Thursday, February 29, 2024
Homeಅಂತಾರಾಷ್ಟ್ರೀಯ"ಕೊರೊನಾ ವೈರಸ್ ಮಾನವ ನಿರ್ಮಿತ, ಮನುಕುಲ ವಿನಾಶಕ್ಕೆ ನಡೆದ ಕುತಂತ್ರ"

“ಕೊರೊನಾ ವೈರಸ್ ಮಾನವ ನಿರ್ಮಿತ, ಮನುಕುಲ ವಿನಾಶಕ್ಕೆ ನಡೆದ ಕುತಂತ್ರ”

ಟೋಕಿಯೊ,ಡಿ.27-ಎಲ್ಲಾ ಕೊರೊನಾ ರೂಪಾಂತರಗಳು ಮಾನವ ನಿರ್ಮಿತವಾಗಿವೆ, ಜೈವಿಕ ಲ್ಯಾಬ್‍ಗಳಲ್ಲಿ ವೈರಸ್ ವಿನ್ಯಾಸಗೊಳಿಸಲಾಗಿದೆ ಮತ್ತು ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ಜಪಾನ್ ಪುರಾವೆಗಳನ್ನು ಸಾಬೀತು ಪಡಿಸಿದೆ. ಒಸಾಕಾ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಕ್ಯೋಟೋ ವಿಶ್ವವಿದ್ಯಾಲಯದ ಜಪಾನಿನ ಸಾಂಕ್ರಾಮಿಕ ರೋಗ ಲಸಿಕೆ ಸಂಶೋಧಕರಾದ (ವೈರಾಲಜಿಸ್ಟ್) ಅಟ್ಸುಶಿ ತನಕಾ ಮತ್ತು ಟಕಾಯುಕಿ ಮಿಯಾಜಾವಾ ಅವರು ನಡೆಸಿದ ಅಧ್ಯಯನವು ಪುರಾವೆ ಸಹಿತ ಇದನ್ನು ಖಚಿತಪಡಿಸುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಮಾನವ ಸ್ವಾತಂತ್ರ್ಯ ಹರಣ ಮತ್ತು ಮಾನವೀಯತೆಯ ವಿನಾಶದ ಕುತಂತ್ರ ಎಂದು ಹೇಳಿದ್ದಾರೆ.

ಇಬ್ಬರೂ ಇಮ್ಯುನೊಲಾಜಿ ಫ್ರಾಂಟಿಯರ್ ರಿಸರ್ಚ್ ಸೆಂಟರ್‍ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅಟ್ಸುಶಿ ತನಕಾ ಅವರು ಸುಮಾರು 6,000 ಉಲ್ಲೇಖಗಳೊಂದಿಗೆ 30 ವಿದ್ವತ್ಪೂರ್ಣ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆ. ಅಂತೆಯೇ, ಕ್ಯೋಟೋ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ವೈರಾಲಜಿಸ್ಟ್ ತಕಾಯುಕಿ ಮಿಯಾಜಾವಾ ಅವರು ಸುಮಾರು 300 ಶೈಕ್ಷಣಿಕ ಲೇಖನಗಳನ್ನು ಪ್ರಕಟಿಸಿದ್ದಾರೆ ಮತ್ತು ಅವರ ಸಂಶೋಧನ ಲೇಖನನದಲ್ಲಿ 7,000 ಉಲ್ಲೇಖವಿದೆ.

