ನಾಡಿನ ಭಕ್ತರ ಕಣ್ಮನ ಸೆಳೆಯಲು ಧರ್ಮಸ್ಥಳ ಸಜ್ಜು

Social Share

ಬೆಳ್ತಂಗಡಿ, ನ.19- ನಾಡಿನ ಚತುರ್ದಾನ ಶ್ರೇಷ್ಠ ಪರಂಪರೆಯ ಪರಂಪರಾಗತ ವೈಭವದಿಂದಲೇ ಕಂಗೊಳಿಸುವ ದಾನ ಧರ್ಮದ ನೆಲೆವೀಡು, ಆಧ್ಮಾತ್ಮ, ಕಲೆ, ಸಾಹಿತ್ಯ, ಪೋಷಣೆಯ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ಇಂದಿನಿಂದ ಐದು ದಿನಗಳ ಕಾಲ ಭಕ್ತಕೋಟಿಯ ಒಡಲಲಿ ಅಚ್ಚಳಿಯದಂತೆ ಉಳಿಸುವ ಲಕ್ಷ ದೀಪೋತ್ಸವ ವೈಭವೋಪೇತವಾಗಿ ಆರಂಭಗೊಳ್ಳಲಿದೆ.

ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಂಪೂರ್ಣ ನೇತೃತ್ವದಲ್ಲಿ ನೆರವೇರಲಿದೆ. ಇದಕ್ಕಾಗಿಯೇ ಕ್ಷೇತ್ರದ ಸುತ್ತಮುತ್ತ ಕಳೆದ ಒಂದು ತಿಂಗಳಿಂದ ಸ್ವಚ್ಛತೆ, ಅಲಂಕಾರ ಸಹಿತ ಸಂಪೂರ್ಣ ಸಿದ್ಧತೆ ನಡೆಸಲಾಗಿದೆ.

ದೇವಸ್ಥಾನ, ಬೀಡು, ಅನ್ನಛತ್ರ, ಮುಖ್ಯಧ್ವಾರ, ವಸತಿಗೃಹ, ಅಮೃತವರ್ಷಿಣಿ ಸಭಾಭವನ, ವಸಂತಮಹಾಲ, ಮಂಜೂಷಾ ವಸ್ತುಸಂಗ್ರಹಾಲಯ, ಅಣ್ಣಪ್ಪ ಬೆಟ್ಟ, ಬಾಹುಬಲಿ ಬೆಟ್ಟ ರಸ್ತೆಯನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.

ಇದೇ ಮೊದಲ ಬಾರಿಗೆ ಹೊರಜಗತ್ತಿಗೆ ಕಾಣಿಸಿಕೊಂಡ ಕಿಮ್ ಪುತ್ರಿ

ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಲಕ್ಷದೀಪೋತ್ಸವ ಪೂರ್ವ ತಯಾರಿಗೆ ಭಕ್ತರಿಗೆ ಯಾವುದೇ ಅಡಚಣೆಯಾಗದಂತೆ ಸರ್ವ ಸಿದ್ಧತೆ ಕೈಗೊಳ್ಳಲಾಗಿದೆ. ಧರ್ಮಸ್ಥಳ ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನ ಆಯೋಜಿಸಿದ್ದು ಕೃಷಿ, ಬ್ಯಾಂಕ್‍ಗಳು, ವಾಣಿಜ್ಯ, ಕೈಗಾರಿಕೆಗೆ ಸಂಬಂಧಿಸಿದ 200 ಕ್ಕೂ ಮಿಕ್ಕಿ ಮಳಿಗೆಗಳಿವೆ.

ಶಾಸಕ ಹರೀಶ್ ಪೂಂಜ ಅವರು ಇಂದು ಬೆಳಗ್ಗೆ 10.30 ಕ್ಕೆ ವಸ್ತುಪ್ರದರ್ಶನ ಉದ್ಘಾಟಿಸಿದರು. ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿದ್ದರು. ವಸ್ತು ಪ್ರದರ್ಶನದಲ್ಲಿ ಬ್ಯಾಂಕ್, ಸರಕಾರಿ, ಸಂಘ-ಸಂಸ್ಥೆ ಸಹಿತ ಒಟ್ಟು 72 ಮಳಿಗೆಗಳಿಗೆ ಉಚಿತ ಪ್ರವೇಶ. ಉಳಿದಂತೆ 52 ಆಹಾರ ಮಳಿಗೆಗಳಿವೆ. ಒಟ್ಟು 321 ರ ಪೈಕಿ 196 ಮಳಿಗೆಗಳನ್ನು ನೀಡಲಾಗಿತ್ತು.

