ಹೈದರಾಬಾದ್,ಡಿ.25-ನಿಮ್ಮ ಮೈತ್ರಿ ನಾಯಕರು ಭಾರತದ ಜನರನ್ನುವಿಭಸುವ ರೀತಿ ಮಾತನಾಡುತ್ತಿದ್ದಾರೆ,ನೀವು ಭಾರತ್ ಜೋಡೋ ಯಾತ್ರೆಯ ಬಗ್ಗೆ ಸಾಕಷ್ಟು ಮಾತಾಡ್ತೀರಾ ಈಗ ನಿಮ್ಮವರ ಬಗ್ಗೆ ಏನನ್ನೂ ಹೇಳದೆ ಸುಮ್ಮನಿದ್ದೀರಲ್ಲ ಎಂದು ರಾಹುಲ್ ಗಾಂಧಿಗೆ ಬಿಆರ್‍ಎಸ್ ನಾಯಕಿ ಕೆ.ಕವಿತಾ ಕಳೆಲೆದಿದ್ದಾರೆ.
ಹಿಂದೆ ಸನಾತನ ದರ್ಂದ ಮೇಲೆ ಈಗ ಹಿಂದಿ ಬಾಷಿಗರ ಮೇಲೆ ಡಿಎಂಕೆ ನಾಯಕರ ಹೇಳಿಕೆ ಭಾರಿ ಟೀಕೆಗೆ,ಚರ್ಚೆಯ ನಡುವೆ, ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಮೌನವನ್ನು ಪ್ರಶ್ನಿಸಿದ್ದಾರೆ. ಇದು ನಿರ್ದಿಷ್ಟ ಪಕ್ಷದ ಅಭಿಪ್ರಾಯಗಳ ಬಗ್ಗೆ ಅಲ್ಲ, ಈ ರೀತಿಯ ಹೇಳಿಕೆಗಳು ನಮ್ಮ ರಾಷ್ಟ್ರದ ಕ್ಕೂಟ ವ್ಯವಸ್ಥೆಯನ್ನುಹಾಳುಮಾಡುತ್ತವೆ ಮತ್ತು ಈ ನಿರ್ದಿಷ್ಟ ಪಕ್ಷವು ಯಾವ ಮೈತ್ರಿಕೂಟದ ಭಾಗವಾಗಿದೆ ಎಂಬುದರ ಬಗ್ಗೆ ಗಮನಿಸಬೇಕಿದೆ. ಇದು ರಾಹುಲ್ ಗಾಂಧಿಯವರ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್‍ನ ಒಂದು ಭಾಗವಲ್ಲವಾ ಎಂದು ಪ್ರಶ್ನಿಸಿದರು.
ಜಮ್ಮು-ಕಾಶ್ಮೀರದಲ್ಲಿ ಭಾರೀ ಚಳಿ, ಹೆಪ್ಪುಗಟ್ಟಿದ ದಾಲ್ ಸರೋವರ
ರಾಹುಲ್ ಗಾಂಧಿ ಅವರು ನಿರಂತರವಾಗಿ ಭಾರತ್ ಜೋಡೋ ಯಾತ್ರೆಯ ಬಗ್ಗೆ ಸಾಕಷ್ಟು ಹೇಳಿಕೆಗಳನ್ನು ನೀಡುತ್ತಿದ್ದಾರೆ, ಅಲ್ಲಿ ಅವರು ರಾಷ್ಟ್ರವನ್ನು ಒಂದುಗೂಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ ಆದರೆ ಅದು ಕೇವಲ ಸ್ಟಂಟ್‍ನಂತೆ ತೋರುತ್ತಿದೆ ಏಕೆಂದರೆ ಡಿಎಂಕೆ ನಾಯಕರು ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡುತ್ತಿದ್ದಾಗಲೆ ಎದ್ದುನಿಂತು ಮಾತನಾಡಬೇಕಿತ್ತು ಆಗಲಿಲ್ಲ ಈಗ ಮತ್ತೊಂದು ಅವಾಂತರ ಮಾಡಿದ್ದಾರೆ ಮೌನವಾಗಿದ್ದಾರೆ ಇದು ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಅವರು ಕವಿತಾ ಹೇಳಿದರು.