ಇದು ಕಣ್ಣು ತೆರೆಸುವ ಆವಿಷ್ಕಾರ ಎಂದು ಹೇಳಿದ್ದು, ನಾವು ಇಲ್ಲಿ ತೋರಿಸಿದ ವಿಶ್ಲೇಷಣೆಯು ಓಮಿಕ್ರಾನ್ ರೂಪಾಂತರಗಳು ಹಿಂದಿನ ಜೀವಶಾಸ್ತ್ರದಿಂದ ವಿವರಿಸಲಾಗದ ಸಂಪೂರ್ಣ ಹೊಸ ಕಾರ್ಯವಿಧಾನದಿಂದ ರೂಪುಗೊಂಡಿವೆ ಎಂದು ನಾವು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

ಈ ಸ್ಪೋಟಕ ಮಾಹಿತಿಯನ್ನು ವಿಶ್ಲೇಷಿಸಿರುವ ವಿಜ್ಞಾನಿಗಳು ಮಾನವ ಸಂಕುಲವನ್ನು ಬಂಧನದಲ್ಲಿಟ್ಟುಕೊಳ್ಳುವ ಹೊಸ ಪ್ರಯತ್ನವಾಗಿದ್ದು, ಓಮಿಕ್ರಾನ್ ಸೋಂಕಿನ ಸಾರಸ್-ಕೋವಿಡ್-2 ಬಗ್ಗೆ ವಿಸ್ತೃತವಾದ 25 ಪುಟಗಳ ಲೇಖನವನ್ನು ಪ್ರಕಟಿಸಿದ್ದು, ಇದಕ್ಕೆ ರೂಪಾಂತರಗಳ ವಿಕಸನ ಪ್ರಕ್ರಿಯೆಯಲ್ಲಿ ಸ್ವಾಭಾವಿಕವಲ್ಲದ ಮತ್ತು ಉದ್ದೇಶಪೂರ್ವಕ ನೈಸರ್ಗಿಕ ಪ್ರಕ್ರಿಯೆ ಎಂದು ಹೆಸರಿಟ್ಟಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯ ಮನೆಯಲ್ಲಿ ವಾದ್ರಾ ವಾಸ್ತವ್ಯ

ಈ ಸೋಂಕು ಪ್ರಪಂಚದಾದ್ಯಂತ ಕಾಡುಗಳಲ್ಲಿ ವನ್ಯಮೃಗ ಪಕ್ಷಿಗಳಲ್ಲಿ ಕಂಡು ಬರುವ ಸಾಂಕ್ರಾಮಿಕ ವೈರಾಣುಗಳನು ಪರಿಶೀಲಿಸಿ ನಂತರ ಪ್ರಸ್ತುತ ವಿಶ್ವದಾದ್ಯಂತ ಹರಡಿರುವ ಕೊರೋನ ವೈರಾಣುನನ್ನು ಪರಿಶೀಲಿಸಿದಾಗ ಅದರಲ್ಲಿ ಸ್ವಾಮ್ಯತೆ ಕಂಡು ಬಂದಿಲ್ಲ ಆದ್ದರಿಂದ ಇದು ಓಮಿಕ್ರಾನ್‍ನ ರೂಪಾಂತರದ ಮೇಲೆ ಕೊರೋನ ವೈರಾಣು ಪ್ರಭೇದಗಳನ್ನು ಸೃಷ್ಟಿಸಲಾಗಿದೆಯೆಂದು ಹೇಳಿದ್ದಾರೆ.

ನಾವು ನಮ್ಮ ಅಧ್ಯಯನವನ್ನು ಮುಂದುವರಿಸಿ ನೋಡಿದಾಗ ಕನಿಷ್ಠ 100 ಪ್ರತ್ಯೇಕ ಓಮಿಕ್ರಾನ್ ಸೋಂಕನ್ನು ನಾವು ಕಂಡಿದ್ದೇವೆ ಇದು ಸ್ವಾಭಾವಿಕವಾಗಿ ಉದ್ಭವಿಸಿಲ್ಲವೆಂದು ಹೇಳಿದ್ದಾರೆ. ಇದನ್ನು ನೋಡಿದರೆ ವ್ಯವಸ್ಥಿತವಾಗಿ ದೊಡ್ಡ ಪ್ರಮಾಣದಲ್ಲಿ ಲ್ಯಾಬ್‍ನಲ್ಲಿ ಇದನ್ನು ಸೃಷ್ಟಿಸಿರಬಹುದೆಂಬ ನಿರ್ಣಾಯಕ ಪುರಾವೆಗಳು ದೊರೆತಿವೆ ಎಂದಿದ್ದಾರೆ. ಪ್ರಸ್ತುತ ವಿಶ್ವದಲ್ಲಿ ಕಂಡು ಬಂದಿರುವ ಹಲವಾರು ಕೊರೋನ ತಳಿಗಳಲ್ಲಿ ಕೆಲವು ಅಪಾಯಕಾರಿಯಾಗಿದ್ದರೆ, ಇನ್ನೂ ಕೆಲವು ಸಾಮಾನ್ಯವಾಗಿ ಬಹುಬೇಗನೆ ಮಾನವ ಹಾಗೂ ಪ್ರಾಣಿಗಳಲ್ಲಿ ಸೇರಿಕೊಳ್ಳಬಹುದೆಂದು ಹೇಳಿದ್ದಾರೆ.

