Tuesday, December 5, 2023
Homeರಾಜ್ಯಕರ್ನಾಟಕ ಬಂದ್ : ರೈಲು, ಹೆದ್ದಾರಿ ತಡೆಗೆ ಸಿದ್ಧತೆ, ಪರೀಕ್ಷೆಗಳು ಮುಂದೂಡಿಕೆ

ಕರ್ನಾಟಕ ಬಂದ್ : ರೈಲು, ಹೆದ್ದಾರಿ ತಡೆಗೆ ಸಿದ್ಧತೆ, ಪರೀಕ್ಷೆಗಳು ಮುಂದೂಡಿಕೆ

ಬೆಂಗಳೂರು,ಸೆ.28- ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯದಲ್ಲಿ ನಾಳೆ ಎರಡನೇ ಬಂದ್ ನಡೆಯಲಿದ್ದು, ಸಾವಿರಕ್ಕೂ ಹೆಚ್ಚು ಸಂಘಟನೆ ಗಳು ಬೆಂಬಲ ನೀಡಿರುವುದರಿಂದ ಜಿಲ್ಲೆ, ತಾಲೂಕು ಮಟ್ಟದಲ್ಲೂ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ. ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್‍ವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಏಕಕಾಲಕ್ಕೆ ಜಿಲ್ಲೆಗಳಲ್ಲಿ, ತಾಲೂಕು ಮಟ್ಟಗಳಲ್ಲಿ ಬಂದ್ ಆಚರಣೆಯಾಗಲಿದ್ದು, ಪ್ರತಿಭಟನೆ ನಡೆಸಲು ಚರ್ಚೆಗಳು ನಡೆದಿವೆ. ಜೀವನಾವಶ್ಯಕವಾದ ಆಸ್ಪತ್ರೆ, ಔಷಧಾಲಯಗಳು, ಹಾಲು, ಹಣ್ಣು, ತರಕಾರಿ ಯಂತಹ ಅಗತ್ಯ ಸರಕು ಮತ್ತು ಸೇವೆ ಹೊರತುಪಡಿಸಿದರೆ ಉಳಿದಂತೆ ಎಲ್ಲಾ ಚಟು ವಟಿಕೆಗಳು ಸ್ತಬ್ಧಗೊಳ್ಳಲಿವೆ ಎಂದು ಕನ್ನಡಪರ ಸಂಘಟನೆಗಳು ತಿಳಿಸಿವೆ.

ವಾಟಾಳ್ ನಾಗರಾಜ್ ಅವರ ಪ್ರಕಾರ 1900 ಕ್ಕೂ ಹೆಚ್ಚು ಸಂಘಟನೆಗಳು ರಾಜ್ಯಾದ್ಯಂತ ಬಂದ್‍ಗೆ ಕೈಜೋಡಿಸಿವೆ. ಚಾಮರಾಜನಗರದಿಂದ ಬೀದರ್‍ವರೆಗೂ, ಮಂಗಳೂರಿನಿಂದ ಕೋಲಾರದವರೆಗೂ ಅಖಂಡ ಕರ್ನಾಟಕ ಕಾವೇರಿಯ ಅನ್ಯಾಯಕ್ಕೆ ಧ್ವನಿ ಎತ್ತಲಿದೆ ಎಂದಿದ್ದಾರೆ. ಒಂದೇ ವಾರದಲ್ಲಿ ಎರಡು ಬಂದ್‍ಗಳು ನಡೆಯುತ್ತಿರುವುದು ರಾಜ್ಯ ಹಾಗೂ ಬೆಂಗಳೂರಿನ ಜನರಿಗೆ ದುಬಾರಿ ಎನಿಸಿದರೂ ಜೀವನದಿಯ ರಕ್ಷಣೆಗಾಗಿ ಪ್ರತಿಭಟನೆಗಳು ನಿರಂತರವಾಗಿ ಮುಂದುವರೆದಿವೆ.

ಜೆಡಿಎಸ್, ಬಿಜೆಪಿಯ ಕೆಳ ಹಂತದ ನಾಯಕರಿಗೆ ಕಾಂಗ್ರೆಸ್ ಗಾಳ

ಮೊನ್ನೆ ಕಬ್ಬು ಬೆಳೆಗಾರರ ಸಂಘ, ಅಮ್ ಆದ್ಮಿ ಸೇರಿದಂತೆ ವಿವಿಧ ಸಂಘಟನೆಗಳು ಬೆಂಗಳೂರು ಬಂದ್ ನಡೆಸಿದ್ದವು. ನಾಳೆ ನಡೆಯಲಿರುವ ಬಂದ್‍ನಲ್ಲಿ ರೈಲು ಸಂಚಾರ, ಹೆದ್ದಾರಿ ತಡೆ ಮಾಡುವುದರ ಜೊತೆಗೆ ಅಂಚೆ ಸೇರಿದಂತೆ ಕೇಂದ್ರ ಸರ್ಕಾರದ ಕಚೇರಿಗಳಿಗೆ ಮುತ್ತಿಗೆ ಹಾಕಲು ತಯಾರಿ ನಡೆದಿದೆ.

