Monday, June 17, 2024
Homeರಾಷ್ಟ್ರೀಯತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ, ಆರು ಮಂದಿ ಸಾವು

ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ, ಆರು ಮಂದಿ ಸಾವು

ಸೂರ್ಯಪೇಟ್ (ತೆಲಂಗಾಣ), ಅ 25- ನಿಂತಿದ್ದ ಟ್ರಕ್‍ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಹೆಣ್ಣು ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿರು ಘಟನೆ ಜಿಲ್ಲೆಯ ಕೊಡಾದ ಪಟ್ಟಣದ ಬಳಿ ಅಪಘಾತ ಸಂಭವಿಸಿದೆ.

ಹೈದರಾಬಾದ್‍ನಿಂದ ಸುಮಾರು 180 ಕಿಮೀ ದೂರದಲ್ಲಿರುವ ಈ ಪಟ್ಟಣ ಸಮೀಪ ಇಂದು ಮುಂಜಾನೆ ಈ ದುರ್ಘಟನೆ ಸಂಭವಿಸಿದೆ. ಹೈದರಾಬಾದ್-ವಿಜಯವಾಡ ಹೆದ್ದಾರಿಯಲ್ಲಿ ದುರಸ್ತಿ ನೆಡೆಯುತ್ತಿದ್ದು ಬೇಜವಾಬ್ದಾರಿಯಾಗಿ ರಸ್ತೆಬದಿಯಲ್ಲಿ ಟ್ರಕ್ ನಿಲ್ಲಿಸಲಾಗಿತ್ತು ಎಂದು ಡಿಎಸ್‍ಪಿ ಶ್ರೀಧರ್ ರೆಡ್ಡಿ ತಿಳಿಸಿದ್ದಾರೆ.

ಕಾರಿನಲ್ಲಿ ಒಟ್ಟು 10 ಮಂದಿ ಇದ್ದರು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡಿದ್ದು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಕಾರಿನಲ್ಲಿದ್ದವರು ಹೈದರಾಬಾದ್‍ನಿಂದ ವಿಜಯವಾಡಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

RELATED ARTICLES

Latest News