Friday, May 3, 2024
Homeರಾಜ್ಯನಿವೃತ್ತ ಐಎಎಸ್ ಆಧಿಕಾರಿ, ನಟ ಕೆ.ಶಿವರಾಮ್ ಇನ್ನಿಲ್ಲ

ನಿವೃತ್ತ ಐಎಎಸ್ ಆಧಿಕಾರಿ, ನಟ ಕೆ.ಶಿವರಾಮ್ ಇನ್ನಿಲ್ಲ

ಬೆಂಗಳೂರು, ಫೆ.29- ಕೆಲ ದಿನಗಳಿಂದ ಆಸ್ಪತ್ರೆ ಸೇರಿದ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ, ನಟ, ರಾಜಕಾರಣಿ ಕೆ.ಶಿವರಾಮ್ ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ಹೃದಯಾಘಾತದಿಂದ ಇಹಲೋಕ ತೆಜಿಸಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಕನ್ನಡ ದಲ್ಲಿ ಐಎಎಸ್ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಹಿರಿಮೆಗೆ ಪಾತ್ರರಾಗಿದ್ದ ಶಿವರಾಮ್ ಅವರಿಗೆ ಕಳೆದ 6 ದಿನಗಳ ಹಿಂದೆ ರಕ್ತದ ಒತ್ತಡ ದಲ್ಲಿ ಏರಿಳಿತವಾಗಿ ಹೃದಯಾಘಾತದವಾಗಿತ್ತು.ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಇವರು ಚಿಕಿತ್ಸೆಗೆ ಸ್ಪಂದಿಸದೆ ಮತ್ತೊಮ್ಮೆ ಹೃದಯಾಘಾತವಾಗಿ ಇಹಲೋಹ ತ್ಯಜಿಸಿದ್ದಾರೆ.

ಇವರು ಐಎಎಸ್ ಅಧಿಕಾರಿಯಾಗಿ ಜನಮನ್ನಣೆ ಗಳಿಸಿದ್ದಷ್ಟೇ ಅಲ್ಲದೆ ಸಿನಿಮಾ ರಂಗದಲ್ಲೂ ನಾಡಿನ ಮನೆ ಮಾತಾಗಿದ್ದವರು. ಅವರು ಅಭಿನಯಿಸಿದ ಬಾ ನಲ್ಲೆ ಮಧು ಚಂದ್ರಿಕೆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹೆಸರು ತಂದು ಕೊಟ್ಟಿತ್ತು. ನಂತರ ಅನೇಕ ಪಾತ್ರೆಗಳ ಮೂಲಕ ಜನರ ಹತ್ತಿರವಾಗಿದ್ದರು

ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿಯಾದ ನಂತರ. ರಾಜಕಾರಣಿ ಆಗಬೇಕೆಂಬ ಹಂಬಲದೊಂದಿಗೆ ಬಿಜೆಪಿ ಪಕ್ಷ ಸೇರಿಕೊಂಡರು . ಛಲವಾದಿ ಮಹಾಸಭಾವನ್ನು ಹುಟ್ಟು ಹಾಕಿ ಕೆಳ ಸಮುದಾಯಕ್ಕೆ ಆಸರೆಯಾದರು. ಲೋಕಸಭೆ ಗೆ ಸ್ಪರ್ಧಿಸಿದ್ದರು. ಮೊದಲ ಪ್ರಯತ್ನದಲ್ಲಿ ಸೋಲು ಕಂಡಿದ್ದರು.

ಈ ಬಾರಿ ಬಿಜೆಪಿಯಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ತಯಾರಿ ಮಾಡಿಕೊಂಡಿದ್ದರು. ಸುಮಾರು ಮೂರ್ನಾಲ್ಕು ತಿಂಗಳಿಂದ ಪ್ರವಾಸ ಮಾಡಿ ಬಳಲಿದ್ದರು. ವಾರದ ಹಿಂದೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ದರು. ಅವರನ್ನು ಬದುಕಿಸುವ ಎಲ್ಲಾ ಪ್ರಯತ್ನ ವಿಫಕವಾಗಿ ಇಹಲೋಕ ತ್ಯಜಿಸಿದ್ದಾರೆ.

ಬೆಳಗ್ಗೆ 9 ಗಂಟೆಯಿಂದ ಮದ್ಯಾಹ್ನ 3 ಗಂಟೆಯ ತನಕ ರವೀಂದ್ರ ಕಲಾಕ್ಷೇತ್ರದಲ್ಲಿ ಕೆ. ಶಿವರಾಮ್ ಅವರ ಪಾರ್ಥೀವ ಶರೀರವನ್ನು ಅಂತಿ‌ಮ ದರ್ಶನಕ್ಕೆ ಇಡಲಾಗುವುದು ಎಂದು ಅವರ ಅಳಿಯ ಹಾಗು ನಟ ಪ್ರದೀಪ್ ತಿಳಿಸಿದ್ಸಾರೆ.ಸಿನಿಮಾ ,ರಾಜಕಾರಣ ಮತ್ತು ಆಡಳಿತ ಕ್ಷೇತ್ರದಲ್ಲಿ ಅವರ ಸ್ನೇಹಿತರು, ಒಡನಾಡಿಗಳು ಮತ್ತು ಅಭಿಮಾನಿಗಳಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಿದ ನಂತರ ಸಂಜೆ ಎಲ್ಲಿ ಅಂತ್ಯಕ್ರಿಯೆ ನಡೆಸಯವ ಬಗ್ಗೆ ನಿರ್ದಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೆನ್ನೆ ಆಸ್ಪತ್ರೆಗೆ ಹೋಗಿ ಸಂತಾಪ ಸೂಚಿಸಿದ್ದರು. ಇವರ ಅಕಾಲಿಕ ಆಗಲಿ ನಾಡಿನ ಸಿರಿಗಣ್ಯರು ಮತ್ತು ರಾಜಕಾರಣಿಗಳು ಕಂಬನಿ ಮಿಡಿದಿದ್ದಾರೆ

RELATED ARTICLES

Latest News