Friday, October 11, 2024
Homeರಾಜ್ಯಸಿಇಟಿ/ನೀಟ್‌ : 2ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಪ್ರವೇಶ ಪ್ರಕ್ರಿಯೆಗೆ ದಿನಾಂಕ ವಿಸ್ತರಣೆ

ಸಿಇಟಿ/ನೀಟ್‌ : 2ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಪ್ರವೇಶ ಪ್ರಕ್ರಿಯೆಗೆ ದಿನಾಂಕ ವಿಸ್ತರಣೆ

CET/NEET : Date extension for admission process for 2nd round seat allottees

ಬೆಂಗಳೂರು,ಸೆ.25- ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಯುಜಿ ಸಿಇಟಿ ಮತ್ತು ಯುಜಿ ನೀಟ್‌ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಪ್ರವೇಶ ಪ್ರಕ್ರಿಯೆ ಮುಗಿಸಿಕೊಳ್ಳಲು ದಿನಾಂಕಗಳನ್ನು ವಿಸ್ತರಿಸಲಾಗಿದೆ.

ಸಿಇಟಿ ಸೀಟು ಪಡೆದವರು ಛಾಯ್ಸ್‌‍ ದಾಖಲಿಸಲು ನಾಳೆಯವರೆಗೆ ಹಾಗೂ ಶುಲ್ಕ ಪಾವತಿ ಮತ್ತು ದಾಖಲೆ ಸಲ್ಲಿಸಲು ಸೆ.27ರವರೆಗೆ ವಿಸ್ತರಿಸಲಾಗಿದೆ. ಪ್ರವೇಶ ಪತ್ರ ಡೌನ್ಲೋಡ್‌ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೆ.28ರವರೆಗೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್‌ ಕೋರ್ಸ್‌ ಗಳಿಗೆ ಛಾಯ್ಸ್‌‍ ದಾಖಲಿಸಲು ಅವಕಾಶ ಇಲ್ಲ. ಆದರೆ, ಶುಲ್ಕ ಪಾವತಿ, ಪ್ರವೇಶ ಪತ್ರ ಡೌನ್ಲೋಡ್‌ ಮಾಡಿಕೊಳ್ಳಲು ಇದೇ ದಿನಾಂಕಗಳು ಅನ್ವಯವಾಗಲಿವೆ ಎಂದು ಅವರು ವಿವರಿಸಿದ್ದಾರೆ.

RELATED ARTICLES

Latest News