ನಮ್ಮ ಮಾಹಿತಿಯ ಪ್ರಕಾರ ಈಗಾಗಲೇ ಓಮಿಕ್ರಾನ್‍ನ ಸುಮಾರು 35 ತಳಿಗಳು ಈಗಾಗಲೇ 2020ರಲ್ಲೇ ಹರಡಿದೆ ಎಂದು ಹೇಳಿದ್ದಾರೆ. ಇದರ ಸೃಷ್ಟಿಕರ್ತರು ಪರೀಕ್ಷಿಸುವಾಗ ಎಲ್ಲೋ ಎಡವಿದ್ದಾರೆಂದು ಕೂಡಾ ಹೇಳಿದ್ದಾರೆ. ಈಗಾಗಲೇ ಅಮೇರಿಕಾ ಕೂಡ ಕೋವಿಡ್-2 ಲ್ಯಾಬ್‍ನಲ್ಲಿಯೇ ತಯಾರಾಗಿಯೆಂಬ ಅನುಮಾನ ವ್ಯಕ್ತಪಡಿಸಿದೆ.
ಕಳೆದ ಸೆಪ್ಟೆಂಬರ್‍ನಲ್ಲೇ ಈ ಬಗ್ಗೆ ಜಪಾನ್‍ನ ವಿಜ್ಞಾನಿಗಳೊಂದಿಗೆ ಚರ್ಚಿಸಲಾಗಿದೆಯೆಂದು ಹೇಳಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ವೈರಾಣುವಿನ ಮೂಲದ ಬಗ್ಗೆ ತನಿಖೆ ವಿಳಂಬವಾಗಿದೆ ಆದರೆ ನಾವು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂಬುವುದುನ್ನು ಮರೆಯುವಂತಿಲ್ಲವೆಂದು ಹೇಳಿದೆ.

ಶಬರಿಮಲೈಯಲ್ಲಿ ಭಕ್ತರ ನೂಕುನುಗ್ಗಲು

ಮತ್ತೊಮ್ಮೆ ಓಮಿಕ್ರಾನ್ ಬಿಎ-1, ಬಿಎ-1.1 ಮತ್ತು ಬಿಎ-2 ವೈರಾಣುಗಳು ಪ್ರಕೃತಿಯಲ್ಲಿ ತಾನಾಗಿಯೇ ರೂಪುಗೊಂಡಿಲ್ಲವೆಂಬುವುದು ನಾವು ಸಾಬೀತು ಮಾಡುತ್ತೇವೆಂದು ಧೈರ್ಯದಿಂದ ಜಪಾನಿನ ವಿಜ್ಞಾನಿಗಳು ಹೇಳುತ್ತಿದ್ದಾರೆ. ನಾವೀಗ ನಮ್ಮ ಸಂಶೋಧನೆಯನ್ನು ಪ್ರಕಟಿಸಿದ್ದೇವೆ. ಜಪಾನ್ ಧೈರ್ಯವಾಗಿ ತಮ್ಮ ಸಮಾಜದೊಂದಿಗೆ ನಿಜವನ್ನು ಹೇಳುತ್ತಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ.

RELATED ARTICLES

Latest News