Thursday, December 12, 2024
Homeರಾಷ್ಟ್ರೀಯ | Nationalಇಂಡಿಯಾ ಗೇಟ್ ಬಳಿ ಐಸ್ ಕ್ರೀಮ್ ಮಾರಾಟಗಾರನ ಹತ್ಯೆ

ಇಂಡಿಯಾ ಗೇಟ್ ಬಳಿ ಐಸ್ ಕ್ರೀಮ್ ಮಾರಾಟಗಾರನ ಹತ್ಯೆ

ನವದೆಹಲಿ, ಅ 25-ಕಳೆದ ರಾತ್ರಿ ಇಲ್ಲಿನ ಇಂಡಿಯಾ ಗೇಟ್ ಬಳಿ ಐಸ್ ಕ್ರೀಮ್ ಮಾರಾಟಗಾರರೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಕೊಲೆಯಾದವನನ್ನು ಪ್ರಭಾಕರ್ (25) ಎಂದು ಗುರುತಿಸಲಾದೆ. ಉತ್ತರ ಪ್ರದೇಶದ ಇಟಾವಾ ಮೂಲದವನು ಎಂದು ಪೊಲೀಸರು ತಿಳಿಸಿದ್ದಾರೆ

ಘಟನೆಯು ಹಿಂದೆ ವೈಯಕ್ತಿಕ ದ್ವೇಷ ಇರಬಹುದೆಂದು ಎಂದು ಪೊಲೀಸರು ಶಂಕಿಸಿದ್ದು ಆರೋಪಿಯೊಬ್ಬನನ್ನು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಐಸ್ ಕ್ರೀಮ್ ಮಾರಾಟಗಾರನು ತನ್ನ ಟ್ರಾಲಿ ಬಳಿ ನಿಂತಿದ್ದಾಗ ವ್ಯಕ್ತಿಯೊಬ್ಬ ಏಕಾಏಕಿ ಆತನ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾನೆ ನಂತರ ಕುಸಿದುಬಿದ್ದ ನಂತರ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲೇ ಪ್ರಭಾಕರ್ ಮೃತಪಟ್ಟಿದ್ದು ಪ್ರಾಥಮಿಕ ತನಿಖೆಯಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಮುಂದಿನ ತನಿಖೆ ನಡೆಯುತ್ತಿದೆ ಎಂದರು.

RELATED ARTICLES

Latest News