Thursday, May 2, 2024
Homeರಾಷ್ಟ್ರೀಯಹಂಗಾಮಿ ಸ್ಪೀಕರ್ ಆಗಿ ಅಕ್ಬರುದ್ದೀನ್ ಓವೈಸಿ ನೇಮಕ, ಪ್ರಮಾಣವಚನ ಬಹಿಷ್ಕರಿಸಿದ ಬಿಜೆಪಿ

ಹಂಗಾಮಿ ಸ್ಪೀಕರ್ ಆಗಿ ಅಕ್ಬರುದ್ದೀನ್ ಓವೈಸಿ ನೇಮಕ, ಪ್ರಮಾಣವಚನ ಬಹಿಷ್ಕರಿಸಿದ ಬಿಜೆಪಿ

ಹೈದರಾಬಾದ್, ಡಿ.9- ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಅಧಿಕಾರ ವಹಿಸಿಕೊಂಡ ಮರುಕ್ಷಣವೇ ಹಂಗಾಮಿ ಸ್ಪೀಕರ್ ಆಯ್ಕೆ ಭಾರೀ ವಿವಾದ ಸೃಷ್ಟಿಯಾಗಿದೆ. ಕಾಂಗ್ರೆಸ್ ಬಹುಮತ ಗಳಿಸಿದ್ದರೂ ಎಐಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಅವರನ್ನು ರಾಜ್ಯ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ರಾಜ್ಯ ಸರ್ಕಾರ ಶಿಫಾರಸು ಮಾಡಿರುವುದನ್ನು ಖಂಡಿಸಿ ತೆಲಂಗಾಣ ಬಿಜೆಪಿ ಭಾರೀ ಪ್ರತಿಭಟನೆ ನಡೆಸಿದೆ.

ವಿಧಾನಸಭೆಯಲ್ಲಿಂದು ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ನಡೆಯುತ್ತಿದ್ದು, ಇದನ್ನು ಬಿಜೆಪಿಯಿಂದ ಆಯ್ಕೆಯಾಗಿರುವ ಎಂಟೂ ಶಾಸಕರು ಬಹಿಷ್ಕರಿಸಿದ್ದಾರೆ. ನಾನು ಹೊಸ ಸ್ಪೀಕರ್ ಆಯ್ಕೆಯಾಗುವವರೆಗೂ ಶಾಸಕನಾಗಿ ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಟಿ.ರಾಜಾಸಿಂಗ್ ಹೇಳಿದ್ದಾರೆ.

ಬೆಂಗಳೂರು ಸೇರಿ ದೇಶದ 40ಕ್ಕೂ ಹೆಚ್ಚು ಕಡೆ ಎನ್‍ಐಎ ದಾಳಿ

ಸದಾ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವ ಓವೈಸಿ ಅವರ ಕುಟುಂಬದವರನ್ನು ಓಲೈಸಲು ಕಾಂಗ್ರೆಸ್ ಈ ಲಾಬಿ ಮಾಡಿದೆ. ಅಕ್ಬರುದ್ದೀನ್ ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದ್ದಾರೆ.

ಹಿಂದೂ ವಿರೋಧಿ ಹೇಳಿಕೆ ನೀಡಿ ಸಂವಿಧಾನಕ್ಕೆ ಅಪಚಾರ ಮಾಡಿರುವವರನ್ನು ಈ ಸ್ಥಾನದಲ್ಲಿ ಕೂರಿಸುವುದು ಸರಿಯಲ್ಲ. ಈ ಬಗ್ಗೆ ನಾನು ಜನರ ಬಳಿಗೆ ಹೋಗುತ್ತೇನೆ ಎಂದು ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗಿ ಸ್ರ್ಪಧಿಸಿದ್ದ ರೇವಂತ್ ರೆಡ್ಡಿ ಹಾಗೂ ಮಾಜಿ ಸಿಎಂ ಚಂದ್ರಶೇಖರ್ ರಾವ್ ಅವರನ್ನು ಮಣಿಸಿ ಗೆದ್ದಿರುವ ಟಿ.ರಾಜಾಸಿಂಗ್ ಹೇಳಿದ್ದಾರೆ.

RELATED ARTICLES

Latest News