Friday, May 3, 2024
Homeರಾಷ್ಟ್ರೀಯಉತ್ತರಾಖಂಡ್‍ನಲ್ಲಿ ಕ್ಲೋರಿನ್ ಸೋರಿಕೆ, ಸ್ಥಳಕ್ಕೆ ದೌಡಾಯಿಸಿದ ಎನ್‌ಡಿಆರ್‌ಎಫ್

ಉತ್ತರಾಖಂಡ್‍ನಲ್ಲಿ ಕ್ಲೋರಿನ್ ಸೋರಿಕೆ, ಸ್ಥಳಕ್ಕೆ ದೌಡಾಯಿಸಿದ ಎನ್‌ಡಿಆರ್‌ಎಫ್

ಡೆಹ್ರಾಡೂನ್,ಜ.9- ಉತ್ತರಾಖಂಡ್‍ನ ಡೆಹ್ರಾಡೂನ್‍ನಲ್ಲಿರುವ ಪ್ರೇಮ್ ನಗರ ಪೊಲೀಸ್ ಠಾಣೆಯ ಜಂಜ್ರಾ ಪ್ರದೇಶದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾದ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಅಲ್ಲಿನ ನಿವಾಸಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿರುವುದರಿಂದ ಜನ ಭಯಭೀತರಾಗಿದ್ದಾರೆ. ಈ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡೆಹ್ರಾಡೂನ್ ಅಜಯ್ ಸಿಂಗ್ ಅವರು, ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‍ಡಿಆರ್‍ಎಫ್ ) ಮತ್ತು ಇತರ ಭದ್ರತಾ ಪಡೆಗಳು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಡೆಹ್ರಾಡೂನ್‍ನ ಪ್ರೇಮ್‍ನಗರ ಪೊಲೀಸ್ ಠಾಣೆಯ ಜಂಜ್ರಾ ಪ್ರದೇಶದ ಖಾಲಿ ಪ್ಲಾಟ್‍ನಲ್ಲಿ ಇರಿಸಲಾಗಿದ್ದ ಕ್ಲೋರಿನ್ ಸಿಲಿಂಡರ್‍ನಲ್ಲಿ ಸೋರಿಕೆಯಾಗಿ ಜನರು ಉಸಿರಾಡಲು ತೊಂದರೆ ಅನುಭವಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಮಧ್ಯಪ್ರದೇಶದಲ್ಲಿ ಕೋಮುಗಲಭೆ, ಮೂರು ಪ್ರದೇಶಗಳಲ್ಲಿ ನಿಷೇದಾಜ್ಞೆ

ಸಹಸ್ಪುರ್ ಶಾಸಕ ಸಹದೇವ್ ಸಿಂಗ್ ಪುಂಡಿರ್ ಪ್ರಕಾರ, ಏಳು ಸಿಲಿಂಡರ್ ಕ್ಲೋರಿನ್ ಅನ್ನು ಈ ಪ್ರದೇಶದ ಖಾಲಿ ಪ್ಲಾಟ್‍ನಲ್ಲಿ ಸ್ವಲ್ಪ ಸಮಯದವರೆಗೆ ಇರಿಸಲಾಗಿತ್ತು. ಸೋರಿಕೆ ಇತ್ತು ಮತ್ತು ಅದು ದೊಡ್ಡ ವಿಪತ್ತಾಗಿ ಬದಲಾಗಬಹುದು, ಆದಾಗ್ಯೂ, ಅಧಿಕಾರಿಗಳ ಸಂಘಟಿತ ಪ್ರಯತ್ನಗಳಿಂದ ಪರಿಸ್ಥಿತಿಯನ್ನು ನಿರ್ವಹಿಸಲಾಗಿದೆ ಎಂದು ಅವರು ತಿಳಿಸಿದರು. ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

2017 ರಲ್ಲಿ ಉತ್ತರಾಖಂಡ ಜಲ ಸಂಸ್ಥಾನದ (ಯುಜೆಎಸ್) ನೀರು ಸರಬರಾಜು ಕೇಂದ್ರದಿಂದ ಕ್ಲೋರಿನ್ ಅನಿಲ ಸೋರಿಕೆಯಾದ ನಂತರ 15 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದರು.

RELATED ARTICLES

Latest News