Saturday, May 4, 2024
Homeರಾಷ್ಟ್ರೀಯಛತ್ತೀಸ್‍ಗಢ : ಆಕಸ್ಮಿಕ ಗುಂಡು ಹಾರಿ ಜಿಲ್ಲಾ ಮೀಸಲು ಪಡೆ ಕಾನ್ಸ್‌ಟೇಬಲ್‌ ಸಾವು

ಛತ್ತೀಸ್‍ಗಢ : ಆಕಸ್ಮಿಕ ಗುಂಡು ಹಾರಿ ಜಿಲ್ಲಾ ಮೀಸಲು ಪಡೆ ಕಾನ್ಸ್‌ಟೇಬಲ್‌ ಸಾವು

ರಾಯ್‍ಪುರ, ಅ 24-ಛತ್ತೀಸ್‍ಗಢದ ದಾಂತೇವಾಡ ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಬಂದೂಕು ಗುಂಡು ಹಾರಿ ಜಿಲ್ಲಾ ಮೀಸಲು ಪಡೆ (ಡಿಆರ್‍ಜಿ) ಕಾನ್ಸ್‌ಟೇಬಲ್‌ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮತ್ತೊಬ್ಬ ಪೊಲೀಸ್ ಪೇದೆ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.

ಸುಮಾರು ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ರಾಜ್ಯ ಪೊಲೀಸ್‍ನ ಎರಡೂ ಘಟಕಗಳಾದ ಡಿಆರ್‍ಜಿ ಮತ್ತು ಬಸ್ತಾರ್ ಫೈಟರ್‍ನ ಜಂಟಿ ತಂಡವು ಬಾರ್ಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಂತೇವಾಡ-ನಾರಾಯಣಪುರ ಜಿಲ್ಲೆಗಳ ಗಡಿಯಲ್ಲಿರುವ ಹಂದವಾಡ ಮತ್ತು ಹಿತವಾಡ ಗ್ರಾಮಗಳಲ್ಲಿ ಶಸ್ತ್ರಸಜ್ಜಿತ ನಕ್ಸಲೀಯರು ಇರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ಗಸ್ತು ತಿರುಗುತ್ತಿದ್ದಾಗ, ಇಬ್ಬರು ಡಿಆರ್‍ಜಿ ಕಾನ್‍ಸ್ಟೆಬಲ್‍ಗಳಾದ ಜೋಗರಾಜ್ ಕರ್ಮಾ ಮತ್ತು ಪರಶುರಾಮ್ ಅಲಾಮಿ ಆಕಸ್ಮಿಕ ಗುಂಡು ಹಾರಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಲಾಮಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು ಮತ್ತು ಹೆಚ್ಚಿನ ಔಷಧಿಗಾಗಿ ರಾಯ್‍ಪುರಕ್ಕೆ ವಿಮಾನದಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಯಾರ ಆಯುಧವು ಆಕಸ್ಮಿಕವಾಗಿ ಗುಂಡು ಹಾರಿತು ಎಂಬುದನ್ನು ನಿರ್ದಿಷ್ಟಗೊಂಡಿಲ್ಲ ಮತ್ತು ಹೆಚ್ಚಿನ ವಿವರಗಳನ್ನು ನಂತರ ಹಂಚಿಕೊಳ್ಳಲಾಗುವುದು ಎಂದು ಹೇಳಿದರು

RELATED ARTICLES

Latest News