Sunday, September 15, 2024
Homeರಾಜ್ಯಸಿಎಂ ಸಿದ್ದರಾಮಯ್ಯ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಕೆವಿಯೇಟ್

ಸಿಎಂ ಸಿದ್ದರಾಮಯ್ಯ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಕೆವಿಯೇಟ್

ನವದೆಹಲಿ,ಆ.19- ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿದ್ದವರಲ್ಲಿ ಒಬ್ಬರಾಗಿರುವ ಸ್ನೇಹಮಯಿ ಕೃಷ್ಣ ಅವರು, ಹೈಕೋರ್ಟ್‌ನಲ್ಲಿ ಕೆವಿಯೇಟ್‌ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಸುಪ್ರೀಂಕೋರ್ಟ್‌ನಲ್ಲೂ ಇಂದು ಅರ್ಜಿ ಸಲ್ಲಿಸಿದ್ದಾರೆ.

ಒಂದು ವೇಳೆ, ಸಿದ್ದರಾಮಯ್ಯನವರ ರಿಟ್‌ ಅರ್ಜಿಯು ಕರ್ನಾಟಕ ಹೈಕೋರ್ಟ್‌ನಲ್ಲಿ ತಿರಸ್ಕೃತವಾದರೆ ಅವರ ಮುಂದಿನ ಆಯ್ಕೆ ಸುಪ್ರೀಂ ಕೋರ್ಟ್‌ ಆಗಿರಲಿದೆ. ಆಗ ಈ ಪ್ರಕರಣ ಸುಪ್ರೀಂಕೋರ್ಟ್‌ಗೆ ಬಂದರೆ, ಅಲ್ಲಿ ಸಿದ್ದರಾಮಯ್ಯ ನವರ ಅರ್ಜಿಗೂ ಮೊದಲೇ ತಮ ಅರ್ಜಿಯನ್ನು ಪರಿ ಗಣಿಸುವಂತಾಗಬೇಕು ಎಂದು ಕೇವಿಯಟ್‌ ಅರ್ಜಿ ಸಲ್ಲಿಸಲಾಗಿದೆ.

ಮುಡಾ ಹಗರಣದ ಮತ್ತೊಬ್ಬ ದೂರುದಾರ ಟಿ.ಜೆ.ಅಬ್ರಹಾಂ ಅವರು, ಸಿದ್ದರಾಮಯ್ಯ ಅವರ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಕೇವಿಯಟ್‌ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಇದೇ ಪ್ರಕರಣ ಮತ್ತೊಬ್ಬ ದೂರುದಾರರಾದ ಪ್ರದೀಪ್‌ ಅವರು, ಆ. 16ರಂದೇ ಕರ್ನಾಟಕ ಹೈಕೋರ್ಟ್‌ಗೆ ಕೇವಿಯಟ್‌ ಅರ್ಜಿ ಸಲ್ಲಿಸಿದ್ದರು. ಈ ಮೂವರ ಕೇವಿಯಟ್‌ ಅರ್ಜಿಗಳಿಂದಾಗಿ ಸಿದ್ದರಾಮಯ್ಯನವರಿಗೆ ಕಾನೂನಾತಕವಾಗಿ ಮೂರು ತೊಡಕುಗಳು ಎದುರಾದಂತಾ ಗಿದೆ.

ಕೇವಿಯಟ್‌ ಅರ್ಜಿ ಎಂದನೇನು?:
ಕೇವಿಯಟ್‌ ಅರ್ಜಿಯು ಒಂದು ನಿರ್ದಿಷ್ಟ ಪ್ರಕರಣದಲ್ಲಿ ಯಾವುದೇ ಆದೇಶಗಳು ಅಥವಾ ತೀರ್ಪುಗಳನ್ನು ಜಾರಿಗೊಳಿಸುವ ಮೊದಲು ಅವರಿಗೆ ನೋಟಿಸ್‌‍ ನೀಡುವಂತೆ ವಿನಂತಿಸಲು ನ್ಯಾಯಾಲಯದಲ್ಲಿ ವ್ಯಕ್ತಿ ಅಥವಾ ಪಕ್ಷವು ಸಲ್ಲಿಸಬಹುದಾದ ಕಾನೂನಾತಕ ಮನವಿ.ಯಾವುದೇ ಪ್ರಕರಣದಲ್ಲಿ ಪ್ರತಿವಾದಿಗಳು ಅರ್ಜಿಯನ್ನು ಸಲ್ಲಿಸಿ, ಆ ಅರ್ಜಿಯ ವಿಚಾರಣೆಯನ್ನು ಆರಂಭಿಸುವ ಮೊದಲು ತಮ ವಾದವನ್ನು ಆಲಿಸಬೇಕು ಎಂದು ಅದೇ ಪ್ರಕರಣದ ಮತ್ತೊಂದು ಕಕ್ಷಿದಾರರು ನ್ಯಾಯಾಲಯಕ್ಕೆ ಮನವಿ ಮಾಡುವಂಥದ್ದಾಗಿರುತ್ತದೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತಮ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್‌ ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರದಂದೇ ಕರ್ನಾಟಕ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದರು. ಅಂದು ವರಮಹಾಲಕ್ಷಿ ಹಬ್ಬವಾಗಿದ್ದರಿಂದ ಹಾಗೂ ಆನಂತರ ಶನಿವಾರ, ಭಾನುವಾರ ಸಾಲು ಸಾಲು ರಜೆ ಇದ್ದಿದ್ದರಿಂದಾಗಿ ಸೋಮವಾರದಂದು ರಿಟ್‌ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿತ್ತು.

ಆದರೆ ಅದಕ್ಕೂ ಮೊದಲೇ ಶುಕ್ರವಾರದಂದು ದೂರುದಾರರಲ್ಲೊಬ್ಬರಾದ ಪ್ರದೀಪ್‌ ಅವರು, ಹೈಕೋರ್ಟ್‌ ಗೆ ಕೇವಿಯಟ್‌ ಅರ್ಜಿ ಸಲ್ಲಿಸಿ, ಸಿದ್ದರಾಮಯ್ಯನವರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮೊದಲು ದೂರುದಾರರ ಆಕ್ಷೇಪಣೆಗಳನ್ನು ಆಲಿಸಬೇಕೆಂದು ಮನವಿ ಮಾಡಿ ಆ ಮೂಲಕ ಸಿದ್ದರಾಮಯ್ಯನವರಿಗೆ ಸೆಡ್ಡು ಹೊಡೆದಿದ್ದರು. ಈಗ ಸುಪ್ರೀಂಕೋರ್ಟ್‌ ನಲ್ಲೂ ಕೇವಿಯಟ್‌ ಅರ್ಜಿ ಸಲ್ಲಿಸಲಾಗಿದೆ.

RELATED ARTICLES

Latest News