ಸಾರಿಗೆ ವಲಯದ ಖಾಸಗಿ ವಾಹನಗಳ ಮಾಲೀಕರು, ಸರ್ಕಾರದ ನಿಗಮಗಳ ನೌಕರ ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಸಂಚಾರ ಅಸ್ತವ್ಯಸ್ಥಗೊಳ್ಳುವ ಸಾಧ್ಯತೆ ಇದೆ. ಬಂದ್ ಯಶಸ್ವಿಗಾಗಿ ಕನ್ನಡಪರ ಸಂಘಟನೆಗಳು ಮೇಲಿಂದ ಮೇಲೆ ಸಭೆಗಳನ್ನು ನಡೆಸುತ್ತಿವೆ. ಕನ್ನಡ ಚಲನಚಿತ್ರೋದ್ಯಮ ತನ್ನೆಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಬಂದ್‍ಗೆ ಕೈಜೋಡಿಸಲಿದೆ ಎಂದು ಹೇಳಲಾಗುತ್ತಿದೆ.

ಕರವೇಯ ನಾರಾಯಣ ಗೌಡ ಅವರ ಬಣ ಬಂದ್‍ಗೆ ಬೆಂಬಲ ನೀಡುವುದಿಲ್ಲ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿವೆ. ಆದರೆ ಅದೇ ದಿನ ಕಾವೇರಿಗಾಗಿ ಪ್ರತಿಭಟನೆ ನಡೆಸಲಿದೆ. ಕರವೇಯ ಪ್ರವೀಣ್ ಶೆಟ್ಟಿ ಬಣ ಬಂದ್‍ನ ನೇತೃತ್ವ ವಹಿಸಿದ್ದು, ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ಉಳಿದಂತೆ ಕನ್ನಡ ಸೇನೆ ಹಾಗೂ ನೂರಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಹೇಳಲಾಗುತ್ತಿದೆ.

ಕರ್ನಾಟಕ ಬಂದ್ ವಿಷಯದಲ್ಲಿ ಸಿಡಿಮಿಡಿ ವ್ಯಕ್ತಪಡಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎರಡೆರಡು ಬಂದ್ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ. ಆದರೆ ಸುಪ್ರೀಂಕೋರ್ಟಿನ ತೀರ್ಪಿನ ಪ್ರಕಾರ ಬಂದ್, ಪ್ರತಿಭಟನಾ ಮೆರವಣಿಗೆಗಳಿಗೆ ಅವಕಾಶವಿಲ್ಲ. ಸಾರ್ವಜನಿಕ ಆಸ್ತಿ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಬರದಂತೆ ಪ್ರತಿಭಟನೆ ನಡೆಸಲು ತಮ್ಮ ಆಕ್ಷೇಪವಿಲ್ಲ ಎಂದಿದ್ದಾರೆ.

ಗೃಹಸಚಿವ ಡಾ.ಜಿ.ಪರಮೇಶ್ವರ್ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ಬಂದ್ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಬೆಂಗಳೂರು ಬಂದ್ ವೇಳೆ ಪೊಲೀಸರು ವ್ಯಾಪಕ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಕಾವೇರಿ ವಿವಾದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ರಾಜ್ಯಸರ್ಕಾರ 50 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದ್ದರು. ಬಲ ಪ್ರಯೋಗದ ಮೂಲಕ ಹೋರಾಟಗಾರರನ್ನು ಬಂಧಿಸಲಾಗುತ್ತಿದೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆಟೋ ಚಾಲಕ ಸೇರಿ ಮೂವರ ಬಂಧನ

ಪ್ರತಿಭಟನೆಗಳನ್ನು ನಿಯಂತ್ರಿಸಲು ಪೊಲೀಸ್ ರಾಜ್ಯ ನಿರ್ಮಾಣ ಮಾಡಲಾಗಿದೆ. ಇದೇ ಧೋರಣೆಯನ್ನು ಮುಂದುವರೆಸಿದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.

RELATED ARTICLES

Latest News