Monday, September 16, 2024
Homeರಾಷ್ಟ್ರೀಯ | Nationalಇಯರ್‌ಫೋನ್‌ ವ್ಯಾಮೋಹದಿಂದ ರೈಲಿಗೆ ಬಲಿಯಾದ ಪೊಲೀಸಪ್ಪ

ಇಯರ್‌ಫೋನ್‌ ವ್ಯಾಮೋಹದಿಂದ ರೈಲಿಗೆ ಬಲಿಯಾದ ಪೊಲೀಸಪ್ಪ

UP Police Constable Wearing Earphones Hit By Train While Crossing Tracks, Dies

ನವದೆಹಲಿ,ಸೆ.6- ಇಯರ್‌ ಪೋನ್‌ ವ್ಯಾಮೋಹಕ್ಕೆ ಪೊಲೀಸ್‌‍ ಪೇದೆಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.ಇಯರ್‌ಫೋನ್‌ ಹಾಕಿಕೊಂಡು ಹೋಗುತ್ತಿದ್ದ ಪೊಲೀಸಪ್ಪನಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಣ ಕಳೆದುಕೊಂಡ ನತದೃಷ್ಟ ಪೊಲೀಸಪ್ಪನನ್ನು ಶಾಮ್ಲಿ ಜಿಲ್ಲೆಯ ನಿವಾಸಿ ಅಕ್ಷಯ್‌ವೀರ್‌ ಸಿಂಗ್‌ ಎಂದು ಗುರುತಿಸಲಾಗಿದೆ.ನಿನ್ನೆ ಅವರು ಶಹಜಹಾನ್‌ಪುರದ ಇಂದಿರಾನಗರ ರೈಲ್ವೆ ಕ್ರಾಸಿಂಗ್‌ನಲ್ಲಿ ಇಬ್ಬರು ಪುರುಷರೊಂದಿಗೆ ರೈಲ್ವೆ ಹಳಿ ದಾಟುತ್ತಿದ್ದರು.

ಈ ಸಂದರ್ಭದಲ್ಲಿ ರೈಲು ಬಂದರೂ ಇಯರ್‌ಫೋನ್‌ ಹಾಕಿಕೊಂಡಿದ್ದರಿಂದ ರೈಲು ಬರುವುದು ತಿಳಿಯದ ಕಾರಣ ರೈಲು ಅಪ್ಪಳಿಸಿ ಆತ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ಸಿಂಗ್‌ಗೆ ರೈಲು ಅಪ್ಪಳಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೇರೆಯಾಗಿದೆ. ಅಪಘಾತದಲ್ಲಿ ಅವರ ಒಂದು ಕಾಲು ತುಂಡಾಗಿದ್ದು, ಅತಿಯಾದ ರಕ್ತಸ್ರಾವದಿಂದ ಚಿಕಿತ್ಸೆ ವೇಳೆ ಮತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News