Thursday, December 5, 2024
Homeಅಂತಾರಾಷ್ಟ್ರೀಯ | Internationalಎಲ್‌ಎಸಿ ಬಳಿ 1637 ಕಿಮೀ ಹೆದ್ದಾರಿ ನಿರ್ಮಾಣಕ್ಕೆ 28,229 ಕೋಟಿ ರೂ.ಮಂಜೂರು ಮಾಡಿದ ಭಾರತ

ಎಲ್‌ಎಸಿ ಬಳಿ 1637 ಕಿಮೀ ಹೆದ್ದಾರಿ ನಿರ್ಮಾಣಕ್ಕೆ 28,229 ಕೋಟಿ ರೂ.ಮಂಜೂರು ಮಾಡಿದ ಭಾರತ

Centre Approves Rs 28,229 Crore For 1,637 Km Arunachal Frontier Highway Along LAC

ಆಲೋ,ನ.28- ಭಾರತ-ಚೀನಾ ಅಂತಾರಾಷ್ಟ್ರೀಯ ಗಡಿಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ 12 ಜಿಲ್ಲೆಗಳನ್ನು ಸಂಪರ್ಕಿಸುವ 1,637 ಕಿಮೀ ಅರುಣಾಚಲ ಗಡಿ ಹೆದ್ದಾರಿಯನ್ನು ನಿರ್ಮಿಸಲು ಕೇಂದ್ರವು 28,229 ಕೋಟಿ ಮಂಜೂರು ಮಾಡಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

40,000 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಹತ್ವಾಕಾಂಕ್ಷೆಯ ಯೋಜನೆಯು ಅರುಣಾಚಲ ಪ್ರದೇಶದಲ್ಲಿ ಚೀನಾದ ಆಕ್ರಮಣವನ್ನು ಎದುರಿಸುವ ಕ್ರಮವಾಗಿ ಪರಿಗಣಿಸಲ್ಪಟ್ಟಿದೆ, ಜೊತೆಗೆ ಗಡಿ ರಾಜ್ಯದ ಸಾಮಾಜಿಕ-ಆರ್ಥಿಕ ಅಭಿವದ್ಧಿಗೆ ಕೊಡುಗೆ ನೀಡುತ್ತದೆ ಎನ್ನಲಾಗಿದೆ.

ಭಾರತ-ಟಿಬೆಟ್‌-ಚೀನಾ-ವ್ಯಾರ್ನಾ ಗಡಿಯಲ್ಲಿ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ ಮತ್ತು ರಸ್ತೆ ಯೋಜನೆಯು ಎಲ್‌ಎಸಿ ಮತ್ತು ಅಂತರರಾಷ್ಟ್ರೀಯ ಗಡಿಗಳಿಂದ 20 ಕಿ.ಮೀ. ಅಂತರದಲ್ಲಿ ನಿರ್ಮಿಸಲಾಗುತ್ತಿದೆ.

ಇದು ಬೊಮ್ಡಿಲಾದಿಂದ ಪ್ರಾರಂಭವಾಗಿ ನಫ್ರಾ, ಹುರಿ ಮತ್ತು ಮೊನಿಗಾಂಗ್‌ ಪಟ್ಟಣಗಳ ಮೂಲಕ ಹಾದುಹೋಗುತ್ತದೆ, ಇದು ಎಲ್‌ಎಸಿ ಅಥವಾ ಮೆಕ್‌ ಮಹೊನ್‌ ಲೈನ್‌ಗೆ ಹತ್ತಿರದಲ್ಲಿದೆ ಮತ್ತು ಭಾರತ-ವ್ಯಾನಾರ್‌ ಗಡಿಯ ಬಳಿ ವಿಜಯನಗರದಲ್ಲಿ ಮುಕ್ತಾಯಗೊಳ್ಳುತ್ತದೆ.

1,683 ಹಳ್ಳಿಗಳನ್ನು ಸಂಪರ್ಕಿಸುವ ಅರುಣಾಚಲ ಗಡಿ ಹೆದ್ದಾರಿಗೆ ಕೇಂದ್ರವು 28,229 ಕೋಟಿ ಮಂಜೂರು ಮಾಡಿದೆ. ವ್ಯಾಕ್‌ಮೋಹನ್‌ ಲೈನ್‌ಗೆ ಸಮಾನಾಂತರವಾಗಿ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿ 2027 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಬಾರ್ಡರ್‌ ರೋಡ್ಸ್‌‍ ಆರ್ಗನೈಸೇಶನ್‌ (ಬಿಆರ್‌ಒ) ಮುಖ್ಯ ಎಂಜಿನಿಯರ್‌ ಮತ್ತು ಯೋಜನೆಯ ಮುಖ್ಯಸ್ಥ ಬ್ರಹಾಂಕ್‌ ಸುಭಾಷ್‌ ಚಂದ್ರ ಲುನಿಯಾ ಹೇಳಿದರು. ಅರುಣಾಚಲ ಫ್ರಾಂಟಿಯರ್‌ ರಾಷ್ಟ್ರೀಯ ಹೆದ್ದಾರಿ-913 ರ 198 ಕಿಮೀ ವ್ಯಾಪ್ತಿಯನ್ನು (ಟಾಟೊ-ಟ್ಯೂಟಿಂಗ್‌‍) ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

2014 ರ ನಂತರ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ರಸ್ತೆ ಅಭಿವದ್ಧಿ ಮತ್ತು ನಿರ್ವಹಣೆಗಾಗಿ ವಿವಿಧ ರಾಜ್ಯಗಳಲ್ಲಿ ಬಿಆರ್‌ಒ ಕಾರ್ಯಗಳಿಗಾಗಿ ಬಜೆಟ್‌ ಅನ್ನು ದ್ವಿಗುಣಗೊಳಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

RELATED ARTICLES

Latest News