Monday, June 17, 2024
Homeಅಂತಾರಾಷ್ಟ್ರೀಯಚೀನಾದ ದಕ್ಷಿಣ ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿದು 19 ಮಂದಿ ಸಾವು

ಚೀನಾದ ದಕ್ಷಿಣ ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿದು 19 ಮಂದಿ ಸಾವು

ಬೀಜಿಂಗ್‌, ಮೇ 1- ದಕ್ಷಿಣ ಚೀನಾದಲ್ಲಿ ಇಂದು ಮುಂಜಾನೆ ಗುವಾಂಗ್‌ಡಾಂಗ್‌ ಪ್ರಾಂತ್ಯದ ಮೀಝೌ ನಗರದಲ್ಲಿ ಹೆದ್ದಾರಿಯ ಒಂದು ಭಾಗ ಕುಸಿದು 19 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ,

ಈ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಮಳೆಯಾಗಿದ್ದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಹೆದ್ದಾರಿಯ ಸುಮಾರು 58 ಮೀಟರ್‌ ಇಂದು ಭಾಗವು ಕುಸಿದ ನಂತರ ಹದಿನೆಂಟು ಕಾರುಗಳು ಇಳಿಜಾರಿನ ಕೆಳಗೆ ಬಿದ್ದು ಈ ದುರಂತ ಸಂಭವಿಸಿದೆ.

ಪ್ರತ್ಯಕ್ಷದರ್ಶಿಗಳು ಪ್ರಕಾರ ದೊಡ್ಡ ಶಬ್ದವನ್ನು ಕೇಳಿಸಿತ್ತು ನೋಡುತ್ತಿದಂತೆ ಮೊದಲು ರಸ್ತೆಯ ಭಾಗ ಕುಸಿದು ನಂತರ ಹಲವಾರು ಮೀಟರ್‌ ಅಗಲವಾಗಿ ರಂಧ್ರ ತೆರೆದಿರುವುದನ್ನು ಕಂಡಿದ್ದಾರೆ.

ಸ್ಥಳೀಯ ಮಾಧ್ಯಮಗಳು ಬಿಡುಗಡೆ ಮಾಡಿರುವ ವೀಡಿಯೊ ಮತ್ತು ಫೋಟೋಗಳು ಘಟನಾ ಸ್ಥಳದಲ್ಲಿ ಹೊಗೆ ಮತ್ತು ಬೆಂಕಿ ಕಾಣಿಸಿದೆ.ಸ್ಥಳಕ್ಕೆ ದಾವಿಸಿದ ರಕ್ಷಣಾ ಕಾರ್ಯಕರ್ತರು ಗಾಯಗೊಂಡಿದ್ದ 30 ಜನರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ 19 ಜನ ಬಲಿಯಾಗಿದ್ದಾರೆ ಎಂದು ರಾಜ್ಯ ಪ್ರಸಾರ ಸಿಸಿಟಿವಿ ವರದಿ ಮಾಡಿದೆ.

RELATED ARTICLES

Latest News