ನವದೆಹಲಿ, ಡಿ. 28- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಚೇರಿಯಲ್ಲಿ ಪಕ್ಷದ 139 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಧ್ವಜಾರೋಹಣ ಮಾಡಿದರು. ಸಂಸದ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಸಂಸದ ರಾಜೀವ್ ಶುಕ್ಲಾ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಇತರರು ಇದ್ದರು.
ಕಾಂಗ್ರೆಸ್ ನಾಯಕ ಹಾಗೂ ಬಿಹಾರ ವಿಧಾನಸಭಾ ಮಾಜಿ ಸದಸ್ಯ ಶಕೀಲ್ ಅಹ್ಮದ್ ಮಾತನಾಡಿ, 1885ರ ಡಿಸೆಂಬರ್ 28ರಂದು ಕಾಂಗ್ರೆಸ್ ಸ್ಥಾಪನೆಯಾದಾಗ ಅದರ ತಳಹದಿಯ ಹಿಂದಿನ ಉದ್ದೇಶ ಇಂದಿಗೂ ಅದೇ ಆಗಿದೆ. ಬ್ರಿಟಿಷರು ಸಮಾಜದಲ್ಲಿ ದ್ವೇಷ ಹರಡಿ ಜನರನ್ನು ಪರಸ್ಪರ ತಿರುಗಿಸಲು ಯತ್ನಿಸುತ್ತಿದ್ದಾಗ ಕಾಂಗ್ರೆಸ್ ಸ್ಥಾಪನೆಯಾಯಿತು. ಸಮಾಜವನ್ನು ಒಗ್ಗೂಡಿಸುವ ಮತ್ತು ಬ್ರಿಟಿಷ್ ಆಡಳಿತದ ಹಿಡಿತದಿಂದ ಮುಕ್ತಗೊಳಿಸುವ ಉದ್ದೇಶವನ್ನು ಹೊಂದಿತ್ತು ಎಂದಿದ್ದಾರೆ.
ಇಂದಿಗೂ ಕಾಂಗ್ರೆಸ್ ಸಮಾಜದಲ್ಲಿ ಹರಡುತ್ತಿರುವ ದ್ವೇಷವನ್ನು ವಿರೋಧಿಸಲು ಪ್ರಯತ್ನಿಸುತ್ತಿದೆ, ಸಮಾಜದಲ್ಲಿನ ದ್ವೇಷವನ್ನು ಕೊನೆಗಾಣಿಸಲು ಮತ್ತು ಮೊಹಬ್ಬತ್ (ಪ್ರೇಮ) ಹರಡಲು ನಾವು ಸಿದ್ಧರಿದ್ದೇವೆ. ದೇಶವು ಒಗ್ಗೂಡಿದಾಗ ಮಾತ್ರ ಅದು ಅಭಿವೃದ್ಧಿ ಹೊಂದುತ್ತದೆ, ಇಲ್ಲದಿದ್ದರೆ ಯಾವುದೇ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು.
ಫೆಲ್ಡಿಂಗ್ ವೇಳೆ ಕನ್ನಡಲ್ಲೇ ‘ಕೈಗೆ ಹಾಕಲೋ’ ಎಂದ ಕೆ.ಎಲ್.ರಾಹುಲ್ ವಿಡಿಯೋ ವೈರಲ್
ನಾಗ್ಪುರದಿಂದ ಪ್ರಾರಂಭವಾಗಲಿರುವ ಹೈ ತೈಯಾರ್ ಹಮï ರ್ಯಾಲಿ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವ ಅಂಬಿಕಾ ಸೋನಿ ಅವರು ರ್ಯಾಲಿಯಲ್ಲಿ ಪಕ್ಷವು ಮಹಾರಾಷ್ಟ್ರದಲ್ಲಿ ತನ್ನ ರಾಜಕೀಯ ನೆಲೆಯನ್ನು ಬಲಪಡಿಸಲು ಬಯಸುತ್ತದೆ ಎಂದು ಹೇಳಿದರು.ಮಹಾರಾಷ್ಟ್ರದಲ್ಲಿ ನಮಗೆ ದೊಡ್ಡ ರಾಜಕೀಯ ನೆಲೆಯಿದೆ. ಅದನ್ನು ಬಲಪ ಡಿಸಲು ನಾವು ಬಯಸುತ್ತೇವೆ.
ರಾಹುಲ್ ಗಾಂಧಿಯವರ ಪಾದಯಾತ್ರೆಯು ಮಣಿಪುರದಿಂದ ಮಹಾರಾಷ್ಟ್ರದವರೆಗೆ ನಡೆಯಲಿದೆ ಎಂದು ಅವರು ಹೇಳಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಡಿಸೆಂಬರ್ 28, 1885 ರಂದು ಬಾಂಬೆಯಲ್ಲಿ (ಮುಂಬೈ) ದಾಸ್ ತೇಜ್ಪಾಲ್ ಸಂಸ್ಕøತ ಕಾಲೇಜಿನಲ್ಲಿ 72 ಪ್ರತಿನಿಗಳ ಉಪಸ್ಥಿತಿಯಲ್ಲಿ ಸ್ಥಾಪಿಸಲಾಯಿತು.