Friday, October 11, 2024
Homeರಾಜಕೀಯ | Politicsಸಿಎಂ ಸ್ಥಾನ ಪಲ್ಲಟ ಗ್ಯಾರಂಟಿ : ವಿಜಯೇಂದ್ರ ಭವಿಷ್ಯ

ಸಿಎಂ ಸ್ಥಾನ ಪಲ್ಲಟ ಗ್ಯಾರಂಟಿ : ವಿಜಯೇಂದ್ರ ಭವಿಷ್ಯ

BY Vijayendra

ಬೆಂಗಳೂರು,ಸೆ.25- ಮುಡಾ ಪ್ರಕರಣದಲ್ಲಿ ಹೈಕೋರ್ಟ್‌ ತನಿಖೆಗೆ ಆದೇಶ ನೀಡಿರುವ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಎಷ್ಟೇ ಬಂಡತನ ತೋರಿದರೂ ಮುಖ್ಯಮಂತ್ರಿ ಸ್ಥಾನ ಪಲ್ಲಟವಾಗುವುದು ಗ್ಯಾರಂಟಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ನಾನೇಕೆ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ನವರು ಪ್ರಶ್ನಿಸಿದ್ದಾರೆ. ನೀವು ಎಷ್ಟೇ ಬಂಡತನ ತೋರಿದರೂ ಮುಖ್ಯಮಂತ್ರಿ ಸ್ಥಾನ ಪಲ್ಲಟವಾಗುವುದು ದಿಟ. ಹೈಕೋರ್ಟ್‌ ತೀರ್ಪು ಬಂದ ನಂತರ ಆಡಳಿತಾರೂಢ ಕಾಂಗ್ರೆಸ್‌‍ನಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ ಎಂದು ಹೇಳಿದರು.

ಮುಡಾ ಹಗರಣದಲ್ಲಿ ಮೇಲ್ನೋಟಕ್ಕೆ ಸಿದ್ದರಾಮಯ್ಯನವರ ಕುಟುಂಬದವರು ಫಲಾನುಭವಿಗಳಾಗಿದ್ದಾರೆ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ತೀರ್ಪು ನೀಡಿದೆ. ಯಾವ ನೈತಿಕತೆ ಮೇಲೆ ಅವರು ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂದು ಪ್ರಶ್ನಿಸಿದರು.
ನಿನ್ನೆ ಹೈಕೋರ್ಟ್‌ ತಿರ್ಪು ನೀಡಿದೆ. ಸಿಎಂ ಗಮನಕ್ಕೆ ಬರದೆ ಇಷ್ಟು ದೊಡ್ಡ ಹಗರಣ ಆಗಲಿಕ್ಕೆ ಸಾಧ್ಯವಿಲ್ಲ. ಹೀಗಾಗಿ ಸಮಗ್ರ ತನಿಖೆ ಅಗತ್ಯವಿದೆ ಎಂದಿದೆ.

ತಪ್ಪು ಮಾಡಿಲ್ಲ ರಾಜೀನಾಮೆ ನೀಡಲ್ಲ ಎಂದಿದ್ದಾರೆ. ನ್ಯಾಯಾಲಯ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೂ ಸಿಎಂ ರಾಜಕೀಯ ಪ್ರೇರಿತ ಎನ್ನುತ್ತಾರೆ. ನ್ಯಾಯಾಲಯದ ತೀರ್ಪಿಗೆ ತಲೆದೂಗಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ನಾಯಕರು ಈಶ್ವರಪ್ಪ ಭೇಟಿ ಕುರಿತು ಮಾತನಾಡಿದ ಅವರು, ಯತ್ನಾಳ್‌ ಮತ್ತೆ ಯಾರು ಯಾರು ಹೋಗಿದ್ದರು ಗೊತ್ತಿಲ್ಲ.. ಅವರನ್ನೇ ಕೇಳಿ.. ನಾನು ಈಶ್ವರಪ್ಪ ಹೇಳಿಕೆ ಬಗ್ಗೆ ಮಾತನಾಡಬಾರದು ಅಂದುಕೊಂಡಿದ್ದೆ. ಬಹಳ ಕಾಳಜಿ ಇಟ್ಟುಕೊಂಡು ಬಿಜೆಪಿ ಪರವಾಗಿ ಮಾತನಾಡಿದ್ದಾರೆ ಈಶ್ವರಪ್ಪ ಎಂದರು.

ನಾವು ವಿಜಯೇಂದ್ರ ನಾಯಕತ್ವ ಒಪ್ಪಲ್ಲ ಎನ್ನುತ್ತಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರಿಂದ ಅವರ ಉಚ್ಚಾಟನೆ ಆಗಿದೆ. ಸ್ವಾತಂತ್ರವಾಗಿ ಸ್ಪರ್ಧೆ ಮಾಡಿದ್ದರು. ಪಕ್ಷಕ್ಕಾಗಿ ಸ್ಪರ್ಧೆ ಮಾಡಲಿಲ್ಲ, ಮಗನಿಗಾಗಿ ಆ ರೀತಿ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.ಈಶ್ವರಪ್ಪ ಕರೆತರುವ ಯಾವುದೇ ಪ್ರಯತ್ನ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿಲ್ಲ. ಒಂದು ವೇಳೆ ರಾಷ್ಟ್ರ ನಾಯಕರು ಕೇಳಿದರೆ ಮಾಹಿತಿ ನೀಡುತ್ತೇವೆ ಎಂದರು.

