Monday, May 6, 2024
Homeಮನರಂಜನೆರಣವೀರ್ ಸಿಂಗ್ ಡೀಪ್ ಫೇಕ್ ವಿಡಿಯೋ : ಎಕ್ಸ್ ಬಳಕೆದಾರರ ವಿರುದ್ಧ ಎಫ್ಐಆರ್

ರಣವೀರ್ ಸಿಂಗ್ ಡೀಪ್ ಫೇಕ್ ವಿಡಿಯೋ : ಎಕ್ಸ್ ಬಳಕೆದಾರರ ವಿರುದ್ಧ ಎಫ್ಐಆರ್

ಮುಂಬೈ, ಏ. 24 (ಪಿಟಿಐ) – ಕಾಂಗ್ರೆಸ್‍ಗೆ ಮತ ಹಾಕುವಂತೆ ನಟ ರಣವೀರ್ ಸಿಂಗ್ ಮನವಿ ಮಾಡುತ್ತಿರುವ ಡೀಪ್ ಫೇಕ್ ವೀಡಿಯೊವನ್ನು ಅಪ್‍ಲೋಡ್ ಮಾಡಿದ ಆರೋಪದ ಮೇಲೆ ಎಕ್ಸ್ ಬಳಕೆದಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಅಟ್‍ಸುಜಾತಾ ಇಂಡಿಯಾಫಸ್ಟ್ ಎಂಬ ಬಳಕೆದಾರರ ವಿರುದ್ಧ ನಟನ ತಂದೆ ಜುಗ್ಜೀತ್ ಸಿಂಗ್ ಭಾವನಾನಿ ಅವರು ನೀಡಿದ ದೂರಿನ ಮೇರೆಗೆ ಎಫ್ ಐಆರ್ ದಾಖಲಿಸಲಾಗಿದೆ.ಫ್ಯಾಷನ್ ಷೋ ಒಂದರಲ್ಲಿ ಮಾತನಾಡಿದ್ದ ಸಿಂಗ್ ಅವರು, ನಮ್ಮ ಶ್ರೀಮಂತ ಸಂಸ್ಕøತಿ, ಪರಂಪರೆ, ಇತಿಹಾಸ ಮತ್ತು ಪರಂಪರೆಯನ್ನು ಆಚರಿಸುವುದು ಮೋದಿ ಜಿ ಅವರ ಉದ್ದೇಶ ಮತ್ತು ಗುರಿಯಾಗಿದೆ ಏಕೆಂದರೆ ನಾವು ಆಧುನಿಕತೆಯತ್ತ ವೇಗವಾಗಿ ಮುನ್ನಡೆಯುತ್ತಿದ್ದೇವೆ ಆದರೆ ನಮ್ಮ ಬೇರುಗಳು, ನಮ್ಮ ಸಾಂಸ್ಕøತಿಕ ಪರಂಪರೆಯನ್ನು ನಾವು ಎಂದಿಗೂ ಮರೆಯಬಾರದು ಎಂದು ಹೇಳಿದ್ದರು.

ಆದರೆ ಅವರ ಮಾತನ್ನು ಡೀಪ್ ಫೇಕ್ ವೀಡಿಯೊ ಮಾಡಿ ಅದರಲ್ಲಿ ನಟ ನಮ್ಮ ನೋವಿನ ಜೀವನ, ಭಯ ಮತ್ತು ನಿರುದ್ಯೋಗವನ್ನು ಆಚರಿಸುವುದು ಮೋದಿ ಜಿ ಅವರ ಉದ್ದೇಶ ಮತ್ತು ಗುರಿಯಾಗಿದೆ ಏಕೆಂದರೆ ನಾವು ಅನ್ಯಾಯದ ಕಡೆಗೆ ಸಾಗುತ್ತಿದ್ದೇವೆ ಆದರೆ ನಾವು ಎಂದಿಗೂ ನಮ್ಮ ಬಗ್ಗೆ ಕೇಳುವುದನ್ನು ನಿಲ್ಲಿಸಬಾರದು. ಅಭಿವೃದ್ಧಿ ಮತ್ತು ನ್ಯಾಯ, ನ್ಯಾಯಕ್ಕಾಗಿ ಮತ ನೀಡಿ, ಕಾಂಗ್ರೆಸ್‍ಗೆ ಮತ ಚಲಾಯಿಸಿ ಬದಲಾಯಿಸಲಾಗಿದೆ ಎಂದು ಎಫ್ ಐಆರ್‍ನಲ್ಲಿ ಆರೋಪಿಸಲಾಗಿದೆ.

ರಣವೀರ್ ಸಿಂಗ್ ಎಂದಿಗೂ ಈ ರೀತಿ ಹೇಳಿಲ್ಲ ಮತ್ತು ಅವರಿಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅವರ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಎಫ್ ಐಆರ್ 417 (ವಂಚನೆ), 468 (ವಂಚನೆಯ ಉದ್ದೇಶಕ್ಕಾಗಿ ನಕಲಿ) ಮತ್ತು 469 (ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶಕ್ಕಾಗಿ ನಕಲಿ), ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳು ಸೇರಿದಂತೆ ಸಂಬಂಧಿತ ಭಾರತೀಯ ದಂಡ ಸಂಹಿತೆಯ ಸೆಕ್ಷನ್‍ಗಳ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News