Saturday, May 18, 2024
Homeರಾಷ್ಟ್ರೀಯಪಂಚರಾಜ್ಯಗಳ ಚುನಾವಣೆ : ನಾಳೆ ಮಧ್ಯಪ್ರದೇಶದಲ್ಲಿ ಮತದಾನ

ಪಂಚರಾಜ್ಯಗಳ ಚುನಾವಣೆ : ನಾಳೆ ಮಧ್ಯಪ್ರದೇಶದಲ್ಲಿ ಮತದಾನ

ಬೆಂಗಳೂರು, ನ.16-ಮಿನಿ ಮಹಾಸಮರವೆಂದೇ ಬಿಂಬಿಸಲಾಗಿರುವ ಪಂಚ ರಾಜ್ಯಗಳ ಚುನಾವಣೆಗಳ ಪೈಕಿ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಮಧ್ಯಪ್ರದೇಶಕ್ಕೆ ನಾಳೆ ಮತದಾನ ನಡೆಯಲಿದೆ. 230 ಕ್ಷೇತ್ರಗಳನ್ನು ಹೊಂದಿರುವ ವಿಧಾನಸಭೆಯ ಚುನಾವಣೆಯಲ್ಲಿ ಗೆದ್ದು ಮರಳಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಹವಣಿಸುತ್ತಿದೆ.

ಬಿಜೆಪಿ, ಕಾಂಗ್ರೆಸ್ ಸ್ವತಂತ್ರವಾಗಿ 230 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಎಸ್‍ಪಿ, ಗೊಂಡವಾನ ಗಣತಂತ್ರ ಪಕ್ಷದ ಮೈತ್ರಿಕೂಟವು ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಸಮಾಜವಾದಿ ಪಕ್ಷ, ಅಜಾದ್ ಸಮಾಜ್ ಪಕ್ಷಗಳು ತಲಾ -80, ಅಮ್‍ಆದ್ಮಿ -69, ಸಿಪಿಐ-9, ಜೆಡಿಯು-5 ಕ್ಷೇತ್ರಗಳಲ್ಲಿ ಸ್ರ್ಪಧಿಸಿವೆ.

ಬಹುತೇಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹಣಾಹಣಿ ಇದೆ. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‍ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿನಡ್ಡಾ ಸೇರಿದಂತೆ ಬಿಜೆಪಿ ಅತಿರಥ ಮಹಾರಥರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ.

ಕಾಂಗ್ರೆಸ್‍ನಿಂದ ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಿದ್ದಾರೆ. ಹಲವಾರು ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಮಿಶ್ರ ಫಲಿತಾಂಶ ಕೇಳಿಬಂದಿದೆ. ಕಳೆದ ಜೂನ್‍ನಲ್ಲಿ ನಡೆದ ಸಮೀಕ್ಷೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಮುನ್ಸೂಚನೆ ಇತ್ತು.
ಅಕ್ಟೋಬರ್‍ನಲ್ಲಿ ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವರದಿಯಾಗಿದ್ದರೆ, ನವೆಂಬರ್‍ನಲ್ಲಿ ನಡೆದ ಸಮೀಕ್ಷೆಯಲ್ಲಿ ಬಿಜೆಪಿ ಪರವಾದ ಒಲವು ವ್ಯಕ್ತವಾಗಿತ್ತು. ಇತ್ತೀಚಿನ ವರದಿಗಳು ಮತ್ತೆ ಕಾಂಗ್ರೆಸ್‍ನಲ್ಲಿ ನಿರೀಕ್ಷೆಗಳನ್ನು ಹುಟ್ಟಿಸಿವೆ.

