ಬಡಿದಾಟ: ದೆಹಲಿಯತ್ತ ಅತೃಪ್ತರ ಬಣ

ಇದಲ್ಲದೆ ಇನ್ನೂ 97 ಎಂಕೆ 1 ಎಎಸ್ ಖರೀದಿಗೆ ಭಾರತೀಯ ವಾಯುಪಡೆ ಯೋಜಿಸುತ್ತಿದೆ ಎಂದು ಅಕ್ಟೋಬರ್ ತಿಂಗಳಲ್ಲಿ ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಘೋಷಿಸಿದ್ದರು. ಈ ಒಪ್ಪಂದದ ಮೌಲ್ಯ 67,000 ಕೋಟಿ ರೂಪಾಯಿ.

ಎಚ್‍ಎಎಲ್ ಬೆಂಗಳೂರಿನಲ್ಲಿ ಪ್ರತಿ ವರ್ಷ 16 ಎಂಕೆ -1 ಎ ಲಘು ಸಮರ ವಿಮಾನ ನಿರ್ಮಿಸುವ ಸಾಮಥ್ರ್ಯವನ್ನು ಹೊಂದಿದೆ. ಅದೇ ರೀತಿ, ನಾಸಿಕ್ ಎಚ್‍ಎಎಲ್ 24 ಎಂಕೆ -1 ಎ ಲಘು ಸಮರ ವಿಮಾನ ಉತ್ಪಾದಿಸುವ ಸಾಮಥ್ರ್ಯವನ್ನು ಹೊಂದಿದೆ.

ಹೈದರಾಬಾದ್‍ಗೆ ತೆರಳಿದ ಮೋದಿ: ಇನ್ನು ಮೋದಿಯವರು ಎಚ್‍ಎಎಲ್ ಉತ್ಪಾದನಾ ಘಟಕದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಅವರು ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಳ್ಳಲು ಹೈದರಾಬಾದ್‍ಗೆ ತೆರಳಿದರು.

RELATED ARTICLES

Latest News