Friday, October 18, 2024
Homeಬೆಂಗಳೂರುಖತರ್ನಾಕ್ ವಾಹನ ಕಳ್ಳರ ಸೆರೆ : 2.56 ಕೋಟಿ ವೌಲ್ಯದ 17 ಕಾರುಗಳು ಜಪ್ತಿ

ಖತರ್ನಾಕ್ ವಾಹನ ಕಳ್ಳರ ಸೆರೆ : 2.56 ಕೋಟಿ ವೌಲ್ಯದ 17 ಕಾರುಗಳು ಜಪ್ತಿ

ಬೆಂಗಳೂರು, ಜು.16– ಕಳವು ಮಾಡಿದ ವಿವಿಧ ಮಾದರಿಯ ಕಾರುಗಳಿಗೆ ನಕಲಿ ಎನ್ಒಸಿ ಸೃಷ್ಟಿಸಿ ಅಮಾಯಕ ಜನರಿಗೆ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿ 2.56 ಕೋಟಿ ರೂಪಾಯಿಮೌಲ್ಯದ 17 ಕಾರುಗಳನ್ನು ವಶಪಡಿಸಿ ಕೊಂಡಿದ್ದಾರೆ.

ಗೋವಾದ ಆಸ್ಟಿನ್ ಕರೋಡ ಅಲಿಯಾಸ್ ಚಿಂಟು (37) ಮತ್ತು ಫ್ರೇಜರ್ಟೌನ್ನ ಸಯ್ಯದ್ ರಿಯಾಜ್ (34) ಬಂಧಿತ ಆರೋಪಿಗಳು.ನಗರದಲ್ಲಿ ಸಕ್ರಿಯವಾಗಿದ್ದ ತಂಡವೊಂದು ಬೇರೆ ಬೇರೆ ರಾಜ್ಯಗಳಿಂದ ಕಾರುಗಳನ್ನು ಕಳ್ಳತನ ಮಾಡಿ ಅವುಗಳನ್ನು ನಗರಕ್ಕೆ ತಂದು ಅದೇ ಮಾದರಿಯ ಬೇರೆ ನೋಂದಣಿ ನಂಬರ್ಗಳನ್ನು ಹಾಕಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು.

ಅದೇ ರೀತಿ ವಿವಿಧ ಕಾರುಗಳು ಬ್ಯಾಂಕ್ನಲ್ಲಿ ಲೋನ್ ಹಣ ಕಟ್ಟದೆ ಬಾಕಿ ಉಳಿಸಿಕೊಂಡಿರುವ ಕಾರುಗಳನ್ನು ಅಡಮಾನವಾಗಿಟ್ಟುಕೊಂಡು ಅವುಗಳಿಗೂ ಸಹ ನಕಲಿ ಎನ್ಒಸಿ ಸೃಷ್ಟಿಸಿ ಹೊರರಾಜ್ಯಕ್ಕೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಸಂಘಟಿತ ಅಪರಾಧ ದಳದ ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ವಿಚಾರಣೆಗೊಳಪಡಿಸಿ ದುಬಾರಿ ಬೆಲೆಯ ರೇಂಜ್ ರೋವರ್, ಜಾಗ್ವಾರ್ ಸೇರಿದಂತೆ ವಿವಿಧ ಕಂಪೆನಿಯ ಒಟ್ಟು 17 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ 2 ಕೋಟಿ 56 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಈ ಕುರಿತು ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

RELATED ARTICLES

Latest News