Saturday, May 4, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(25-04-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(25-04-2024)

ನಿತ್ಯ ನೀತಿ : ಮಾತು ಸಂಬಂಧವನ್ನು ಕೂಡಿಸುವಂತೆ ಇರಬೇಕೇ ಹೊರತು ಸಂಬಂಧವನ್ನು ಹಾಳು ಮಾಡುವಂತೆ ಅಲ್ಲ.

ಪಂಚಾಂಗ : 25-04-2024, ಗುರುವಾರ
ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ವಿಶಾಖ / ಯೋಗ: ವ್ಯತೀಪಾತ / ಕರಣ: ತೈತಿಲ

ಸೂರ್ಯೋದಯ : ಬೆ.06.02
ಸೂರ್ಯಾಸ್ತ : 06.34
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ರಾಶಿಭವಿಷ್ಯ :
ಮೇಷ
: ಆತ್ಮೀಯರೊಬ್ಬರ ದಿಢೀರ್ ಅಗಲುವಿಕೆಯಿಂದ ಮಾನಸಿಕ ಆಘಾತವಾಗಲಿದೆ.
ವೃಷಭ: ಹಿರಿಯ ಸಹೋದ್ಯೋಗಿಗಳ ಕಿರುಕುಳದಿಂದ ಕೆಲಸ ಬದಲಾವಣೆ ಮಾಡುವಿರಿ.
ಮಿಥುನ: ಪಿತ್ರಾರ್ಜಿತ ಆಸ್ತಿಯಿಂದ ಉತ್ತಮ ಲಾಭ ದೊರೆಯಲಿದೆ. ಮಕ್ಕಳಿಂದ ಸಂತೋಷ ಸಿಗಲಿದೆ.

ಕಟಕ: ಮಾನಸಿಕ ಕಿರಿಕಿರಿ ಹೆಚ್ಚುವುದರೊಂದಿಗೆ ಉದ್ಯೋಗದಲ್ಲಿ ಒತ್ತಡ ಅನುಭವಿಸುವಿರಿ.
ಸಿಂಹ: ಸೌಜನ್ಯತೆಯಿಂದ ನಡೆದುಕೊಳ್ಳುವುದರಿಂದ ನೆರೆಹೊರೆಯವರು ನಿಮಗೆ ಸ್ಪಂದಿಸುವರು.
ಕನ್ಯಾ: ನಿಮ್ಮವರೇ ನಿಮ್ಮ ಅಭಿವೃದ್ಧಿಗೆ ಅಡ್ಡಿಯಾಗಲಿದ್ದಾರೆ.

ತುಲಾ: ಹಣದ ಕೊರತೆ ಇರುವುದಿಲ್ಲ. ಹಿಂದೆ ಮಾಡಿದ್ದ ಸಾಲವನ್ನೂ ಸಹ ತೀರಿಸುವಿರಿ.
ವೃಶ್ಚಿಕ: ಹಿರಿಯರನ್ನು ಭೇಟಿಯಾಗುವ ಅಪೂರ್ವ ಅವಕಾಶ ಒದಗಲಿದೆ.
ಧನುಸ್ಸು: ಹಣ ಸುಲಭವಾಗಿ ದೊರೆಯುತ್ತದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಖರ್ಚು ಮಾಡದಿರಿ.

ಮಕರ: ಉದ್ಯೋಗಸ್ಥರಿಗೆ ವಿಶೇಷ ಲಾಭದ ಅವಕಾಶಗಳು ಸಿಗಲಿವೆ. ಉತ್ತಮವಾದ ದಿನ.
ಕುಂಭ: ವಿನಾಕಾರಣ ವಿವಾದಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ. ಎಚ್ಚರಿಕೆಯಿಂದ ಮಾತನಾಡಿ.
ಮೀನ: ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಗಳು ದೂರವಾಗಿ ಉತ್ತಮ ಬದಲಾವಣೆಗಳಾಗಲಿವೆ.

RELATED ARTICLES

Latest News