Thursday, December 12, 2024
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಪ್ರವಾಸಕ್ಕೆ ಬಂದಿದ್ದ ಬಸ್‌‍ ಪಲ್ಟಿ, ಮಕ್ಕಳಿಗೆ ಗಾಯ

ಪ್ರವಾಸಕ್ಕೆ ಬಂದಿದ್ದ ಬಸ್‌‍ ಪಲ್ಟಿ, ಮಕ್ಕಳಿಗೆ ಗಾಯ

Bus Accident

ಮೈಸೂರು,ನ.27- ಪ್ರವಾಸ ಬಂದಿದ್ದ ಶಾಲಾ ಮಕ್ಕಳಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌‍ ಪಲ್ಟಿಯಾದ ಘಟನೆ ನಗರದಲ್ಲಿ ಕಳೆದ ರಾತ್ರಿ ನಡೆದಿದೆ.ಚಾಲಕನ ಅಜಾಗರೂಕತೆಯಿಂದ ಡಿವೈಡರ್‌ಗೆ ಡಿಕ್ಕಿಯಾಗಿ ಬಸ್‌‍ ಮಗುಚಿ ಬಿದ್ದಿದೆ.

ಬಸ್‌‍ನಲ್ಲಿದ್ದ 36 ಮಕ್ಕಳ ಪೈಕಿ 11 ಮಕ್ಕಳು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಗರ ಪೊಲೀಸ್‌‍ ಕಮಿಷನರ್‌ ಸೀಮಾ ಲಾಟ್ಕರ್‌ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರದ ಶಾಂತಿನಿಕೇತನ ಶಾಲೆಯ ಮಕ್ಕಳು ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದರು. ಪ್ರವಾಸಿ ತಾಣಗಳನ್ನು ವೀಕ್ಷಿಸಿ ವಾಪಸ್‌‍ ತೆರಳುವಾಗ ಈ ಅಪಘಾತ ನಡೆದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ಮಕ್ಕಳನ್ನು ಕೆ.ಆರ್‌.ಆಸ್ಪತ್ರೆ ಮತ್ತು ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಯಾರೂ ಭಯಪಡುವ ಅವಶ್ಯಕತೆ ಇಲ್ಲ ಎಂದು ಸೀಮಾ ಲಾಟ್ಕರ್‌ ತಿಳಿಸಿದರು.

RELATED ARTICLES

Latest News