ಆಸ್ತಿಗಾಗಿ ಪತ್ನಿಯನ್ನೇ ಕೊಂದು ನಾಟಕವಾಡಿದ್ದ ಉಪನ್ಯಾಸಕ ಅರೆಸ್ಟ್

ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಸಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳು ನಾನಾ ರೀತಿಯ ಕಸರತ್ತುಗಳನ್ನು ನಡೆಸಿವೆ. ಕಾಂಗ್ರೆಸ್ ಎಂದಿನಂತೆ ಗ್ಯಾರಂಟಿ ಯೋಜನೆಗಳ ಮೊರೆ ಹೋಗಿದೆ. ಎರಡು ಲಕ್ಷ ರೂ.ವರೆಗೂ ಕೃಷಿ ಸಾಲ ಮನ್ನಾ, ಉಚಿತ ಶಾಲಾ ಶಿಕ್ಷಣ, 100 ಯುನಿಟ್ ವರೆಗೆ ಉಚಿತ ಹಾಗೂ 200 ಯುನಿಟ್ ವರೆಗೆ ರಿಯಾಯ್ತಿ ಘೋಷಿಸಿದೆ.

500 ರೂ.ಗೆ ಸಿಲಿಂಡರ್ ಪೂರೈಕೆ, ಒಬಿಸಿ ಶೇ.25ರಷ್ಟು ಮೀಸಲಾತಿ, ಜಾತಿಜನಗಣತಿ, ಮಹಿಳೆಯರಿಗೆ, ಯುವಕರಿಗೆ ಮಾಶಾಸನ ಘೋಷಣೆ ಮಾಡಿದ್ದರೆ, ಬಿಜೆಪಿ ಕೂಡಾ ಉಚಿತ ವಿದ್ಯುತ್, 450 ರೂ.ಗೆ ಸಿಲಿಂಡರ್ ಪೂರೈಕೆ, ಬಡವರಿಗೆ 5 ವರ್ಷ ಉಚಿತ ಪಡಿತರ ಸೇರಿದಂತೆ ಹಲವು ಗ್ಯಾರಂಟಿಗಳನ್ನು ಪ್ರಕಟಿಸಿದೆ.
ಏಕಕಾಲಕ್ಕೆ ಎಲ್ಲಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಪ್ರಜಾಪ್ರಭುತ್ವದ ಪ್ರಭುಗಳು ಯಾರ ಪರವಾಗಿ ಒಲವು ವ್ಯಕ್ತಪಡಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಪಂಚ ರಾಜ್ಯಗಳ ಪೈಕಿ ಮಿಜೋರಾಂಗೆ ನ.7ರಂದು ಏಕಕಾಲಕ್ಕೆ 40 ಕ್ಷೇತ್ರಗಳಿಗೂ ಚುನಾವಣೆ ನಡೆದರೆ, 90 ಕ್ಷೇತ್ರಗಳಿರುವ ಛತ್ತೀಸ್‍ಗಢಕ್ಕೆ ಎರಡು ಹಂತಗಳಲ್ಲಿ ಮತದಾನ ನಿಗದಿಯಾಗಿದೆ. ಮೊದಲ ಹಂತದ ಮತದಾನ ನ.7ರಂದು 20 ಕ್ಷೇತ್ರಗಳಿಗೆ ನಡೆದಿದ್ದು, ನಾಳೆ ಎರಡನೇ ಹಂತದಲ್ಲಿ 70 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ವಿಪಕ್ಷ ನಾಯಕನ ಆಯ್ಕೆಗೆ ನಾಳೆ ಬಿಜೆಪಿ ಶಾಸಕರ ಸಭೆ

200 ಕ್ಷೇತ್ರಗಳಿರುವ ರಾಜಸ್ಥಾನಕ್ಕೆ ನ.23ರಂದು, 119 ಕ್ಷೇತ್ರಗಳಿರುವ ತೆಲಂಗಾಣಕ್ಕೆ ನ.30ರಂದು ಮತದಾನ ನಡಯಲಿದೆ. ಪಂಚರಾಜ್ಯಗಳ ಚುನಾವಣೆಯ ಮತ ಎಣಿಕೆ ಡಿ.3ರಂದು ಆಯಾ ರಾಜ್ಯಗಳಲ್ಲಿ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.

RELATED ARTICLES

Latest News