ಇದರ ಮೇಲುಸ್ತುವಾರಿಯನ್ನು ರತ್ನಮಾನಸದ ನಿಲಯಪಾಲಕರಾದ ಯತೀಶ್ ಕೆ.ಬಳಂಜ ಅವರಿಗೆ ನೀಡಲಾಗಿತ್ತು. ವಸ್ತುಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳಿವೆ. ಬೆಳಗ್ಗೆ 9 ಗಂಟೆಯಿಂದ ವಸ್ತು ಪ್ರದರ್ಶನ ವೀಕ್ಷಿಸಲು ಉಚಿತ ಅವಕಾಶ ನೀಡಲಾಗಿತ್ತು.

“ಮೋದಿಯಂತಹ ನಾಯಕನಿಲ್ಲದಿದ್ದರೆ ನಗರಕ್ಕೊಬ್ಬ ಅಫ್ತಾಬ್ ಹುಟ್ಟುತ್ತಾನೆ”

ಕ್ಷೇತ್ರದಲ್ಲಿ ಪ್ರತಿದಿನ ಸಾಂಸ್ಕøತಿಕ ಕಾರ್ಯಕ್ರಮ, ನೃತ್ಯ, ಶಾಸ್ತ್ರೀಯ ಸಂಗೀತ ಅಹಿತ ಕಲಾ ಸಾಗರವೇ ಕ್ಷೇತ್ರದಲ್ಲಿ ಮೇಳೈಸಲಿದೆ. ನಾಡಿನಾದ್ಯಂತ ಲಕ್ಷೋಪ ಲಕ್ಷ ಭಕ್ತರು ಆಗಮಿಸುವರು. ಇದಕ್ಕಾಗಿ ಕ್ಷೇತ್ರದ ಎಲ್ಲ ರಸ್ತೆಗಳಲ್ಲಿ ವಿಶೇಷ ಸಂತೆಗೆ ಅವಕಾಶ ಮಾಡಿಕೊಡಲಾಗಿದೆ. ಪೀಠೋಪಕರಣ, ಮನೆ ಗೃಹೋಪಯೋಗಿ ಪರಿಕರ, ಅಲಂಕಾರಿಕ ವಸ್ತುಗಳ ಮಳಿಗೆಗಳು ಎಲ್ಲಾಡೆ ತೆರೆದುಕೊಳ್ಳಲಿದೆ.

ಪ್ರತಿವರ್ಷ ಮತದಾರರ ಪಟ್ಟಿ ಪರಿಷ್ಕರಣೆ ಆಗುತ್ತೆ, ಕಾಂಗ್ರೆಸ್ ಆರೋಪದಲ್ಲಿ ಸತ್ಯಾಂಶವಿಲ್ಲ : ಸಿಎಂ

ಲಕ್ಷದೀಪೋತ್ಸವ ಪ್ರಯುಕ್ತ ಐದು ದಿನಗಳ ಕಾಲ ಕ್ಷೇತ್ರದಲ್ಲಿ ಭಕ್ತರಿಗೆ ಊಟದ ವ್ಯವಸ್ಥೆಯಿರಲಿದೆ. ಆದರೆ ನ.23 ರಂದು ರಾತ್ರಿ ಕ್ಷೇತ್ರದ ಅನ್ನಛತ್ರ ಕಾರ್ಯಾಚರಿಸುವುದಿಲ್ಲ. ಅಂದು ಅನ್ನಪೂರ್ಣ ಛತ್ರ ಹಿಂಭಾಗ ರಾಜ್ಯದ ನಾನಾ ಕಡೆಗಳಿಂದ ಆಗಮಿಸುವ ಭಕ್ತರಿಗೆ ಭಕ್ತರೇ ವಿಶೇಷ ಖಾದ್ಯ ಉಣಬಡಿಸುವುದು ವಿಶೇಷವಾಗಿದೆ.

Dharmasthala, Laksha, Deepotsava,

Articles You Might Like

Share This Article