Thursday, December 7, 2023
Homeಇದೀಗ ಬಂದ ಸುದ್ದಿಬಿಜೆಪಿಯ ಮಡಿಕೆ ತಳ ಒಡೆದು ಹೋಗಿದೆ : ಸಚಿವ ಚಲುವರಾಯಸ್ವಾಮಿ ಲೇವಡಿ

ಬಿಜೆಪಿಯ ಮಡಿಕೆ ತಳ ಒಡೆದು ಹೋಗಿದೆ : ಸಚಿವ ಚಲುವರಾಯಸ್ವಾಮಿ ಲೇವಡಿ

ಬೆಂಗಳೂರು, ನ.11- ಬಿಜೆಪಿಯೆಂಬ ಮಡಿಕೆಯ ತಳ ಒಡೆದು ಹೋಗಿದೆ. ಎಷ್ಟೇ ನೀರು ತುಂಬಿದರೂ ನಿಲ್ಲಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಲೇವಡಿ ಮಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಹೊಸದಾಗಿ ಅಧ್ಯಕ್ಷರಾಗಿರುವ ವಿಜೆಯೇಂದ್ರ ಒಳ್ಳೆಯವರು, ಆತ ನನ್ನ ಸ್ನೇಹಿತ, ಯಡಿಯೂರಪ್ಪನವರ ಬಗ್ಗೆ ನನಗೆ ಗೌರವ ಇದೆ ಎಂದರು.

ಯಡಿಯೂರಪ್ಪರನ್ನು ಕೆಳಗಿಸಿದಾಗಲೇ ಅವತ್ತೇ ಬಿಜೆಪಿಯ ಮಡಿಕೆ ಹೊಡೆದು ಹೋಗಿದೆ. ವಿಜೆಯೇಂದ್ರರನ್ನು ಮಂತ್ರಿ ಮಾಡಿ ಎಂದಾಗ ಮಾಡಲಿಲ್ಲ. ಈಗ ತಮ್ಮ ಪರಿಸ್ಥಿತಿ ಗೋತ್ತಾಗಿ ರಾಜ್ಯಧ್ಯಕ್ಷನ್ನಾಗಿ ನೇಮಿಸಿ ಪ್ಯಾಚ್ ಅಪ್ ಮಾಡಲು ಹೋಗಿದ್ದಾರೆ ಎಂದರು.

ನ.15ಕ್ಕೆ ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಪದಗ್ರಹಣ

ಏನೇ ಮಾಡಿದರೂ ಬಿಜೆಪಿ ಬಲವೃದ್ಧಿಗೊಳ್ಳುವುದಿಲ್ಲ. ಹಿಂದೆ ಯಡಿಯೂರಪ್ಪ ಇದ್ದಾಗ ಬಿಜೆಪಿಗೆ ಬಲ ಇತ್ತು, ಆದರೂ 115 ಸ್ಥಾನ ಗೆಲ್ಲಲು ಅವರಿಂದ ಆಗಲಿಲ್ಲ. ಈಗ ಗೆಲ್ಲುತ್ತಾರಾ ಎಂದರು. ಯಾವುದೇ ಕಾರಣಕ್ಕೂ ಲೋಕಸಭೆಯಲ್ಲಿ ಬಿಜೆಪಿ ಗೆಲ್ಲಲ್ಲ. ಅನಿವಾರ್ಯತೆಯಲ್ಲಿ ಹುಡುಕಿ ಹುಡುಕಿ ಮಾಡುತ್ತಿದ್ದಾರೆ. ಕುಮಾರಸ್ವಾಮಿಯನ್ನು ಹೇಗೆ ಸೇರಿಸಿಕೊಳ್ಳಲು ಓಡಾಡುತ್ತಾರೆ, ಕುಮಾರಸ್ವಾಮಿಯೂ ಹೇಗೆ ಬಿಜೆಪಿ ಜೊತೆ ಸೇರಿಕೊಳ್ಳಲು ಪ್ರಯತ್ನಿಸುತ್ತಾರೆ. ಆ ರೀತಿ ಇವರು ಹೋಗಿದ್ದಾರೆ ಎಂದರು.

ಕುಟುಂಬ ರಾಜಕಾರಣ ಬಗ್ಗೆ ಮಾತನಾಡಲ್ಲ. ಎಲ್ಲಾ ಪಕ್ಷದಲ್ಲೂ ಇದೆ, ಕುಮಾರಸ್ವಾಮಿ ಮಾಡುತ್ತಿಲ್ಲ, ಬಿಜೆಪಿಯಲ್ಲಿ ಇಲ್ವಾ. ವಂಶಪಾರಂಪರ್ಯ ರಾಜಕಾರಣ ಎಂಬುದ್ದೇಲಾ ಅನಗತ್ಯ ಚರ್ಚೆ ಎಂದರು.

RELATED ARTICLES

Latest News