Friday, May 17, 2024
Homeರಾಜ್ಯಸಿದ್ದರಾಮಯ್ಯಗೆ ಆತ್ಮಸಾಕ್ಷಿ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು : HDK

ಸಿದ್ದರಾಮಯ್ಯಗೆ ಆತ್ಮಸಾಕ್ಷಿ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು : HDK

ಬೆಂಗಳೂರು, ನ.16- ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗಳಲ್ಲಿ ಬಹಿರಂಗವಾಗಿರುವ ಮುಖ್ಯಮಂತ್ರಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಬಗ್ಗೆ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವರ್ಗಾವಣೆ ದಂಧೆ ಆರೋಪಕ್ಕೆ ಈ ವಿಡಿಯೋಗಿಂತ ಮತ್ತೊಂದು ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದರಲ್ಲದೆ, ಆತ್ಮಸಾಕ್ಷಿ ಇದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಪುತ್ರ ವಿಜಯೇಂದ್ರ ಅವರ ಮೇಲೆ ಶೇ. 20ರಷ್ಟು ಕಮಿಷನ್ ಆರೋಪವನ್ನು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಮಾಡಿದ್ದರು. ದಾವಣಗೆರೆಯಲ್ಲಿ ಮಾಡಿದ್ದ ಈ ಆರೋಪಕ್ಕೆ ಯಾವ ಸಾಕ್ಷ್ಯವನ್ನು ಒದಗಿಸಿದ್ದರು ಎಂದು ಪ್ರಶ್ನಿಸಿದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಪೇಸಿಎಂ ಪೋಸ್ಟರ್ ಹಾಕಿದ್ದರು. ಅದಕ್ಕೆ ಯಾವ ದಾಖಲೆ ನೀಡಿದ್ದರು ಎಂದ ಅವರು, ಯತೀಂದ್ರ ಅವರು ಯಾರೊಂದಿಗೆ ಮಾತನಾಡಿದ್ದಾರೆ, ಎಂಬುದನ್ನು ಬಹಿರಂಗ ಪಡಿಸಲಿ. ದೂರವಾಣಿಯಲ್ಲಿ ಅಪ್ಪ ಎಂದು ಯಾರನ್ನು ಕರೆದರು, ದೂರವಾಣಿ ಮಾಡಿ ಯತೀಂದ್ರ ಅವರನ್ನು ಕೇಳಿದ್ದು, ಮುಖ್ಯಮಂತ್ರಿ ಅಲ್ಲವೆ? ಎಂದು ವಿಡಿಯೋದಲ್ಲಿದೆ ಎನ್ನಲಾದ ಮಾಹಿತಿಯನ್ನು ಪ್ರಸ್ತಾಪಿಸಿದರು.

ಪಂಚರಾಜ್ಯಗಳ ಚುನಾವಣೆ : ನಾಳೆ ಮಧ್ಯಪ್ರದೇಶದಲ್ಲಿ ಮತದಾನ

ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರು ಮಾಡಿದ ಆರೋಪದ ವಿಡಿಯೋವನ್ನು ಪ್ರದರ್ಶಿಸಿದ ಅವರು, ಮುಖ್ಯಮಂತ್ರಿಯಾದವರು ಪುತ್ರನನ್ನು ಕೇಳಿ ಆಡಳಿತ ನಡೆಸುವುದೇ, ವಿವೇಕಾನಂದ ಯಾರು? ಮಹದೇವ ಯಾರು ಎಂದು ಪ್ರಶ್ನಿಸಿದರು.

ಕಂಬದಿಂದ ವಿದ್ಯುತ್ ಕದಿಯುವ ದಾರಿದ್ರ್ಯ ನನಗೆ ಬಂದಿಲ್ಲ. ಆಚಾರ್ತುದಿಂದ ಉಂಟಾಗಿದ್ದ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದೇನೆ. ಆದರೂ ಜೆಡಿಎಸ್ ಕಚೇರಿಯ ಕಾಂಪೌಂಡ್‍ಗೆ ಆಕ್ಷೇಪಾರ್ಹ ಪೋಸ್ಟನ್ನು ಅಂಟಿಸಲಾಗಿದೆ ಎಂದರು. ವಿಜಯೇಂದ್ರ ಅವರನ್ನು ಅನಧಿಕೃತ ಸಿಎಂ ಎಂದು ಆರೋಪಿಸುತ್ತಿದ್ದ ನೀವು ಈಗ ಸೂಪರ್ ಸಿಎಂ ಯಾರು ಹೇಳಿ ಎಂದು ಪ್ರಶ್ನಿಸಿದರು.

