Friday, May 24, 2024
Homeಬೆಂಗಳೂರುಬೆಂಗಳೂರಿನಲ್ಲಿ ರಂಜಾನ್ ಫುಡ್ ಮೇಳಕ್ಕೆ ಬ್ರೇಕ್

ಬೆಂಗಳೂರಿನಲ್ಲಿ ರಂಜಾನ್ ಫುಡ್ ಮೇಳಕ್ಕೆ ಬ್ರೇಕ್

ಬೆಂಗಳೂರು,ಮಾ.14- ನಗರದ ಅತಿದೊಡ್ಡ ರಂಜಾನ್ -ಫುಡ್ ಮೇಳಕ್ಕೆ ಬಿಬಿಎಂಪಿ ಬ್ರೇಕ್ ಹಾಕಿದೆ. ರಂಜಾನ್ ಹಬ್ಬದ ಅಂಗವಾಗಿ ಫ್ರೇಜರ್ ಟೌನ್ನಲ್ಲಿರುವ ಕಾಕ್ಸ್‌ಟೌನ್‌ನಲ್ಲಿ ರಂಜಾನ್ -ಫುಡ್ ಮೇಳ ಆಯೋಜಿಸಲಾಗಿತ್ತು.

ರಾತ್ರಿ ಒಂದು ಗಂಟೆಯವರೆಗೂ ನಡೆಯುತ್ತಿದ್ದ ರಂಜಾನ್ ಫುಡ್ ಮೇಳೆ ಸ್ಥಳೀಯರ ಕಿರಿಕಿರಿಗೆ ಕಾರಣವಾಗಿತ್ತು ಅಲ್ಲದೆ, ರಾತ್ರಿಯಿಡಿ ಟ್ರಾಫಿಕ್ ಜಾಮ್ ಆಗುತಿತ್ತು. ಹೀಗಾಗಿ ಈ -ಫುಡ್ ಮೇಳಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು ಮಾತ್ರವಲ್ಲ, ಬ್ಯಾನ್ ಫುಡ್ ಮೇಳ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಲಾಗಿತ್ತು.

ಅದರಲ್ಲೂ ಸ್ಥಳೀಯ ಮುಸ್ಲಿಮರಿಂದಲೇ -ಫುಡ್ ಮೇಳಕ್ಕೆ ಭಾರೀ ವಿರೋಧ ವ್ಯಕ್ತವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಮೇಳ ನಡೆಸದಂತೆ ಸಂಘಟಕರಿಗೆ ನೋಟೀಸ್ ಜಾರಿ ಮಾಡಿದೆ.

RELATED ARTICLES

Latest News