Sunday, September 15, 2024
Homeರಾಷ್ಟ್ರೀಯ | Nationalಉತ್ತರ ಪ್ರದೇಶ : ಸರಣಿ ಅಪಘಾತಕ್ಕೆ ಇಡಿ ಕುಟುಂಬ ಬಲಿ

ಉತ್ತರ ಪ್ರದೇಶ : ಸರಣಿ ಅಪಘಾತಕ್ಕೆ ಇಡಿ ಕುಟುಂಬ ಬಲಿ

Child Among 5 Killed in Multi-Vehicle Collision in Uttar Pradesh's Barabanki

ಲಕ್ನೋ,ಸೆ.6- ಸರಣಿ ಅಪಘಾತ ಸಂಭವಿಸಿ ಒಂದೇ ಕುಟುಂಬದ ಐವರು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಮಧ್ಯರಾತ್ರಿ ನಡೆದಿದೆ.ವೇಗವಾಗಿ ಬಂದ ಕಾರು ಇತರೆ ಎರಡು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಪ್ರದೇಶದ ಮೆಹಮೂದಾಬಾದ್‌ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಲಕ್ನೋ ಕಡೆಗೆ ಹೋಗುತ್ತಿದ್ದ ಅತಿವೇಗದ ಕಾರು ಮೊದಲು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ನಂತರ ವಿರುದ್ಧ ದಿಕ್ಕಿನಿಂದ ಬಂದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡನೇ ಕಾರು ಸಮೀಪದ ಹೊಂಡಕ್ಕೆ ಹಾರಿದೆ.

ಸ್ಥಳೀಯರು ಕೂಡಲೇ ರಕ್ಷಣೆ ಮಾಡಲು ಮುಂದಾದರು. ಮೂವರು ಸ್ಥಳದಲ್ಲೇ ಮತಪಟ್ಟರೆ, ಇಬ್ಬರು ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ. ಮತರೆಲ್ಲರೂ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಟೋದಲ್ಲಿ ಹೋಗುತ್ತಿದ್ದರು.

ಮತರನ್ನು ಇರ್ಫಾನ್‌, ವಹಿದುನ್‌ ನಿಶಾ, ಅಜೀಜ್‌ ಅಹದ್‌ (ಅಲಿಯಾಸ್‌‍ ಬುದ್ಧ), ತಾಹಿರಾ ಬಾನೋ ಮತ್ತು ಸಬ್ರೀನ್‌ ಎಂದು ಗುರುತಿಸಲಾಗಿದೆ, ಎಲ್ಲರೂ ಬಾರಾಬಂಕಿ ಜಿಲ್ಲೆಯ ಒಂದೇ ಕುಟುಂಬದವರು. ಕಾರು ಚಾಲಕ ವಿವೇಕ್‌ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

RELATED ARTICLES

Latest News