ಚಿಕ್ಕಮಗಳೂರು, ಜೂ.25– ಸಮವಸ್ತ್ರ ಇಲ್ಲ ಎಂದು ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತರಿಕೆರೆ ತಾಲೂಕಿನಲಿಂಗದಹಳ್ಳಿ ಸಮೀಪದ ಸಹ್ಯಾದ್ರಿಪುರದಲ್ಲಿ ನಡೆದಿದೆ.
ನಂದಿತಾ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.ಶಾಲೆಯಲ್ಲಿ ಸಮವಸ್ತ್ರ ಧರಿಸದ ಹಿನ್ನಲೆ ಶಿಕ್ಷಕರು ಪ್ರಶ್ನಿಸಿದ್ದರು ಎನ್ನಲಾಗಿದೆ.
ಎರಡು ವರ್ಷ ಶಾಲೆ ಬಿಟ್ಟಿದ್ದ ವಿದ್ಯಾರ್ಥಿನಿ ಬಳಿ ಹಳೇ ಡ್ರೆಸ್ ಕೂಡ ಇರಲಿಲ್ಲ ಎನ್ನಲಾಗಿದೆ. ಮನೆಗೆ ಬಂದು ಪೋಷಕರ ಬಳಿ ಯೂನಿಫಾರಂ ಕೇಳಿದ್ದು, ಎರಡು ದಿನದಲ್ಲಿ ಕೊಡಿಸುತ್ತೇನೆ ಎಂದು ಬಾಲಕಿ ತಂದೆ ಹೇಳಿದ್ದರು.
ಯೂನಿಫಾರಂ ಇಲ್ಲವೆಂದು ಮನನೊಂದು ವಿದ್ಯಾರ್ಥಿನಿ ವಿಷ ಸೇವಿಸಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಸ್ಟೀರಾಯ್ಡ್ ಮತ್ತು ಔಷಧ ಸೇವಿಸುವವರೇ ಹುಷಾರ್, ನಿಮ್ಮ ಹೃದಯಕ್ಕಿಲ್ಲ ಗ್ಯಾರಂಟಿ
- ದುಪ್ಪಟ್ಟು ಬಾಡಿಗೆ ವಸೂಲಿ ಮಾಡಿದ 120 ಕ್ಕೂ ಹೆಚ್ಚು ಆಟೋ ಸೀಜ್
- ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯಲ್ಲಿ ಕೋಟ್ಯಾಂತರ ರೂ. ಗೋಲ್ಮಾಲ್
- ಬಿಜೆಪಿ ಜತೆಗಿನ ಮೈತ್ರಿ ಸಮರ್ಥಿಸಿಕೊಂಡ ಪಳನಿಸ್ವಾಮಿ
- ಜು.3 ರಿಂದ ಅಮರನಾಥ ಯಾತ್ರೆ, ಭದ್ರತೆ ಪರಿಶೀಲನೆ