Friday, May 3, 2024
Homeರಾಜಕೀಯಕಾಂಗ್ರೆಸ್ ಆಕ್ರಮಣಕಾರಿ ಪ್ರಚಾರ ತಂತ್ರಗಳಿಂದ ಬಿಜೆಪಿಗೆ ಮುಜುಗರ

ಕಾಂಗ್ರೆಸ್ ಆಕ್ರಮಣಕಾರಿ ಪ್ರಚಾರ ತಂತ್ರಗಳಿಂದ ಬಿಜೆಪಿಗೆ ಮುಜುಗರ

ಬೆಂಗಳೂರು,ಏ.20- ಲೋಕಸಭಾ ಚುನಾವಣಾ ಅಖಾಡದಲ್ಲಿ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಅನುಸರಿಸುತ್ತಿರುವ ಆಕ್ರಮಣಾಕಾರಿ ಪ್ರಚಾರ ತಂತ್ರಗಳು ಭಾರೀ ಪರಿಣಾಮ ಬೀರಿದ್ದು, ಬಿಜೆಪಿಗೆ ಮುಜುಗರ ಉಂಟುಮಾಡಿದೆ. ಕೇಂದ್ರಸರ್ಕಾರದ ಅನ್ಯಾಯದ ವಿರುದ್ಧ ದಿನಕ್ಕೊಂದು ವಿಷಯಾಧಾರಿತವಾಗಿ ಕಾಂಗ್ರೆಸ್ ಜಾಹೀರಾತು ಪ್ರಕಟಿಸುತ್ತಿದೆ. ನಿನ್ನೆ ಬಿಜೆಪಿ ಸರ್ಕಾರದಿಂದಾದ ಅನ್ಯಾಯದ ಬಗ್ಗೆ ಚಂಬಿನ ಚಿತ್ರದೊಂದಿಗೆ ನೀಡಿದ್ದ ಜಾಹೀರಾತು ಭಾರೀ ಸಂಚಲನ ಮೂಡಿಸಿತ್ತು.

ಇಂದು ಮತ್ತೊಂದು ಜಾಹೀರಾತು ನೀಡಿರುವ ಕಾಂಗ್ರೆಸ್ ಪಕ್ಷ ಅಚ್ಚೇ ದಿನಗಳಲ್ಲ, ದೌರ್ಭಾಗ್ಯದ ದಿನಗಳೆಂದು ಬೆಲೆ ಏರಿಕೆಯನ್ನು ಪ್ರಸ್ತಾಪಿಸಿದೆ. 2014 ರಿಂದೀಚೆಗೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆಯಲ್ಲಿ ಗಣನೀಯ ಏರಿಕೆಯಾಗಿರುವುದು ಜಾಹೀರಾತಿನಲ್ಲಿ ಪ್ರತಿಬಿಂಬಿತವಾಗಿದೆ.

ಲೀಟರ್ 71 ರೂ.ಗಳಿದ್ದ ಪೆಟ್ರೋಲ್ಬೆಲೆ 100 ರೂ.ಗೆ ಏರಿಕೆಯಾಗಿದ್ದರೆ, 56 ರೂ.ಗಳ ಡೀಸೆಲ್ ದರ 85 ರೂ.ಗೆ, 400 ರೂ. ಗ್ಯಾಸ್ ಸಿಲಿಂಡರ್ ದರ 1100 ರೂ.ಗೆ, ಅಡುಗೆ ಎಣ್ಣೆ 180 ರೂ.ಗೆ, ತೊಗರಿಬೇಳೆ ಕೆಜಿಗೆ 200 ರೂ., ಟೀಪುಡಿ 300 ರೂ.ಗೆ ಹೆಚ್ಚಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದು, ಮೋದಿಯವರ ನೆರಳಿನ ಪ್ರತಿಬಿಂಬವನ್ನು ಪ್ರಕಟಿಸಲಾಗಿದೆ.

ಜಾಹೀರಾತನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೋದಿಯವರ ಅಚ್ಚೇದಿನ್ ಪರಿಣಾಮವಾಗಿ ಬೆಲೆ ಏರಿಕೆಯು ಗಗನಕ್ಕೇರಿದೆ. ನಿಮ್ಮ ಬಿಜೆಪಿ ಚಂಬು ಸರ್ಕಾರದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿವಯರೇ ಉತ್ತರ ಕೊಡಿ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯನ್ನು ಸೋಲಿಸಿ, ದೇಶವನ್ನು ರಕ್ಷಿಸಿ, ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಮತ ನೀಡಿ, ದೇಶವನ್ನು ಉಳಿಸಿ ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.

RELATED ARTICLES

Latest News