ಬೆಂಗಳೂರು,ಫೆ.17- ದೇಹದೊಳಗೆ ಕೊಕೈನ್ ಮರೆಮಾಚಿಕೊಂಡು ನಗರಕ್ಕೆ ಬಂದಿದ್ದ ಬ್ರೆಜಿಲ್ ಪ್ರಜೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಡಿಆರ್‍ಐ ಅಧಿಕಾರಿಗಳು ಬಂಧಿಸಿ 9.2 ಕೋಟಿ ಮೌಲ್ಯದ ಕ್ಯಾಪ್ಸುಲ್‍ನ್ನು ಹೊರತೆಗೆಸಿದ್ದಾರೆ. ಬ್ರೆಜಿಲ್ ದೇಶದ ಪ್ರಜೆ ವೆನೆಜುವೆಲಾದಿಂದ ದುಬೈಗೆ ಹೋಗಿ ಅಲ್ಲಿಂದ ವಿಮಾನದಲ್ಲಿ ನಗರಕ್ಕೆ ಬಂದಿದ್ದಾನೆ.
ವಿಮಾನ ನಿಲ್ದಾಣದಲ್ಲಿ ಡಿಆರ್‍ಐ ಅಧಿಕಾರಿಗಳು ಈ ಪ್ರಯಾಣಿಕನನ್ನು ತಪಾಸಣೆ ನಡೆಸಿದಾಗ ಅನುಮಾನ ಬಂದಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಿದಾಗ ಆತನ ದೇಹದೊಳಗೆ 920 ಗ್ರಾಂ ನಾರ್ಕೋಟಿಕ ಕ್ಯಾಪ್ಸುಲ್‍ಗಳು ಪತ್ತೆಯಾಗಿವೆ. ಆರೋಪಿಯು ದೇಹದೊಳಗೆ ಮರೆಮಾಚಿಕೊಂಡು ಅಕ್ರಮವಾಗಿ ನಿಕೋಟಿನ್ ಅಂಶವಿದ್ದ ಕ್ಯಾಪ್ಸುಲ್‍ಗಳನ್ನು ಸಾಗಾಟಕ್ಕೆ ಯತ್ನಿಸಿರುವುದು ಗೊತ್ತಾಗಿದೆ.
ಮೋದಿ ಸರ್ಕಾರ ದೇಶದ ರೈತರಿಗೆ ಶಾಪವಾಗಿದೆ : ಖರ್ಗೆ
ವೈದ್ಯರು ಆತನ ದೇಹದಲ್ಲಿದ್ದ ಕ್ಯಾಪ್ಸುಲ್‍ಗಳನ್ನು ಹೊರತೆಗೆದಿದ್ದು, ಅವುಗಳ ಮೌಲ್ಯ 9.2 ಕೋಟಿ ರೂ.ಗಳೆಂದು ಅಂದಾಜಸಲಾಗಿದೆ. ಡಿಆರ್‍ಐ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.