Saturday, February 24, 2024
Homeಮನರಂಜನೆದರ್ಶನ್‍ಗಾಗಿ ಮತ್ತೆ ಸ್ಯಾಂಡಲ್‍ವುಡ್‍ಗೆ ಮೆಗಾಸ್ಟಾರ್ ರೀಎಂಟ್ರಿ..?

ದರ್ಶನ್‍ಗಾಗಿ ಮತ್ತೆ ಸ್ಯಾಂಡಲ್‍ವುಡ್‍ಗೆ ಮೆಗಾಸ್ಟಾರ್ ರೀಎಂಟ್ರಿ..?

ಬೆಂಗಳೂರು, ಡಿ.27- ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷೆಯ ಸಿನಿಮಾ ಕಾಟೇರ ಚಿತ್ರ ಬಿಡುಗಡೆಗೂ ಮುನ್ನವೇ ಡಿ ಬಾಸ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಡಿ ಬಾಸ್ ದರ್ಶನ್ ಅವರು ಕಾಟೇರ ಸಿನಿಮಾದ ನಂತರ ತಮ್ಮ ಮುಂದಿನ ಪ್ರಾಜೆಕ್ಟ್ ಸಿನಿಮಾದಲ್ಲಿ ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾವೊಂದಕ್ಕೆ ಕಾಲ್‍ಶೀಟ್ ಕೊಟ್ಟಿದ್ದಾರೆ ಎಂಬ ವಿಷಯ ಈಗಾಗಲೇ ಭರ್ಜರಿ ಸದ್ದು ಮಾಡಿದ್ದು, ಈ ನಡುವೆ ಡಿ ಬಾಸ್ ಜೊತೆ ಮೆಗಾಸ್ಟಾರ್ ಚಿರಂಜೀವಿ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಾರೆ ಎಂಬ ಸುದ್ದಿಯೂ ಗಾಂಧಿನಗರದಲ್ಲಿ ಭಾರೀ ಸದ್ದು ಮಾಡಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಡಿಸೆಂಬರ್ 22 ರಂದು ನಿರ್ದೇಶಕ ಪ್ರೇಮ್ ಅವರು ಹೈದ್ರಾಬಾದ್‍ನಲ್ಲಿ ಮೆಗಾಸ್ಟಾರ್ ಚಿರಂಜೀವಿಯನ್ನು ಭೇಟಿ ಮಾಡಿ ಸಿನಿಮಾದ ಸ್ಕ್ರಿಪ್ಟ್ ಅನ್ನು ಹೇಳಿದ್ದು ಚಿರುಗೆ ಕಥೆ ತುಂಬಾ ಇಷ್ಟವಾಗಿದೆ ಅವರಿಂದ ಪಾಸಿಟಿವ್ ಪ್ರತಿಕ್ರಿಯೆ ಕೂಡ ಸಿಕ್ಕಿದ್ದು ಅವರ ಒಪ್ಪಿಗೆಗಾಗಿ ಚಿತ್ರತಂಡ ಕಾಯುತ್ತಿದೆ.

ಈ ಹಿಂದೆ ಕೇಜ್ರಿಸ್ಟಾರ್ ರವಿಚಂದ್ರನ್ ನಟಿಸಿ, ನಿರ್ದೇಶಿಸಿದ್ದ ಸಿಪಾಯಿ ಸಿನಿಮಾದ ಮೂಲಕ ಮೊದಲ ಬಾರಿ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದ ಮೆಗಾಸ್ಟಾರ್ ಚಿರಂಜೀವಿ ನಂತರ ಕನ್ನಡ ಮತ್ತು ತೆಲುಗು ದ್ವಿಭಾಷೆಯಲ್ಲಿ ತಯಾರಾಗಿದ್ದ ಶ್ರೀ ಮಂಜುನಾಥ ಸಿನಿಮಾದಲ್ಲಿ ನಟಿಸಿದ್ದು, ಈಗ ಮತ್ತೆ ಜೋಗಿ ಪ್ರೇಮ್ ನಿರ್ದೇಶನದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ.

ಸ್ಯಾಂಡಲ್‍ವುಡ್‍ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ವಿಧಿವಶ

2 ದಶಕದ ನಂತರ ಒಂದಾದ ಜೋಡಿ:
ಸ್ಯಾಂಡಲ್‍ವುಡ್‍ನಲ್ಲಿ 20 ವರ್ಷಗಳ ಹಿಂದೆ ಭಾರೀ ಸದ್ದು ಮಾಡಿದ್ದ ಕರಿಯ ಚಿತ್ರದ ಮೂಲಕ ಹಿಟ್ ಜೋಡಿಯಾಗಿ ಗುರುತಿಸಿಕೊಂಡಿದ್ದ ಡಿ ಬಾಸ್ ದರ್ಶನ್ ಹಾಗೂ ಜೋಗಿ ಪ್ರೇಮ್ ಅವರು ಈಗ ಮತ್ತೆ ಕೆವಿಎನ್ ಪ್ರೊಡಕ್ಷನ್ ಚಿತ್ರದ ಮೂಲಕ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕೇಜ್ರಿ ಹುಟ್ಟಿಸಿದ್ದರೆ, ಈ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವುದು ಡಬಲ್ ಖುಷಿ ತಂದಿದೆ. ಎಲ್ಲ ಅಂದುಕೊಂಡಂತೆ ಆದರೆ ಪ್ರೇಮ್- ದರ್ಶನ್ ಕಾಂಬಿನೇಷನ್ ಸಿನಿಮಾವು 2024ರ ಜುಲೈ ಅಥವಾ ಆಗಸ್ಟ್ ವೇಳೆ ಸೆಟ್ಟೇರಬಹುದು. ಆದರೆ ಅದಕ್ಕೂ ಮುನ್ನ ಪ್ರೇಮ್ ಅವರು ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಅವರ ಕೆಡಿ ಸಿನಿಮಾದ ಚಿತ್ರೀಕರಣ ಮುಗಿಸಿ ಚಿತ್ರವನ್ನು ಬಿಡುಗಡೆ ಮಾಡಬೇಕಾಗಿದೆ.

RELATED ARTICLES

Latest News