Thursday, December 5, 2024
Homeಕ್ರೀಡಾ ಸುದ್ದಿ | Sportsಕುಸ್ತಿಪಟು ಬಜರಂಗ್‌ ಪುನಿಯಾಗೆ 4 ವರ್ಷ ನಿಷೇಧ

ಕುಸ್ತಿಪಟು ಬಜರಂಗ್‌ ಪುನಿಯಾಗೆ 4 ವರ್ಷ ನಿಷೇಧ

NADA bans star wrestler Bajrang Punia for four years

ನವದೆಹಲಿ,ನ.27– ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ಎನ್‌ಎಡಿಎ) ಕುಸ್ತಿಪಟು ಬಜರಂಗ್‌ ಪುನಿಯಾ ಅವರನ್ನು ನಾಲ್ಕು ವರ್ಷಗಳ ಕಾಲ ನಿಷೇಧ ಹೇರಿದೆ. ಮಾರ್ಚ್‌ 10 ರಂದು ಸೋನೆಪತ್‌ನಲ್ಲಿ ನಡೆದ ರಾಷ್ಟ್ರೀಯ ತಂಡದ ಆಯ್ಕೆಗೆ ನಡೆದ ಟ್ರಯಲ್ಸ್ ನಲ್ಲಿ ಆಯ್ಕೆಯಾದ ನಂತರ ಪುನಿಯಾ ಮೂತ್ರದ ಮಾದರಿಯನ್ನು ಪರೀಕ್ಷೆಗೆ ನೀಡಲಿ ನಿರಾಕರಿಸಿದರು. ಇದನ್ನು ನಿಯಮ ಬಾಹಿರ ಎಂದು ಪರಿಗಣಿಸಿರುವ ನಾಡಾ ಪೂನಿಯಾರನ್ನು ನಾಲ್ಕು ವರ್ಷಗಳ ಕಾಲ ನಿಷೇಧ ಮಾಡಿದೆ.

ಕಳೆದ ಏಪ್ರಿಲ್‌ 23ರಂದು ಪುನಿಯಾರನ್ನು ನಾಡಾ ಮೊದಲ ಬಾರಿಗೆ ಅಮಾನತುಗೊಳಿಸಿತ್ತು. ನಂತರ ವಿಶ್ವ ಕುಸ್ತಿ ಆಡಳಿತ ಮಂಡಳಿ ಸಹ ಅವರನ್ನು ಅಮಾನತುಗೊಳಿಸಿತ್ತು. ಇದರ ವಿರುದ್ಧ ಪುನಿಯಾ ಮೇಲನವಿ ಸಲ್ಲಿಸಿದ್ದರು. ಆದ್ರೆ ನಾಡಾದ ಆಂಟಿ-ಡಿಸಿಪ್ಲಿನರಿ ಡೋಪಿಂಗ್‌ ಪ್ಯಾನೆಲ್‌ ಮುಂದಿನ ಸೂಚನೆ ನೀಡುವವರೆಗೆ ಮೇಲನವಿಯನ್ನು ರದ್ದುಗೊಳಿಸಿತ್ತು.

ನಾಡಾಗೆ ಮೂತ್ರ ಮಾದರಿಯನ್ನು ನೀಡದೇ ಇದ್ದದ್ದು ಏಕೆ? ಎಂದು ಜೂನ್‌ 23 ರಂದು ಕುಸ್ತಿಪಟುಗೆ ನೋಟಿಸ್‌‍ ನೀಡಿತ್ತು. ಸೆ.20 ಮತ್ತು ಅ.4 ರಂದು ವಿಚಾರಣೆ ನಡೆಸಲಾಗಿತ್ತು. ಇದೀಗ ಆದೇಶ ಪ್ರಕಟಿಸಿರುವ ಎಡಿಡಿಪಿ, ಕಲಂ 10.3.1 ರ ಅಡಿಯಲ್ಲಿ ನಿರ್ಬಂಧಗಳಿಗೆ ಅಥ್ಲೀಟ್‌ ಹೊಣೆಗಾರನಾಗಿರುತ್ತಾನೆ ಮತ್ತು 4 ವರ್ಷಗಳ ಅವಧಿಗೆ ಅನರ್ಹತೆಗೆ ಹೊಣೆಗಾರನಾಗಿರುತ್ತಾನೆ ಎಂದು ಹೇಳಿದೆ.

ಈ ಸಂದರ್ಭದಲ್ಲಿ ಬಜರಂಗ್‌ ಪುನಿಯಾ ಸ್ಪರ್ಧಾತಕ ಕುಸ್ತಿಗೆ ಮರಳಲು ಮತ್ತು ವಿದೇಶದಲ್ಲಿ ಕೋಚಿಂಗ್‌ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ಸಹ ತನ್ನ ಆದೇಶದಲ್ಲಿ ತಿಳಿದಿದೆ.

ಕೆಲ ದಿನಗಳ ಹಿಂದೆಯಷ್ಟೇ ವಿನೇಶ್‌ ಫೋಗಟ್‌, ಬಜರಂಗ್‌ ಪುನಿಯಾ ಕಾಂಗ್ರೆಸ್‌‍ ಸೇರ್ಪಡೆಯಾದರು. ಆನಂತರ ಪೂನಿಯಾ ಅವರನ್ನ ಅಖಿಲ ಭಾರತ ಕಿಸಾನ್‌ ಕಾಂಗ್ರೆಸ್‌‍ನ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದಕ್ಕೂ ಮುನ್ನ ಅವರು ರೈಲ್ವೆ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.

RELATED ARTICLES

Latest News