Wednesday, February 28, 2024
Homeರಾಷ್ಟ್ರೀಯಜ.17ರಂದು ರಾಮ್‍ಲಲ್ಲಾ ವಿಗ್ರಹ ವೀಕ್ಷಣೆಗೆ ಅವಕಾಶ

ಜ.17ರಂದು ರಾಮ್‍ಲಲ್ಲಾ ವಿಗ್ರಹ ವೀಕ್ಷಣೆಗೆ ಅವಕಾಶ

ಆಯೋಧ್ಯ,ಜ.9- ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿರುವ ರಾಮ್‍ಲಲ್ಲಾ ಹೊಸ ವಿಗ್ರಹದ ದರ್ಶನ ಭಕ್ತರಿಗೆ ಲಭಿಸಬೇಕು ಎಂಬ ಉದ್ದೇಶದಿಂದ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜ.17 ರಂದು ನಿಗದಿಪಡಿಸಿದ್ದ ಮೆರವಣಿಗೆಯನ್ನು ರದ್ದುಗೊಳಿಸಲಾಗಿದೆ.

ಮೆರವಣಿಗೆ ಬದಲಾಗಿ, ಅದೇ ದಿನ ರಾಮ ಜನ್ಮಭೂಮಿಯ ಆವರಣದೊಳಗೆ ಹೊಸ ವಿಗ್ರಹದ ದರ್ಶನವನ್ನು ಟ್ರಸ್ಟ್ ಏರ್ಪಡಿಸಲಿದೆ ಎಂದು ಟ್ರಸ್ಟ್‍ನ ಹಿರಿಯ ಕಾರ್ಯನಿರ್ವಹಣಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ಅಧಿಕಾರಿಗಳು ಕಾಶಿಯ ಆಚಾರ್ಯರು ಮತ್ತು ಹಿರಿಯ ಆಡಳಿತಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಮಧ್ಯಪ್ರದೇಶದಲ್ಲಿ ಕೋಮುಗಲಭೆ, ಮೂರು ಪ್ರದೇಶಗಳಲ್ಲಿ ನಿಷೇದಾಜ್ಞೆ

ಅಯೋಧ್ಯೆ ಜಿಲ್ಲಾಡಳಿತದ ಪ್ರಕಾರ, ನಗರದಲ್ಲಿ ರಾಮಲಲ್ಲಾನ ಹೊಸ ವಿಗ್ರಹವನ್ನು ತೆಗೆದಾಗ ಅದರ ದರ್ಶನಕ್ಕೆ ಭಕ್ತರು ಮತ್ತು ಯಾತ್ರಿಕರು ಧಾವಿಸುವುದರಿಂದ ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

RELATED ARTICLES

Latest News