Saturday, April 27, 2024
Homeರಾಜ್ಯ1,608 ಪಿಎಸ್‍ಐ ಹುದ್ದೆಗಳಿಗೆ ನೇಮಕಾತಿ : ಪರಮೇಶ್ವರ್

1,608 ಪಿಎಸ್‍ಐ ಹುದ್ದೆಗಳಿಗೆ ನೇಮಕಾತಿ : ಪರಮೇಶ್ವರ್

ಕಲ್ಬುರ್ಗಿ, ಡಿ.27- ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ಒಟ್ಟು 1,608 ಪಿಎಸ್‍ಐ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ ನೆನೆಗುದಿಗೆ ಬಿದ್ದಿರುವ 545 ಪಿಎಸ್‍ಐಗಳ ನೇಮಕಾತಿಗೆ ಬೆಂಗಳೂರಿನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರಿನಲ್ಲೇ ಪರೀಕ್ಷೆ ನಡೆಸಲು ಸಾಧ್ಯವಿದೆ ಎಂದು ವರದಿ ನೀಡಿದೆ. ಹೀಗಾಗಿ ಈ ಬಾರಿ ರಾಜ್ಯದ ಯಾವ ಭಾಗದಲ್ಲೂ ಪರೀಕ್ಷೆಗಳಾಗುವುದಿಲ್ಲ. ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುತ್ತದೆ ಎಂದರು.

545 ಹುದ್ದೆಗಳ ಪರೀಕ್ಷೆಯ ಗೊಂದಲ ಮರುಕಳಿಸಬಾರದು. ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಕಲ್ಬುರ್ಗಿ ಅಥವಾ ಬೇರೆ ಕಡೆ ಪರೀಕ್ಷೆ ನಡೆದು ಸಣ್ಣಪುಟ್ಟ ಗೊಂದಲಗಳಾದರೆ ಇನ್ನಷ್ಟು ವಿಳಂಬವಾಗುತ್ತದೆ. ಅದಕ್ಕಾಗಿ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನಿಷಕ್ಷಪಾತವಾಗಿ ಪರೀಕ್ಷೆ ನಡೆಸಲು ಬೆಂಗಳೂರಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಸಣ್ಣಪುಟ್ಟ ತೊಂದರೆಗಳಾದರೂ ಕೂಡ ಭವಿಷ್ಯದ ದೃಷ್ಟಿಯಿಂದ ಸಹಕರಿಸುವಂತೆ ಮನವಿ ಮಾಡಿದರು.

ಎರಡನೇ ಹಂತದಲ್ಲಿ 403, ಆ ನಂತರ 660 ಪಿಎಸ್‍ಐ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ನಡೆಯಲಿವೆ. ಈ ಎರಡು ಹಂತಗಳ ನೇಮಕಾತಿಗೆ ಕಲ್ಬುರ್ಗಿ ಸೇರಿದಂತೆ ರಾಜ್ಯಾದ್ಯಂತ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಹೇಳಿದರು. ಕೋವಿಡ್ ಸಂದರ್ಭದಲ್ಲಿ 4 ಸಾವಿರ ಕೋಟಿ ರೂ.ಗಳ ಹಗರಣವಾಗಿರಬಹುದು ಎಂದು ನಾವು ತಿಳಿದುಕೊಂಡಿದ್ದೇವೆ. ಈಗ ನಮ್ಮ ಮಾಹಿತಿ ತಪ್ಪು ಎಂದು ಸ್ಪಷ್ಟವಾಗಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು 4 ಸಾವಿರ ಕೋಟಿ ಅಲ್ಲ, 40 ಸಾವಿರ ಕೋಟಿ ಎಂದು ಹೇಳಿದ್ದಾರೆ ಎಂದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯ ಮನೆಯಲ್ಲಿ ವಾದ್ರಾ ವಾಸ್ತವ್ಯ

ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆ. ತನಿಖಾ ಸಮಿತಿ ಕಾನೂನು ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ. ಯಾರಿಗೆ ನೋಟಿಸ್ ನೀಡಬೇಕು, ಯಾವ ರೀತಿ ವಿಚಾರಣೆ ನಡೆಸಬೇಕೆಂಬುದನ್ನು ಸಮಿತಿ ತೀರ್ಮಾನಿಸುತ್ತದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಕನ್ನಡ ಭಾಷೆಗಾಗಿ ಹೋರಾಟ ನಡೆಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ನಗರ ಪ್ರದೇಶಗಳಲ್ಲಿ ಬಹಳಷ್ಟು ಮಂದಿ ಇರುತ್ತಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಿಂದ ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಅವರಿಗೆ ಮಾಹಿತಿ ನೀಡುವ ದೃಷ್ಟಿಯಿಂದ ಇಂಗ್ಲಿಷ್ ಭಾಷೆಯಲ್ಲೂ ನಾಮಫಲಕ ಇರಬೇಕೆಂದು ಹೇಳಲಾಗುತ್ತದೆ. ಕನ್ನಡ ಭಾಷೆಗೆ ಆದ್ಯತೆ ನೀಡುವುದು ಒಳ್ಳೆಯದು ಎಂದರು.

ಕನ್ನಡಪರ ಸಂಘಟನೆಗಳ ಹೋರಾಟ ನ್ಯಾಯಯುತವಾಗಿದೆ. ಅನ್ಯರಾಜ್ಯಕ್ಕೆ ಹೋದಾಗ ಸ್ಥಳೀಯ ಭಾಷೆಗಳಲ್ಲಿ ಫಲಕಗಳಿದ್ದರೆ ಹೊರಗಿನವರಿಗೆ ಗೊತ್ತಾಗುವುದಿಲ್ಲ. ಆಗ ಮಾಹಿತಿ ತಿಳಿದುಕೊಳ್ಳಲು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಇಂಗ್ಲಿಷ್ ಬಳಕೆಯೂ ನಿಯಮಾನುಸಾರ ಇರಬೇಕಾಗುತ್ತದೆ ಎಂದು ಹೇಳಿದರು.

RELATED ARTICLES

Latest News