Thursday, September 19, 2024
Homeಬೆಂಗಳೂರುಬೆಂಗಳೂರಲ್ಲಿ ಇನ್ಮುಂದೆ ಕುಡಿದು ಗಾಡಿ ಓಡಿಸಿದರೆ ಲಾಕ್ ಆಗ್ತಿ ಹುಷಾರ್

ಬೆಂಗಳೂರಲ್ಲಿ ಇನ್ಮುಂದೆ ಕುಡಿದು ಗಾಡಿ ಓಡಿಸಿದರೆ ಲಾಕ್ ಆಗ್ತಿ ಹುಷಾರ್

CCTVs and women officers for weekend crackdown on drunk driving in Bengaluru

ಬೆಂಗಳೂರು,ಆ.23-ನಗರದಲ್ಲಿ ಅಪಘಾತಗಳನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಚಾರಿ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮದ್ಯಪಾನ ತಪಸಣಾ ವಿಶೇಷ ಕಾರ್ಯಾಚರಣೆ ನಡೆಸಲು ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಸೂಚನೆ ನೀಡಿದ್ದಾರೆ.

ಗುರುವಾರದಿಂದ ಭಾನುವಾರದವರೆಗೂ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವ ಸವಾರರು ಹಾಗೂ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ನಗರ ಸಂಚಾರಿ ಪೊಲೀಸರು ಮುಂದಾಗಿದ್ದಾರೆ.

ಎಲ್ಲಾ ಪಿಎಸ್ಐಗಳು ಕಡ್ಡಾಯವಾಗಿ ಇದರಲ್ಲಿ ಪಾಲ್ಗೊಳ್ಳಬೇಕು, ಠಾಣಾ ವ್ಯಾಪ್ತಿಯಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಜಂಕ್ಷನ್ಗಳಲ್ಲಿ ಮಾತ್ರ ಪ್ರಕರಣ ದಾಖಲಿಸಬೇಕು.

ಈ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿಗಳನ್ನು ಕೂಡ ಸಹ ಕಾರ್ಯಾಚರಣೆಗೆ ನೇಮಿಸಿಕೊಳ್ಳಲು ಸೂಚಿಸಲಾಗಿದೆ. ಈ ಬಗ್ಗೆ ಸಂಚಾರಿ ವಿಭಾಗದ ಎಲ್ಲಾ ಇನ್ಸ್ ಪೆಕ್ಟರ್ಗಳಿಗೆ ಜ್ಞಾಪವ ಪತ್ರ ಕಳಿಸಲಾಗಿದೆ.

RELATED ARTICLES

Latest News