Sunday, July 21, 2024
Homeರಾಷ್ಟ್ರೀಯಟ್ರಕ್‍ಗೆ ಅಪ್ಪಳಿಸಿ ಹೊತ್ತಿ ಉರಿದ ಕಾರು, 8 ಮಂದಿ ಸಜೀವ ದಹನ

ಟ್ರಕ್‍ಗೆ ಅಪ್ಪಳಿಸಿ ಹೊತ್ತಿ ಉರಿದ ಕಾರು, 8 ಮಂದಿ ಸಜೀವ ದಹನ

ಲಖನೌ,ಡಿ.10- ಉತ್ತರ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ಹೆದ್ದಾರಿಯಲ್ಲಿ ಟ್ರಕ್‍ಗೆ ಕಾರು ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಮಗು ಸೇರಿದಂತೆ ಎಂಟು ಮಂದಿ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಸೆಂಟ್ರಲ್ ಲಾಕ್ ಆಗಿದ್ದ ಕಾರು ಬರೇಲಿಯಲ್ಲಿ ಏಳು ವಯಸ್ಕರು ಮತ್ತು ಮಗುವನ್ನು ಸಿಕ್ಕಿಹಾಕಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸ್ಥಳದ ದೃಶ್ಯಾವಳಿಗಳ ಪ್ರಕಾರ, ನೈನಿತಾಲ್ ಹೆದ್ದಾರಿಯಲ್ಲಿ ಟ್ರಕ್ ಪಕ್ಕದಲ್ಲಿ ಹೊತ್ತಿ ಉರಿಯುತ್ತಿರುವ ಕಾರು ಕಂಡುಬಂದಿದೆ. ಅಪಘಾತದ ನಂತರ ಕಾರಿನ ಬಾಗಿಲುಗಳು ಜಾಮ್ ಆಗಿತ್ತು ಮತ್ತು ಅದನ್ನು ತೆರೆಯಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಆ್ಯಪ್

ಕಾರು ಎದುರಿನ ಲೇನ್‍ಗೆ ತಿರುಗಿ ಟ್ರಕ್‍ಗೆ ಡಿಕ್ಕಿ ಹೊಡೆದಿದೆ ಎಂದು ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಚಂದ್ರ ಭನ್ ಧುಲೆ ತಿಳಿಸಿದ್ದಾರೆ. ಭೋಜಿಪುರದ ಬಳಿ ಹೆದ್ದಾರಿಯಲ್ಲಿ ಕಾರು ಟ್ರಕ್‍ಗೆ ಡಿಕ್ಕಿ ಹೊಡೆದು ಎಳೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತು. ಅದು ಸೆಂಟ್ರಲ್ ಲಾಕ್ ಆಗಿದ್ದು, ಬೆಂಕಿಯಿಂದಾಗಿ ಒಳಗಿದ್ದ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಯಾಣಿಕರು ಮದುವೆಗೆ ತೆರಳುತ್ತಿದ್ದರು, ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

RELATED ARTICLES

Latest News