Sunday, December 1, 2024
Homeರಾಜ್ಯಬರ ಪರಿಹಾರವಿಲ್ಲ, ಗೋಶಾಲೆ ತೆರೆದಿಲ್ಲ, ಮೇವಿನ ಕಿಟ್‌ ವಿತರಿಸಿಲ್ಲ ರೈತ ದ್ರೋಹಿ ಕಾಂಗ್ರೆಸ್ ಸರ್ಕಾರ :...

ಬರ ಪರಿಹಾರವಿಲ್ಲ, ಗೋಶಾಲೆ ತೆರೆದಿಲ್ಲ, ಮೇವಿನ ಕಿಟ್‌ ವಿತರಿಸಿಲ್ಲ ರೈತ ದ್ರೋಹಿ ಕಾಂಗ್ರೆಸ್ ಸರ್ಕಾರ : ವಿಜಯೇಂದ್ರ

ಬೆಂಗಳೂರು,ಮೇ1- ವಿಪರೀತ ಬರ ಆವರಿಸಿದ್ದರೂ, ಬರ ಪರಿಹಾರ ನೀಡಲಿಲ್ಲ, ಒಂದೂ ಗೋಶಾಲೆ ತೆರೆಯಲಿಲ್ಲ, ಮೇವಿನ ಕಿಟ್‌ ವಿತರಿಸಲಿಲ್ಲ, ರೈತ ದ್ರೋಹಿ ಸರ್ಕಾರಕ್ಕೆ ಶೀಘ್ರವೇ ಜನರಿಂದಲೇ ತಕ್ಕ ಶಾಸ್ತಿಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್‌ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಸಂಬಂಧ ತಮ್ಮ ಅಧಿ ಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕಳೆದ ಏಳು ತಿಂಗಳಿಂದಲೂ ಹಾಲಿನ ಪ್ರೋತ್ಸಾಹ ಧನವನ್ನೂ ನೀಡದೇ ರೈತರಿಗೆ ಖಾಲಿ ಬಕೆಟ್‌ ನೀಡಲು ಹೊರಟಿದ್ದು, ಕಾಂಗ್ರೆಸ್‌ ಸರ್ಕಾರಕ್ಕೆ ಅನ್ನದಾತರ ಶಾಪ ತಟ್ಟದೇ ಇರಲಾರದು ಎಂದು ಗುಡುಗಿದ್ದಾರೆ.

ಕುಡಿಯುವ ನೀರಿನ ಟ್ಯಾಂಕರ್‌ ಮಾಫಿಯಾಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವ ಕಾಂಗ್ರೆಸ್‌ ಸರ್ಕಾರ, ಇದೀಗ ತೀವ್ರ ಬರದಿಂದ ಕಂಗೆಟ್ಟಿರುವ ನಾಡಿನ ರೈತರ ಸಂಕಷ್ಟಗಳಿಗೆ ಜೊತೆ ನಿಲ್ಲುವಲ್ಲಿಯೂ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓಲೈಕೆ ರಾಜಕಾರಣಕ್ಕಾಗಿ ದಲಿತರು ಹಾಗೂ ಹಿಂದುಳಿದವರಿಗೆ ಮೀಸಲಿಟ್ಟ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಿದ್ದಾಯಿತು, ರೈತರ ಪ್ರೋತ್ಸಾಹ ಧನವು ಮತ್ಯಾವ ಓಲೈಕೆಗೆ ಬಳಕೆಯಾಗಿದೆಯೋ ತಿಳಿಯದು ಎಂದು ವ್ಯಂಗ್ಯವಾಡಿದರು.

RELATED ARTICLES

Latest News