ನವದೆಹಲಿ,ನ.1- ಸರ್ಕಾರಿ ಒಡೆತನದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಯನ್ನು 101.50 ರೂ.ಗಳಷ್ಟು ಹೆಚ್ಚಿಸಿದ್ದು, ನೂತನ ದರ ಇಂದಿನಿಂದಲೇ ಜಾರಿಯಾಗಿದೆ. ಹೊಸ ದರದ ಪ್ರಕಾರದ ಎಲ್‍ಪಿಜಿ ವಾಣಿಜ್ಯ ಸಿಲಿಂಡರ್ ರಾಜಧಾನಿ ದೆಹಲಿಯಲ್ಲಿ 1833 ರೂ.ಗಳಿಗೆ ಲಭ್ಯವಿದೆ. ಕಳೆದ ಎರಡು ತಿಂಗಳಲ್ಲಿ ವಾಣಿಜ್ಯ ಸಿಲಿಂಡರಿನ ಬೆಲೆಯಲ್ಲಿ ಎರಡು ಬಾರಿ ಅಧಿಕವಾಗಿದೆ.
ಅಂದಹಾಗೆ ವಾಣಿಜ್ಯ ಮತ್ತು ಗೃಹಬಳಕೆಯ ಎಲ್ಪಿಜಿ ಸಿಲಿಂಡರ್‍ಗಳ ದರ ಪ್ರತಿ ತಿಂಗಳ ಮೊದಲ ದಿನದಂದು ಮಾಸಿಕ ಪರಿಷ್ಕರಣೆ ಗಳಿಗೊಳಪಡುತ್ತವೆ. ಅದರಂತೆ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 100 ರೂ. ದುಬಾರಿಯಾಗಿದ್ದರೆ, ಗೃಹಬಳಕೆಯ LPG ಸಿಲಿಂಡರ್ ದರದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.
ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆ ಇಲ್ಲ ಎಲ್‍ಪಿಜಿ ಸಿಲಿಂಡರ್‍ಗಳ ಹೊಸ ಬೆಲೆಗಳು 19 ಕೆಜಿ ವಾಣಿಜ್ಯ ಸಿಲಿಂಡರ್‍ಗಳಿಗೆ ಮಾತ್ರ ಅನ್ವಯಿಸುತ್ತವೆ. ದೇಶೀಯ LPG ಸಿಲಿಂಡರ್ಗಳು ಬೆಲೆಯಲ್ಲಿ ಯಾವುದೇ ಬದಲಾವಣೆಗೆ ಒಳಗಾಗುವುದಿಲ್ಲ ಮತ್ತು ಅದು ಸ್ಥಿರವಾಗಿರುತ್ತದೆ. ದೆಹಲಿಯಲ್ಲಿ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‍ನ ಬೆಲೆ 903 ರೂ, ಕೋಲ್ಕತ್ತಾದಲ್ಲಿ 14 ಕೆಜಿ ಸಿಲಿಂಡರ್ ಬೆಲೆ 929 ರೂ. ಇದೆ.
ಅಕ್ಟೋಬರ್ 1ರಂದು 19 ಕೆಜಿಯ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 209 ರೂ.ಗಳಷ್ಟು ಹೆಚ್ಚಿಸಿದಾಗ ತೈಲ ಕಂಪನಿಗಳು ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್‍ಗಳ ಬೆಲೆಯನ್ನು ಹೆಚ್ಚಿಸಿರುವುದು ಉಲ್ಲೇಖನೀಯವಾಗಿದೆ. ಅಕ್ಟೋಬರ್‍ನಲ್ಲಿ ಹೊಸ ದರಗಳು ಜಾರಿಗೆ ಬಂದ ನಂತರ, ಚಿಲ್ಲರೆ ಮಾರಾಟ ದೆಹಲಿಯಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 1731.50 ರೂ ಆಗಿದ್ದು, ನವೆಂಬರ್‍ನಲ್ಲಿ ಹೆಚ್ಚಿದ ದರದ ನಂತರ ಈಗ 1833 ರೂ ಆಗಿದೆ.
ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೇಸ್ತಾನ್ ಧ್ವಜ ಪ್ರದರ್ಶಿಸಿದ ನಾಲ್ವರು ಅರೆಸ್ಟ್
ಸೆಪ್ಟೆಂಬರ್‍ನಲ್ಲಿ ಬೆಲೆಗಳನ್ನು ಕಡಿತಗೊಳಿಸಲಾಯಿತು. ವಾಣಿಜ್ಯ ಸಿಲಿಂಡರ್ ಸಹ ಸೆಪ್ಟೆಂಬರ್ನಲ್ಲಿ ಅಗ್ಗವಾಯಿತು. ತೈಲ ಮಾರುಕಟ್ಟೆ ಕಂಪನಿಗಳು ಸೆಪ್ಟೆಂಬರ್‍ನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 157 ರೂ. ಕಡಿತಗೊಳಿಸಿದ್ದವು, ನಂತರ ಈ ಸಿಲಿಂಡರ್ ಅನ್ನು ದೆಹಲಿಯಲ್ಲಿ ರೂ 1522.50 ಮತ್ತು ಕೋಲ್ಕತ್ತಾದಲ್ಲಿ ರೂ 1636ಕ್ಕೆ ಮಾರಾಟ ಮಾಡಲಾಯಿತು. ಆಗಸ್ಟ್‍ನಲ್ಲಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್‍ಗಳ ಬೆಲೆಯನ್ನು 100 ರೂ.ಗಳಷ್ಟು ಕಡಿಮೆ ಮಾಡಲಾಗಿತ್ತು.
ಇತ್ತೀಚಿನ ದರ ಪರಿಷ್ಕರಣೆಯೊಂದಿಗೆ 19 ಕೆಜಿ ತೂಕದ ವ್ಯಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1731 ರೂ.ನಿಂದ 1833 ರೂಪಾಯಿಗೆ ಏರಿಕೆಯಾಗಿದೆ. ಮುಂಬೈನಲ್ಲಿ 1785.50 ರೂ., ಕೋಲ್ಕತ್ತಾದಲ್ಲಿ 1943 ರೂ., ಚೆನ್ನೈನಲ್ಲಿ 1999.50 ರೂ., ಮತ್ತು ಬೆಂಗಳೂರಿನಲ್ಲಿ 1914.50 ರೂಪಾಯಿಗೆ ಏರಿಕೆಯಾಗಿದೆ.
ಅಕ್ಟೋಬರ್ 1ರಂದು ತೈಲ ಕಂಪನಿಗಳು ವಾಣಿಜ್ಯ ಬಳಕೆ ಎಲ್‍ಪಿಜಿ ಸಿಲಿಂಡರ್ ದರದಲ್ಲಿ 209 ರೂ.ಗಳಷ್ಟು ಏರಿಕೆ ಮಾಡಿತ್ತು. ಕಳೆದ ತಿಂಗಳು 19 ಕೆಜಿ ತೂಕದ ಸಿಲಿಂಡರ್ ಬೆಲೆ ಮುಂಬೈನಲ್ಲಿ 1,684 ರೂ., ಕೋಲ್ಕತ್ತಾದಲ್ಲಿ 1,839.50 ರೂ. ಮತ್ತು ಚೆನ್ನೈನಲ್ಲಿ 1,898 ರೂ. ಇತ್ತು. ಆದಾಗ್ಯೂ ಗೃಹಬಳಕೆಯ ಎಲ್‍ಪಿಜಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್‍ಗೆ 903 ರೂ. ಇದೆ. ಬೆಂಗಳೂರಿನಲ್ಲಿ 905 ರೂಪಾಯಿ ಇದೆ.