Sunday, May 5, 2024
Homeಮನರಂಜನೆಸ್ಯಾಂಡಲ್‍ವುಡ್‍ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ವಿಧಿವಶ

ಸ್ಯಾಂಡಲ್‍ವುಡ್‍ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ವಿಧಿವಶ

ಬೆಂಗಳೂರು,ಡಿ.27- ಸ್ಯಾಂಡಲ್‍ವುಡ್ ಸೇರಿ ದಂತೆ ಹಲವು ಭಾಷೆಗಳಲ್ಲಿ ಮೈನವಿರೇಳಿಸುವ ಸಾಹಸ ಮಯ ದೃಶ್ಯಗಳ ಮೂಲಕ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದ ಜಾಲಿಬಾಸ್ಟಿನ್ (57)ಅವರು ಹೃದಯಾಘಾತದಿಂದ ನಿನ್ನೆ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯು ಇಂದು ನೆರವೇರಿದೆ.

ಚಿತ್ರರಂಗ ಪ್ರವೇಶಿಸುವ ಮೂಲಕ ಬೈಕ್ ಮೆಕಾನಿಕ್ ಆಗಿದ್ದ ಜಾಲಿ ಬಾಸ್ಟಿನ್ ಅವರು ಸುಮಾರು 900ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಸಮಯ ದೃಶ್ಯಗಳಿಗೆ ಆಕ್ಷನ್ ಕಟ್ ಹೇಳಿದ್ದು, ಇತ್ತೀಚೆಗೆ ದುನಿಯಾ ವಿಜಯ್ ಅವರ ನಟನೆಯ ಭೀಮ ಸಿನಿಮಾದ ನೈಟ್ ಎಫೆಕ್ಟ್ ಸಾಹಸಮಯ ದೃಶ್ಯವನ್ನು ನಿರ್ದೇಶಿಸಿದ್ದರು.

ಜಾಲಿ ಬಾಸ್ಟಿನ್ ಅವರ ನಿಧನಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ದುನಿಯಾ ವಿಜಿ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ. ಹರೀಶ್ ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

ಮಂಜಿನ ನಗರಿಯಾದ ದೆಹಲಿ, ಆರೆಂಜ್ ಅಲರ್ಟ್ ಘೋಷಣೆ

17ನೇ ವರ್ಷದಲ್ಲೇ ರವಿಚಂದ್ರನ್‍ಗೆ ಡ್ಯೂಪ್ ಹಾಕಿದ್ದ ಜಾಲಿ ಮಾಸ್ಟರ್:
1966ರಲ್ಲಿ ಕೇರಳದ ಅಲೆಪ್ಪೆಯಲ್ಲಿ ಜನಿಸಿದರೂ ಬೆಂಗಳೂರಿನಲ್ಲಿ ಬೆಳೆದ ಜಾಲಿ ಬಾಸ್ಟಿನ್ ಅವರು ಇಲ್ಲೇ ಶಿಕ್ಷಣ ಪಡೆದರು. ಇವರ ಸ್ಟಂಟ್‍ಗಳನ್ನು ಗಮನಿಸಿದ ಕೆಲವು ಸಾಹಸ ನಿರ್ದೇಶಕರು ಅವಕಾಶ ನೀಡಿದರು. ಕೇಜ್ರಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿ, ನಟಿಸಿದ್ದ ಪ್ರೇಮಲೋಕ' ಚಿತ್ರದಲ್ಲಿ ತಮ್ಮ 17ನೇ ವಯಸ್ಸಿನಲ್ಲಿ ಡೂಪ್ ಹಾಕುವ ಮೂಲಕ ಗಮನ ಸೆಳೆದರು. ನಂತರ ಕೇಜ್ರಿಸ್ಟಾರ್ ರವಿಚಂದ್ರನ್ ಅವರ ಕ್ಯಾಂಪ್‍ನಲ್ಲೇ ಹೆಚ್ಚಾಗಿ ಗುರುತಿಸಿಕೊಂಡಿದ್ದ ಜಾಲಿಬಾಸ್ಟಿನ್ ಅವರುಪುಟ್ನಂಜ’, ಅಣ್ಣಯ್ಯ',ಶಾಂತಿ ಕ್ರಾಂತಿ’ ಸೇರಿದಂತೆ ಹಲವು ಚಿತ್ರಗಳಿಗೆ ಅಪಾಯಕಾರಿ ಸಾಹಸ ದೃಶ್ಯಗಳಿಗೆ ಆಕ್ಷನ್ ಕಟ್ ಹೇಳಿದ್ದರು.

ಅಪಾಯದಿಂದ ಪಾರು:
ಕರಾಟೆ ಕಿಂಗ್ ಶಂಕರ್‍ನಾಗ್ ನಟನೆಯ ಭಲೇಚತುರ' ಸಿನಿಮಾದ ಸಾಹಸ ದೃಶ್ಯದ ವೇಳೆ ಬಾಂಬ್ ಬ್ಲಾಸ್ಟ್ ದೃಶ್ಯದ ವೇಳೆ ಗಾಯಗೊಂಡಿದ್ದ ಜಾಲಿ ಮಾಸ್ಟರ್, ರವಿಚಂದ್ರನ್ ನಟನೆಯಪುಟ್ನಂಜ’ ಸಿನಿಮಾದ ಚಿತ್ರೀಕರಣದ ವೇಳೆ ಬೈಕ್‍ನಿಂದ ಬಿದ್ದು ಮುಖ ಹಾಗೂ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು.

ಸಾಹಸ ನಿರ್ದೇಶನವಲ್ಲದೆ `ನಿನಗಾಗಿ ಕಾದಿರುವೆ’ ಚಿತ್ರವನ್ನು ಜಾಲಿಬಾಸ್ಟಿನ್ ಅವರು ನಿರ್ದೇಶಿಸಿದ್ದರು. ಅವರ ನಿಧನದಿಂದಾಗಿ ಕನ್ನಡ ಚಿತ್ರರಂಗವು ಒಬ್ಬ ಪ್ರಬುದ್ಧ ಸಾಹಸ ನಿರ್ದೇಶಕನನ್ನು ಕಳೆದುಕೊಂಡಿದೆ.

RELATED ARTICLES

Latest News