Friday, May 3, 2024
Homeರಾಷ್ಟ್ರೀಯಭಾರತ-ಪ್ಯಾಲೇಸ್ತೀನ್‍ ದೀರ್ಘಕಾಲದ ಸಂಬಂಧ ಮುಂದುವರೆಯಲಿದೆ : ಜೈಶಂಕರ್

ಭಾರತ-ಪ್ಯಾಲೇಸ್ತೀನ್‍ ದೀರ್ಘಕಾಲದ ಸಂಬಂಧ ಮುಂದುವರೆಯಲಿದೆ : ಜೈಶಂಕರ್

ನವದೆಹಲಿ,ಡಿ.10- ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಪ್ಯಾಲೇಸ್ತೀನ್ ಪ್ರಧಾನಿ ಮೊಹಮ್ಮದ್ ಶತಾಯೆಹ್ ಅವರೊಂದಿಗೆ ಶನಿವಾರ ಮಾತುಕತೆ ನಡೆಸಿದರು. ಜೈಶಂಕರ್ ಅವರು ಪ್ಯಾಲೆಸ್ತೀನ್ ಕುರಿತು ಭಾರತದ ದೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದರು. ಟೆಲಿಫೋನಿಕ್ ಸಂಭಾಷಣೆಯ ಸಮಯದಲ್ಲಿ ಮೊಹಮ್ಮದ್ ಸ್ತಯ್ಯೆ ಅವರು ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿನ ಪರಿಸ್ಥಿತಿಯ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದರು. ಉಭಯ ನಾಯಕರು ಸಂಪರ್ಕದಲ್ಲಿರಲು ಒಪ್ಪಿಕೊಂಡರು.

ಪ್ಯಾಲೆಸ್ತೀನ್ ಪ್ರಧಾನಿ ಮೊಹಮ್ಮದ್ ಶತಾಯೆಹ್ ಅವರೊಂದಿಗೆ ಮಾತನಾಡಿದ್ದೇನೆ ಅವರು ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಎರಡರ ಪರಿಸ್ಥಿತಿಯ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದರು. ಪ್ಯಾಲೆಸ್ತೀನ್ ಕುರಿತು ಭಾರತದ ದೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದರು. ಸಂಪರ್ಕದಲ್ಲಿರಲು ಒಪ್ಪಿಕೊಂಡರು ಎಂದು ಜೈಶಂಕರ್ ಎಕ್ಸ್‍ನಲ್ಲಿ ಫೋಸ್ಟ್ ಮಾಡಿದ್ದಾರೆ.

ಪ್ಯಾಲೆಸ್ತೀನ್ ಸಮಸ್ಯೆಗೆ ಸಂಬಂಧಿಸಿದಂತೆ ಭಾರತದ ನಿಲುವು ದೀರ್ಘಕಾಲದ ಮತ್ತು ಸ್ಥಿರವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅರಿಂದಮ್ ಬಾಗ್ಚಿ ಅಕ್ಟೋಬರ್ 12 ರಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅರಿಂದಮ್ ಬಾಗ್ಚಿ, ಭಾರತವು ಯಾವಾಗಲೂ ಇಸ್ರೇಲ್‍ನೊಂದಿಗೆ ಶಾಂತಿಯಿಂದ ಸುರಕ್ಷಿತ ಮತ್ತು ಮಾನ್ಯತೆ ಪಡೆದ ಗಡಿಗಳಲ್ಲಿ ವಾಸಿಸುವ ಪ್ಯಾಲೆಸ್ತೀನ್‍ನ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ರಾಜ್ಯವನ್ನು ಸ್ಥಾಪಿಸುವ ಕಡೆಗೆ ನೇರ ಮಾತುಕತೆಗಳ ಪುನರಾರಂಭವನ್ನು ಪ್ರತಿಪಾದಿಸುತ್ತದೆ. ಆ ಸ್ಥಾನವು ಹಾಗೆಯೇ ಉಳಿದಿದೆ ಎಂದಿದ್ದರು.

ಹಂಗಾಮಿ ಸ್ಪೀಕರ್ ಆಗಿ ಅಕ್ಬರುದ್ದೀನ್ ಓವೈಸಿ ನೇಮಕ, ಪ್ರಮಾಣವಚನ ಬಹಿಷ್ಕರಿಸಿದ ಬಿಜೆಪಿ

ಕಳೆದ ಅಕ್ಟೋಬರ್‍ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತನಾಡಿದ್ದರು ಮತ್ತು ಗಾಜಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ಜೀವಹಾನಿಯ ಬಗ್ಗೆ ಸಂತಾಪ ಸೂಚಿಸಿದರು.ಇಸ್ರೇಲ-ಪ್ಯಾಲೆಸ್ತೀನ್ ವಿಷಯದಲ್ಲಿ ಭಾರತದ ದೀರ್ಘಕಾಲೀನ ತತ್ವದ ನಿಲುವನ್ನು ಪುನರುಚ್ಚರಿಸುವಾಗ ಪ್ಯಾಲೆಸ್ತೀನ್ ಜನರಿಗೆ ಮಾನವೀಯ ನೆರವು ನೀಡುವ ಭಾರತದ ಬದ್ಧತೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.

ಪ್ಯಾಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತನಾಡಿದರು. ಗಾಜಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ನಾಗರಿಕರ ಪ್ರಾಣಹಾನಿಗಾಗಿ ನನ್ನ ಸಂತಾಪವನ್ನು ತಿಳಿಸಿದ್ದೇನೆ. ನಾವು ಪ್ಯಾಲೆಸ್ತೀನ್ ಜನರಿಗೆ ಮಾನವೀಯ ನೆರವು ಕಳುಹಿಸುವುದನ್ನು ಮುಂದುವರಿಸುತ್ತೇವೆ ಎಂದು ಪ್ರಧಾನಿ ಮೋದಿ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

RELATED ARTICLES

Latest News