Saturday, December 14, 2024
Homeರಾಜ್ಯವಿದ್ಯುತ್ ಖರೀದಿಗೆ 1997 ಕೋಟಿ ರೂ. ಬಳಕೆ : ಕೆ.ಜೆ.ಜಾರ್ಜ್

ವಿದ್ಯುತ್ ಖರೀದಿಗೆ 1997 ಕೋಟಿ ರೂ. ಬಳಕೆ : ಕೆ.ಜೆ.ಜಾರ್ಜ್

ಬೆಂಗಳೂರು, ಡಿ.9- ತಡೆರಹಿತ ವಿದ್ಯುತ್ ಸರಬರಾಜು ತಡೆಗಾಗಿ ಕಳೆದ ವರ್ಷ 476.61 ಕೋಟಿ ರೂ.ಗಳನ್ನು ವೆಚ್ಚ ಮಾಡಿ ವಿದ್ಯುತ್ ಖರೀದಿಸಲಾಗಿದ್ದು, ಈ ವರ್ಷ ಅಕ್ಟೋಬರ್ ವೇಳೆಗೆ 1997.29 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ರಾಯಭಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಮಹಾಲಿಂಗಪ್ಪ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, 2022-23ರಲ್ಲಿ 37 ಸಾವಿರ ಮಿಲಿಯನ್ ಯುನಿಟ್ ಮತ್ತು 2023-24 ನೇ ಸಾಲಿನ ಏಪ್ರಿಲ್‍ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ವಿವಿಧ ಮೂಲಗಳಿಂದ 46,847.42 ಮಿಲಿಯನ್ ಯುನಿಟ್ ವಿದ್ಯುತ್ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯಸರ್ಕಾರ ನೇರವಾಗಿ ಇತರ ರಾಜ್ಯಗಳಿಂದಾಗಲಿ ಅಥವಾ ಖಾಸಗಿ ಕಂಪನಿಗಳಿಂದಾಗಲಿ ವಿದ್ಯುತ್ ಖರೀದಿಸುವುದಿಲ್ಲ. ಆದರೆ ವಿವಿಧ ವಿದ್ಯುತ್ ವಿನಿಮಯ ಕೇಂದ್ರಗಳ ಮೂಲಕ ಖರೀದಿಸಲಾಗುತ್ತದೆ. ಅದರ ಪ್ರಕಾರ, ಈ ವರ್ಷ ಐಇಎಕ್ಸ್ ವಿನಿಮಯ ಕೇಂದ್ರದಿಂದ ಪ್ರತಿ ಯುನಿಟ್‍ಗೆ 6.81 ಪೈಸೆಯಂತೆ 1544.52 ಮಿಲಿಯನ್ ಯುನಿಟ್‍ಗಳನ್ನು 1036.12 ಕೋಟಿ ರೂ. ವೆಚ್ಚ ಮಾಡಿ ಖರೀದಿಸಲಾಗಿದೆ.

ಲೀಲಾವತಿ ಅವರ ಅಂತಿಮ ದರ್ಶನ ಪಡೆದ ಗಣ್ಯರು, ಸಾರ್ವಜನಿಕರು

ಟಿಎಕ್ಸ್‍ಐಎಲ್ ಸಂಸ್ಥೆಯಿಂದ ಯುನಿಟ್‍ಗೆ 7.58 ರೂ.ನಂತೆ 69.20 ಕೋಟಿ ಖರ್ಚು ಮಾಡಿ 91.31 ಮಿಲಿಯನ್ ಯುನಿಟ್, ಎಚ್‍ಪಿಎಕ್ಸ್ ವಿನಿಮಯ ಕೇಂದ್ರದಿಂದ ಪ್ರತಿ ಯುನಿಟ್‍ಗೆ 7.63 ರೂ.ನಂತೆ 91.97 ಕೋಟಿ ವೆಚ್ಚ ಮಾಡಿ 120.50 ಮಿಲಿಯನ್ ಯುನಿಟ್ ಅನ್ನು ಖರೀದಿಸಲಾಗಿದೆ. ಒಟ್ಟು 1756.33 ಮಿಲಿಯನ್ ಯುನಿಟ್‍ಗೆ 1197.29 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಒಟ್ಟಾರೆ ಸರಾಸರಿ ಯುನಿಟ್‍ನ ದರ 6.82 ರೂ.ಗಳು ಎಂದು ತಿಳಿಸಿದ್ದಾರೆ.

ಕಳೆದ ವರ್ಷ 476.61 ಕೋಟಿಗಳನ್ನು ಬಳಕೆ ಮಾಡಿ 589.14 ಮಿಲಿಯನ್ ಯುನಿಟ್‍ಗಳನ್ನು ಖರೀದಿಸಲಾಗಿತ್ತು. ಪ್ರತಿ ಯುನಿಟ್‍ಗೆ 8.09 ರೂ. ಸರಾಸರಿ ದರ ನೀಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ. ಪಂಜಾಬ್ ಹಾಗೂ ಉತ್ತರ ಪ್ರದೇಶಗಳ ರಾಜ್ಯಗಳಿಂದ ವಿದ್ಯುತ್ ವಿನಿಮಯ ಆಧಾರದ ಮೇಲೆ ಪ್ರತಿದಿನ 8.9 ಮಿಲಿಯನ್ ಯುನಿಟ್‍ಗಳನ್ನು ಪಡೆದುಕೊಳ್ಳಲಾಗುತ್ತಿದೆ. ರೈತರ ಕೃಷಿ ಪಂಪ್‍ಸೆಟ್‍ಗಳಿಗೆ 7 ಗಂಟೆ ಕಾಲ ತ್ರಿ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

2023-24 ನೇ ಸಾಲಿಗೆ 89112 ವಿದ್ಯುತ್ ಬೇಡಿಕೆಯಾಗಬಹುದು ಎಂಬ ಅಂದಾಜಿದೆ. ದಿನವಹಿ ಸರಾಸರಿ ಬೇಡಿಕೆಯ ಪರಿಮಾಣ ಏಪ್ರಿಲ್‍ನಿಂದ ಸೆಪ್ಟೆಂಬರ್ ನಡುವೆ 245.20 ಮಿಲಿಯನ್ ಯುನಿಟ್‍ಗಳಾಗಿವೆ. ಬರಗಾಲದ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News