Saturday, April 27, 2024
Homeರಾಷ್ಟ್ರೀಯಕೆ.ಕವಿತಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಕೆ.ಕವಿತಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ನವದೆಹಲಿ,ಮಾ.26- ದೆಹಲಿ ಅಬಕಾರಿ ನೀತಿ ಪರಿಷ್ಕರಣೆ ಪ್ರಕರಣದಲ್ಲಿ ಜಾರಿನಿರ್ದೇಶನಾಲಯದಿಂದ ಬಂಧನಕ್ಕೊಳಪಟ್ಟಿರುವ ಬಿಆರ್ಎಸ್ ಪಕ್ಷದ ನಾಯಕಿ ಕೆ.ಕವಿತಾ ಅವರ ಬಂಧನದ ಅವಧಿಯನ್ನು ನ್ಯಾಯಾಲಯ ಏಪ್ರಿಲ್ 9ರವೆಗೆ ವಿಸ್ತರಿಸಿದೆ.

ಬಂಧನದ ಅವಧಿ ಮುಗಿದ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ಇಂದು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಏಪ್ರಿಲ್ 1ರಂದು ವಿಚಾರಣೆ ನಡೆಸಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆಗೆ ಕವಿತಾ ಅವರನ್ನು ವಿಚಾರಣೆಗೊಳಪಡಿಸಲು ಅವಧಿಯನ್ನು ವಿಸ್ತರಿಸುವಂತೆ ಇಡಿ ಅಧಿಕಾರಿಗಳು ಮನವಿ ಮಾಡಿಕೊಂಡರು.

ಇದನ್ನು ಮನ್ನಿಸಿದ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಏ.1ಕ್ಕೆ ನಿಗದಿಪಡಿಸಿ 9ರವರೆಗೂ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿತು. ಇದಕ್ಕೂ ಮುನ್ನ ಕವಿತಾ ಅವರ ಪರ ವಕೀಲರು, ನಮ್ಮ ಕಕ್ಷಿದಾರರ ಅಪ್ರಾಪ್ತ ಮಗುವಿನ ಪರೀಕ್ಷೆಯ ಆಧಾರದ ಮೇಲೆ ಮಧ್ಯಂತರ ಜಾಮೀನು ಕೋರಿದರು.

ರಿಮಾಂಡ್ ಅವಧಿಯಲ್ಲಿ ಇಡಿ ಬಿಆರ್ಎಸ್ ನಾಯಕಿ ಕವಿತಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ, ಅವರನ್ನು ವಿಚಾರಣೆಗೊಳಪಡಿಸಿದ್ದು, ಹಲವಾರು ವ್ಯಕ್ತಿಗಳು ಮತ್ತು ಡಿಜಿಟಲ್ ದಾಖಲೆಗಳೊಂದಿಗೆ ವಿಚಾರಣೆಯನ್ನು ನಡೆಸಲಾಗಿದೆ ಎಂದು ಇಡಿ ನ್ಯಾಯಾಲಯದ ಗಮನಕ್ಕೆ ತಂದಿತು. ಈ ಹಿಂದೆ ವಿಶೇಷ ನ್ಯಾಯಾೀಧಿಶ ಕಾವೇರಿ ಬವೇಜಾ ಅವರು ಇಡಿ ವಿಚಾರಣೆಗೆ ಅವಕಾಶ ನೀಡಿದ್ದರು.

ಕವಿತಾ ಬಂಧನ:
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) 100 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಾವತಿಸಿದ ಆರೋಪ ಎದುರಿಸುತ್ತಿರುವ ಸೌತ್ ಗ್ರೂಪ್ನ ಪ್ರಮುಖ ಸದಸ್ಯೆ ಎಂದು ಇಡಿ ಆರೋಪಿಸಿದೆ.

ಇದಕ್ಕೂ ಮುನ್ನ ಕೋರ್ಟ್ ಹಾಲ್ಗೆ ಪ್ರವೇಶಿಸಿದ ಬಿಆರ್ಎಸ್ ಎಂಎಲ್ಸಿ, ಇದು ಅಕ್ರಮ ಹಣ ವರ್ಗಾವಣೆ ಪ್ರಕರಣವಲ್ಲ, ರಾಜಕೀಯ ಅಕ್ರಮ ಹಣ ವರ್ಗಾವಣೆ ಪ್ರಕರಣ. ಇದೊಂದು ಕಪೊಲಕಲ್ಪಿತ ಮತ್ತು ಸುಳ್ಳು ಪ್ರಕರಣ. ನಾವು ಸ್ವಚ್ಛವಾಗಿ ಹೊರಬರುತ್ತೇವೆ ಎಂದು ವಿಶ್ವಾಸದಿಂದ ಹೇಳಿದ್ದರು.

ಮಾರ್ಚ್ 23ರಂದು ಕವಿತಾ ಅವರ ಸೋದರಳಿಯ ಮೇಕಾ ಶ್ರೀ ಶರಣ್ ರಾವ್ ಮತ್ತು ಸೊಸೆ ಅಖಿಲಾ ಅವರ ಮನೆಗಳ ಮೇಲೆ ಇಡಿ ದಾಳಿ ನಡೆಸಿತ್ತು. ಮೂಲಗಳ ಪ್ರಕಾರ ಇಡಿ ಕವಿತಾ ಅವರ ಕುಟುಂಬ ಸದಸ್ಯರನ್ನೂ ಬಂಧಿಸುವ ಸಾಧ್ಯತೆಯಿದೆ.

RELATED ARTICLES

Latest News