ಬಿಜೆಪಿಯಲ್ಲಿ ಒಗ್ಗಟ್ಟು ಇಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಯಾವ ಒಗ್ಗಟ್ಟು ಇಲ್ಲ ಹೇಳಿ. ಒಗ್ಗಟ್ಟಿನಿಂದಲೇ ಪಾದಯಾತ್ರೆ ಮಾಡಿದ್ದು. ಪಾದಯಾತ್ರೆ ಯಶಸ್ವಿಯಾಗಿದೆ ಕೋರ್ಟ್‌ ತನಿಖೆಗೆ ಅನುಮತಿ ಕೊಟ್ಟಿದೆ ಎಂದು ಹೇಳಿದರು.

ಮಾಜಿ ಸಚಿವ ಮುರುಗೇಶ್‌ ನಿರಾಣಿ ಮಾತನಾಡಿ, ಸಿದ್ದರಾಮಯ್ಯ ಐದು ದಶಕ ರಾಜಕೀಯ ಮಾಡಿದ್ದಾರೆ. ಹಿಂದೆ ಇಂತಹ ಕೋರ್ಟ್‌ ತೀರ್ಪು ಕೊಟ್ಟಾಗ ಹೋರಾಟ ಮೂಲಕ ಹಲವರು ರಾಜೀನಾಮೆ ಪಡೆದಿದ್ದಾರೆ. ಈಶ್ವರಪ್ಪ ಅವರ ರಾಜೀನಾಮೆ ಪಡೆದಿದ್ದರು. ಅದು ಮೂಲಕ ಹೋರಾಟ ಸಿದ್ದರಾಮಯ್ಯ ಅವರದಾಗಿತ್ತು. ಕೋರ್ಟ್‌ ತನಿಖೆ ಆದೇಶ ನೀಡಿರುವುದರಿಂದ ಅವರು ರಾಜೀನಾಮೆ ನೀಡಬೇಕು. ತನಿಖೆ ಎದುರಿಸಬೇಕು ಎಂದರು.

ಮಂಡ್ಯದ ನಾಗಮಂಗಲದಲ್ಲಿ ನಮ ಕಾರ್ಯಕರ್ತೆ ಛಾಯ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗಿ ಆಗಿದ್ದರು. ಅವರನ್ನು ರಾತ್ರಿ 12 ಗಂಟೆ ತನಕ ಪೊಲೀಸ್‌‍ ಠಾಣೆಯಲ್ಲಿ ಕೂರಿಸಿದ್ದರು. ಒಟಿಪಿ ಡೌನ್ಲೋಡ್‌ ಮಾಡ್ತಾ ಇದ್ದೀರಿ ಎಂದು ಕಾರಣ ನೀಡಿ ಕೂರಿಸಿದ್ದರು. ಇದನ್ನು ನಾವು ಸಹಿಸುವುದಿಲ್ಲ. ಪದೇ ಪದೇ ನಮ ಕಾರ್ಯಕರ್ತರಿಗೆ ತೊಂದರೆ ನೀಡುತ್ತಾ ಇದ್ದಾರೆ. ಇದು ಸಣ್ಣ ವಿಷಯ ಅಲ್ಲ. ಗೃಹ ಸಚಿವರು ಗಮನ ಹರಿಸಬೇಕು. ಇಲ್ಲವಾದರೆ ಪೊಲೀಸ್‌‍ ಠಾಣೆಗೆ ನಾವು ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಮಾತನಾಡಿ, ನಾಡಿನ ಜನರಿಗೆ ಪ್ರಾಮಾಣಿಕ ಉತ್ತರಬೇಕು. ಬುದ್ದಿವಂತಿಕೆ ಉತ್ತರದಿಂದ ಕೆಲವರನ್ನು ನಂಬಿಸಬಹುದು. ಪರಿಸ್ಥಿತಿ ನೋಡಿದರೆ ಅವರ ಪಕ್ಷದವರಿಂದಲೇ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಸನ್ನಿವೇಶ ಬರುತ್ತದೆ. ಇದೊಂದು ರೀತಿ ಐಸಿಯುನಲ್ಲಿರುವ ಸರ್ಕಾರ ಆಕ್ಸಿಜನ್‌ ಇರುವವರೆಗೆ ಉಸಿರಾಡುತ್ತೇ ಆಮೇಲೆ ಇದ್ದೇ ಇದೆಯಲ್ಲ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದೇವೆ. ಬಿಜೆಪಿಯಿಂದ ದೊಡ್ಡ ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಶಾಸಕರು, ಸಂಸದರು ಹಾಗೂ ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

RELATED ARTICLES

Latest News