Saturday, July 27, 2024
Homeರಾಜ್ಯಎಲ್ಲ ವರ್ಗಗಳಿಗೂ ಅವಕಾಶ ನೀಡಲು ಸಾಧ್ಯವಿಲ್ಲ : ಡಿಕೆಶಿ

ಎಲ್ಲ ವರ್ಗಗಳಿಗೂ ಅವಕಾಶ ನೀಡಲು ಸಾಧ್ಯವಿಲ್ಲ : ಡಿಕೆಶಿ

ಬೆಂಗಳೂರು, ಮೇ 28- ವಿಧಾನಪರಿಷತ್‌ನ ಸದಸ್ಯ ಸ್ಥಾನಕ್ಕೆ 310 ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಎಲ್ಲಾ ವರ್ಗಗಳಿಗೂ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ವರ್ಗಗಳಿಂದಲೂ ಆಕಾಂಕ್ಷಿಗಳಿದ್ದಾರೆ.

ಅವರಲ್ಲಿ ಪಕ್ಷಕ್ಕಾಗಿ ದುಡಿದವರು, ದುಡಿಯದೇ ಇರುವವರು, ಹಾಲಿ ಸದಸ್ಯರು ಇದ್ದಾರೆ.. ಕೆಲವರಿಗೆ ಬ್ಲಾಕ್‌ ಮಟ್ಟದಲ್ಲಿ, ಇನ್ನೂ ಕೆಲವರಿಗೆ ಜಿಲ್ಲಾಮಟ್ಟದಲ್ಲಿ, ಮತ್ತೆ ಕೆಲವರಿಗೆ ರಾಜ್ಯಮಟ್ಟದಲ್ಲಿ ಅವಕಾಶ ಸಿಕ್ಕಿದೆ ಎಂದರು.

ಮಲೆನಾಡು, ಕರಾವಳಿ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಬೆಂಗಳೂರು, ಹಳೆ ಮೈಸೂರು ಭಾಗ ಸೇರಿದಂತೆ ಪ್ರಾದೇಶಿಕವಾಗಿ ಎಲ್ಲಾ ಭಾಗದಿಂದಲೂ ಅವಕಾಶ ಕೇಳುತ್ತಿದ್ದಾರೆ. ಸಮಾನವಾದ ಹಂಚಿಕೆ ಕಷ್ಟವಾದ ಕೆಲಸ ಎಂದು ಹೇಳಿದರು.

ನಮಂತಹ ಹಿರಿಯರ ಸಲಹೆಗಳನ್ನು ಕೇಳಬೇಕು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಅಸಮಾಧಾನ ಹೊರಹಾಕಿರುವುದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್‌, ಖಂಡಿತ ಅವರ ಸಲಹೆ ಕೇಳುತ್ತೇನೆ ಎಂದರಲ್ಲದೆ, ಮಾನದಂಡಗಳನ್ನು ಹೈಕಮಾಂಡ್‌ ನಾಯಕರು ನಿರ್ಧರಿಸುತ್ತಾರೆ ಎಂದು ತಿಳಿಸಿದರು.

ವಾಲೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ರಿಕೆಗಳಲ್ಲಿ ಓದಿದ್ದೇನೆ. ವಾಸ್ತವಾಂಶ ಏನು ಎಂಬ ಬಗ್ಗೆ ಮತ್ತಷ್ಟು ಮಾಹಿತಿ ಪಡೆದು ಅನಂತರ ಪ್ರತಿಕ್ರಿಯಿಸುತ್ತೇನೆ ಎಂದರು.ದೆಹಲಿ ಭೇಟಿಯ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಚರ್ಚೆಯಾಗುವ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಹೇಳಿದರು.

RELATED ARTICLES

Latest News