Thursday, December 12, 2024
Homeಜಿಲ್ಲಾ ಸುದ್ದಿಗಳು | District Newsಒಬ್ಬನ ಕೊಲೆಯಲ್ಲಿ ಕೊನೆಯಾಯ್ತು "ಕೋಳಿ" ಜಗಳ

ಒಬ್ಬನ ಕೊಲೆಯಲ್ಲಿ ಕೊನೆಯಾಯ್ತು “ಕೋಳಿ” ಜಗಳ

Chickens fight ends in murder

ತಿ.ನರಸೀಪುರ, ನ.28 – ಕೋಳಿಗಳು ಮನೆಗೆ ನುಗ್ಗಿ ಗಲೀಜು ಮಾಡುವ ವಿಚಾರಕ್ಕೆ ಜಗಳ ನಡೆದು ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ತಾಲೂಕಿನ ದೊಡ್ಡೇಬಾಗಿಲು ಗ್ರಾಮದಲ್ಲಿ ಸಂಭವಿಸಿದೆ.ದೊಡ್ಡೇಬಾಗಿಲು ಗ್ರಾಮದ ವಾಸಿ ಮಹದೇವಸ್ವಾಮಿ ಕೊಲೆಯಾದ ದುರ್ದೈವಿ.

ನಿನ್ನೆ ಬೆಳಗ್ಗೆ ಮನೆಯ ಮುಂದೆ ಮಹದೇವಸ್ವಾಮಿ ಅವರ ಪತ್ನಿ ಪಾತ್ರೆ ತೊಳೆಯುತ್ತಿದ್ದಾಗ, ಇವರ ದಾಯಾದಿ ನಂಜಮನವರು ಮಾತನಾಡುತ್ತ ಮನೆಯ ಮುಂದೆ ನಿಂತಿದ್ದರು. ಈ ವೇಳೆ ಎದುರು ಮನೆಯ ರಾಜಮ ಮತ್ತು ಇವರ ತಾಯಿ ಸಿದ್ದಮನವರು ನಿಮ ಮನೆಯ ಕೋಳಿಗಳು ನಮ ಮನೆಗೆ ಬಂದು ಗಲೀಜು ಮಾಡುತ್ತಿವೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ನಂಜಮನವರ ತಲೆ ಜುಟ್ಟು ಹಿಡಿದು ಎಳೆದಾಡ ತೊಡಗಿದ್ದಾರೆ.

ಇದನ್ನು ಕಂಡ ಮಹದೇವಸ್ವಾಮಿಯವರ ಪತ್ನಿ ಪಾತ್ರೆ ತೊಳೆಯುವುದನ್ನು ಬಿಟ್ಟು ಜಗಳ ಬಿಡಿಸಲು ಮುಂದಾಗಿದ್ದಾರೆ. ಆಗ ಸಿದ್ದಮ ಜಗಳ ಬಿಡಿಸಲು ಬಂದವರ ತಲೆಗೂದಲನ್ನು ಹಿಡಿದು ಎಳೆದಾಡಿದ್ದಾರೆ. ಇದೇ ವೇಳೆ ರಾಜಮ ಅಲ್ಲೆ ಬಿದ್ದಿದ್ದ ಕಲ್ಲಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದಾಗ ಎಡಗಣ್ಣಿಗೆ ಪೆಟ್ಟು ಬಿದ್ದಿದೆ.

ಇದೇ ಸಂದರ್ಭದಲ್ಲಿ ತನ್ನ ಪತ್ನಿ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಮಹದೇವಸ್ವಾಮಿ ಜಗಳ ಬಿಡಿಸಲು ಬಂದಾಗ ರಾಜಮ ಮತ್ತು ಸಿದ್ದಮ ಇಬ್ಬರೂ ಮಹದೇವಸ್ವಾಮಿಯನ್ನು ಎಳೆದಾಡಿ ಮರ್ಮಾಂಗಕ್ಕೆ ಒದ್ದು ಕೆಳಗೆ ಬೀಳಿಸಿದ್ದಾರೆ.

ನಂತರ ಜಗಳ ಬಿಟ್ಟು ಮನೆಯವರೆಲ್ಲ ಮಹದೇವಸ್ವಾಮಿಯನ್ನು ಎಬ್ಬಿಸಲು ಯತ್ನಿಸಿದಾಗ ಇಡೀ ದೇಹ ತಣ್ಣಗಾಗಿ ಸಾವನ್ನಪ್ಪಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ನನ್ನ ಗಂಡನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ರಾಜಮ ಮತ್ತು ಸಿದ್ದಮ ಅವರ ಮೇಲೆ ಕ್ರಮ ಜರುಗಿಸಬೇಕು. ತಮಗೆ ನ್ಯಾಯ ಒದಗಿಸುವಂತೆ ಪತ್ನಿ ತಿ.ನರಸೀಪುರ ಪೊಲೀಸ್‌‍ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಷಯ ತಿಳಿದ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ವಿಷ್ಣುವರ್ಧನ್‌, ಅಡಿಷನಲ್‌ ಎಸ್ಪಿ ನಾಗೇಶ್‌, ಡಿವೈಎಸ್ಪಿ ರಘು ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್‌ ಧನಂಜಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ಸಂಬಂಧ ತಿ.ನರಸೀಪುರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News