Monday, May 13, 2024
Homeಕ್ರೀಡಾ ಸುದ್ದಿಕೆಕೆಆರ್ ತಂಡದಿಂದ ಆ್ಯಂಡ್ರೂ ರಸೆಲ್‍ಗೆ ಕೊಕ್

ಕೆಕೆಆರ್ ತಂಡದಿಂದ ಆ್ಯಂಡ್ರೂ ರಸೆಲ್‍ಗೆ ಕೊಕ್

ಬೆಂಗಳೂರು, ನ.25- ಹದಿನೇಳನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮಿನಿ ಹರಾಜಿಗೆ ಆಟಗಾರರನ್ನು ಬಿಡುಗಡೆಗೊಳಿಸಲು ನಾಳೆ (ನವೆಂಬರ್ 26) ಅಂತಿಮ ದಿನವಾಗಿದ್ದು,ಎಲ್ಲಾ 10 ತಂಡಗಳ ಫ್ರಾಂಚೈಸಿಗಳು ತಮ್ಮ ಆಟಗಾರರನ್ನು ಹರಾಜಿಗೆ ಬಿಟ್ಟುಕೊಡಲು ಸಿದ್ಧತೆ ನಡೆಸಿದ್ದಾರೆ.

2012 ಹಾಗೂ 2014ರ ಆವೃತ್ತಿಗಳಲ್ಲಿ ಟ್ರೋಫಿ ಗೆದ್ದಿರುವ ಬಾಲಿವುಡ್ ಸ್ಟಾರ್ ಶಾರುಖ್‍ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ತನ್ನ ತಂಡದಿಂದ ಕೆಲವು ಆಟಗಾರರನ್ನು ಮಿನಿ ಹರಾಜಿಗೆ ಬಿಟ್ಟುಕೊಡಲು ಹೊರಟಿದ್ದು ಸ್ಟಾರ್ ಆಟಗಾರ, ವೆಸ್ಟ್ ಇಂಡೀಸ್ ದೈತ್ಯ ಆಂಡ್ರೂ ರಸೆಲ್‍ಗೆ ಕೊಕ್ ನೀಡುವ ಸಾಧ್ಯತೆಗಳು ದಟ್ಟವಾಗಿವೆ.

ಕಳೆದ 4 ಆವೃತ್ತಿಗಳಲ್ಲಿನ ರಸೆಲ್ ಅವರ ಪ್ರದರ್ಶನವನ್ನು ಪರಿಗಣಿಸಿದರೆ 2019ರಲ್ಲಿ 510 ರನ್ ಗಳಿಸಿದ್ದ ರಸೆಲ್, ನಂತರದ ಆವೃತ್ತಿಗಳಲ್ಲಿ 300 ರನ್‍ಗಳನ್ನು ಗಳಿಸಲು ಪರದಾಟ ನಡೆಸಿದ್ದಾರೆ.

ಡಿ.1ರಿಂದ ವಾಹನಗಳಲ್ಲಿ ತುರ್ತು ಪ್ಯಾನಿಕ್ ಬಟನ್ ಅಳವಡಿಕೆಗೆ ಆದೇಶ

ಅಲ್ಲದೆ 2020 ರಿಂದ ಕೇವಲ 2 ಫಿಫ್ಟಿಯನ್ನು ಮಾತ್ರ ಗಳಿಸಲು ರಸೆಲ್ ಶಕ್ತರಾಗಿದ್ದಾರೆ. ಟಿ 20 ವಿಶ್ವಕಪ್ ವಿಜೇತ ಆಟಗಾರ 2023ರ ಐಪಿಎಲ್ ಆವೃತ್ತಿಯಲ್ಲಿ 227 ರನ ಹಾಗೂ 7 ವಿಕೆಟ್ ಪಡೆದಿದ್ದು ನಿರಾಸ ಪ್ರದರ್ಶನ ತೋರಿದ್ದರಿಂದ 2024ರ ಮಿನಿ ಹರಾಜಿಗೆ ಅವರನ್ನು ಬಿಟ್ಟುಕೊಡಲು ಫ್ರಾಂಚೈಸಿ ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಟ್ರೇಡ್ ಮೂಲಕ ಸೀಮ್ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ತಂಡದಿಂದ ಬಿಡುಗಡೆಗೊಳಿಸಿರುವ ಕೆಕೆಆರ್ ಫ್ರಾಂಚೈಸಿ, ನ್ಯೂಜಿಲೆಂಡ್‍ನ ವೇಗದ ಬೌಲರ್‍ಗಳಾದ ಲೋಕಿ ಫಗ್ರ್ಯುಸನ್ ಹಾಗೂ ಟಿಮ್ ಸೋಥಿಗೂ ಕೊಕ್ ಕೊಡುವ ಸಾಧ್ಯತೆಗಳಿವೆ.

RELATED ARTICLES

Latest News