ನಾಡಿನ ಜನತೆ ಒಳ್ಳೆಯ ರೀತಿಯಲ್ಲಿ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಲೂಟಿ ಮಾಡಲು ಅಲ್ಲ. ಯತೀಂದ್ರ ಅವರು ಶಾಲೆಗಳ ಸಿಎಸ್‍ಆರ್ ನಿ ಬಗ್ಗೆ ಮಾತನಾಡಿದ್ದಾರೆ. ವರ್ಗಾವಣೆ ಬಗ್ಗೆ ಅಲ್ಲ ಎನ್ನುವುದಾದರೆ ದಾಖಲೆಗಳನ್ನು ಜನರ ಮುಂದಿಡಿ. ಮೈಸೂರು ಜಿಲ್ಲೆಯ ಡಿಡಿಪಿಐಗೆ ಕಳುಹಿಸಿರುವ ಮಾಹಿತಿಯನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸ್ಥಾನ ಶಾಶ್ವತವಲ್ಲ. ಚುನಾವಣೆಗಾಗಿ ಕೆಲವರಿಂದ ಸಹಕಾರ ಪಡೆದಿದ್ದು, ನಾನು ಶೇ. 100ರಷ್ಟು ಶುದ್ಧನಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ ಎಂದರು.

ತನಿಖೆಗೆ ಸಿದ್ಧ:
ನಮ್ಮ ಕುಟುಂಬದ ಆಸ್ತಿ ತನಿಖೆಗೆ ಈಗಲೂ ಸಿದ್ದ ಎಂದ ಅವರು, ದಾಸನಪುರ ಹೋಬಳಿಯಲ್ಲಿ ಮೂರುವರೆ ಎಕರೆ ಕೆರೆ ನುಂಗಿ ಹಾಕಿದವರು ಯಾರು ಎಂದು ಪ್ರಶ್ನಿಸಿದ ಅವರು, ನಮ್ಮ ಆಸ್ತಿಯ ಬಗ್ಗೆ ಆರೋಪ ಮಾಡಿದವರನ್ನೇ ಕೇಳಿ? ಸರ್ಕಾರದ ಆದೇಶವನ್ನು ಮಾರಾಟಕ್ಕೆ ಇಡಬೇಡಿ ಎಂದರು.

ಸಿದ್ದರಾಮಯ್ಯ ಅವರು ರಾಜಕೀಯ ಜೀವನದಲ್ಲಿ ಮಾಡಿರುವ ಯಾವ ಆರೋಪವನ್ನು ಸಾಬೀತುಪಡಿಸಿದ್ದಾರೆ ಎಂದು ಪ್ರಶ್ನಿಸಿದ ಅವರು, ನೈಸ್ ಸಂಸ್ಥೆಯ ಬಗ್ಗೆ ಸದನ ಸಮಿತಿ ನೀಡಿರುವ ವರದಿಯ ಶಿಫಾರಸ್ಸು ಏಕೆ ಅನುಷ್ಠಾನಗೊಳಿಸಿಲ್ಲ ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದ ಅವರು ವರ್ಗಾವಣೆ ವಿಚಾರ ಎನ್ನಲಾದ ವಿಡಿಯೋ ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು.

ವಿಡಿಯೋ ಆದರಿಸಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ವಿರುದ್ಧ ಆರೋಪಗಳ ಸುರಿ ಮಳೆಗೈದು ವರ್ಗಾವಣೆ ದಂಧೆ ನಡೆಯುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ, ವಿಧಾನಪರಿಷತ್ ಮಾಜಿ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ, ರಮೇಶ್ ಗೌಡ ಉಪಸ್ಥಿತರಿದ್ದರು.

RELATED ARTICLES

Latest News