Friday, November 22, 2024
Homeರಾಷ್ಟ್ರೀಯ | Nationalವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ 30ರೂ.ಇಳಿಕೆ

ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ 30ರೂ.ಇಳಿಕೆ

ನವದೆಹಲಿ, ಏಪ್ರಿಲ್. 1-ವಾಣಿಜ್ಯ ಬಳಕೆಯ 19 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆ 30.50 ರೂ. ಇಳಿಕೆಯಾಗಿದೆ,ಇದಲ್ಲದೆ 5 ಕೆಜಿ ಎಫ್‍ಟಿಎಲ್ (ಫ್ರೀ ಟ್ರೇಡ್ ಎಲ್‍ಪಿಜಿ)ಸಿಲಿಂಡರ್ ಬೆಲೆಯೂ ಕೂಡ 7.50 ರೂಪಾಯಿ ಕಡಿಮೆಯಾಗಿದ್ದು ಹೊಸ ಹಣಕಾಸು ವರ್ಷದ 2024-25 ಮೊದಲ ದಿನ ಎಲ್‍ಪಿಜಿ ದರವನ್ನು ಕಡಿಮೆ ಮಾಡಲಾಗಿದ್ದು, ಇದರಿಂದ ವಾಣಿಜ್ಯ ಗ್ಯಾಸ್ ಬಳಕೆದಾರರಿಗೆ ಸಿಹಿ ಸುದ್ದಿಯಾಗಿದೆ.ಈ ಪರಿಷ್ಕೃತ ದರ ಇಂದು (ಏಪ್ರಿಲ್ 01) ರಿಂದಲೇ ಅನ್ವಯವಾಗಲಿದೆ.

ದೇಶದ ಹಲವು ರಾಜ್ಯಗಳಲ್ಲಿ ತೆರಿಗೆ ಅನುಗುಣವಾಗಿ ದರ ಪರಸ್ಕರಣೆ ಮಾಡಲಾಗಿದ್ದು ರಾಜಧಾನಿ ದೆಹಲಿಯಲ್ಲಿ 19 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆ 30.50 ರೂ, ಮುಂಬೈನಲ್ಲಿ 31.50 ರೂ. ಚೆನ್ನೈನಲ್ಲಿ 30.50 ರೂ. ಮತ್ತು ಕೋಲ್ಕತ್ತಾದಲ್ಲಿ 32 ರೂ. ಕಡಿಮೆಯಾಗಿದೆ. ಬೆಲೆ ಇಳಿಕೆ ನಂತರ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್1764.50 ರೂ. ಗಳಿಗೆ ಲಭ್ಯವಾಗಲಿದೆ.

ಇನ್ನು ಮುಂಬೈನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1717.50 ರೂ. ಇದೆ. ಕೋಲ್ಕತ್ತಾದಲ್ಲಿ 1879 ರೂ. ಮತ್ತು ಚೆನ್ನೈನಲ್ಲಿ 1930 ರೂ. ಮತ್ತು ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‍ಬೆಲೆ 1830 ರೂಗೆ ಇಳಿದಿದೆ. 14 ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್‍ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

RELATED ARTICLES

Latest News