Friday, October 4, 2024
Homeರಾಷ್ಟ್ರೀಯ | Nationalಯುಪಿಯಲ್ಲಿ ಕಾಂಗ್ರೆಸ್‌‍-ಎಸ್‌‍ಪಿ ಮೈತ್ರಿ ಕ್ಷೀಣ

ಯುಪಿಯಲ್ಲಿ ಕಾಂಗ್ರೆಸ್‌‍-ಎಸ್‌‍ಪಿ ಮೈತ್ರಿ ಕ್ಷೀಣ

Congress spares no effort in preparation for all 10 UP bypoll seats, as ally SP watches

ಲಕ್ನೋ,ಸೆ.27- ಉತ್ತರ ಪ್ರದೇಶ ವಿಧಾನಸಭಾ ಉಪ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆಗಳನ್ನು ತೀವ್ರಗೊಳಿಸಿವೆ.ಲೋಕಸಭೆ ಚುನಾವಣೆ ನಂತರ ನಡೆಯುತ್ತಿರುವ ಈ ಉಪ ಚುನಾವಣೆಯಲ್ಲಿ ಎಸ್‌‍ಪಿ- ಕಾಂಗ್ರೆಸ್‌‍ ಮೈತ್ರಿಯ ವ್ಯಾಪ್ತಿ ಕ್ಷೀಣಿಸಿರುವುದರಿಂದ ಕಾಂಗ್ರೆಸ್‌‍ ಎಲ್ಲಾ 10 ಸ್ಥಾನಗಳಲ್ಲಿ ತನ್ನ ಪ್ರಭಾವ ಮೂಡಿಸಲು ಪ್ರಾರಂಭಿಸಿದೆ.

ಇದೇ ಸಮಯದಲ್ಲಿ, ಮೂರು ವಿಧಾನಸಭಾ ಸ್ಥಾನಗಳು ತನಗೆ ಹೆಚ್ಚು ಸೂಕ್ತ ಎಂದು ಪರಿಗಣಿಸಿವೆ. ವಾಸ್ತವವಾಗಿ ಹರಿಯಾಣ ಮತ್ತು ಜಮು ಮತ್ತು ಕಾಶೀರ ಚುನಾವಣೆಗಳ ನಂತರ, ಉತ್ತರಪ್ರದೇಶದಲ್ಲಿ ಉಪಚುನಾವಣೆ ಪ್ರಕ್ರಿಯೆಯು ವೇಗ ಪಡೆಯುತ್ತಿದೆ.

ಕರ್ಹಾಲ್‌, ಮಿಲ್ಕಿಪುರ್‌, ಕತೇಹಾರಿ, ಕುಂದರ್ಕಿ, ಘಾಜಿಯಾಬಾದ್‌, ಖೈರ್‌, ಮೀರಾಪುರ್‌, ಫುಲ್ಪುರ್‌, ಮಂಜ್ವಾ ಮತ್ತು ಸಿಸಾಮಾವುಗಳಲ್ಲಿ ಉಪಚುನಾವಣೆಗಳು ನಡೆಯಲಿವೆ.ಈ ಪೈಕಿ ಮೊದಲ 5 ಸ್ಥಾನಗಳು ಸಮಾಜವಾದಿ ಪಕ್ಷದದ್ದಾಗಿದ್ದವು. ಇದಲ್ಲದೇ ಆರೆಲ್‌ಡಿ-ನಿಶಾದ್‌ ಪಕ್ಷ ತಲಾ ಒಂದು ಸ್ಥಾನ ಗೆದ್ದಿದ್ದರೆ, ಬಿಜೆಪಿ 3 ಸ್ಥಾನಗಳನ್ನು ಗೆದ್ದಿತ್ತು. ಆದರೆ ಲೋಕಸಭೆ ಚುನಾವಣೆ ಫಲಿತಾಂಶವನ್ನು ಗಮನಿಸಿದರೆ ಬಿಜೆಪಿ ಈ ಬಾರಿ ಎಚ್ಚೆತ್ತುಕೊಂಡಿದೆ.

ಸದಸ್ಯತ್ವ ಅಭಿಯಾನದ ಹೆಸರಿನಲ್ಲಿ ಉಪಚುನಾವಣೆಗಳ ನೆಲೆಯನ್ನು ಬಲಪಡಿಸುತ್ತಿದ್ದಾರೆ. ಮತ್ತೊಂದೆಡೆ, ಎಸ್‌‍ಪಿ ಯುವಕರು ಮತ್ತು ಹಿರಿಯ ಅಧಿಕಾರಿಗಳ ತಂಡಗಳನ್ನು ಸಹ ನಿಯೋಜಿಸಿದ್ದಾರೆ. ಏತನಧ್ಯೆ, ಲೋಕಸಭೆ ಚುನಾವಣೆಯಲ್ಲಿ ಮಿತ್ರ ಪಕ್ಷವಾಗಿದ್ದ ಕಾಂಗ್ರೆಸ್‌‍, ಎಸ್‌‍ಪಿ ಜೊತೆಗಿನ ಮೈತ್ರಿ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸಿಲ್ಲ. ಹೀಗಾಗಿ ಕಾಂಗ್ರೆಸ್‌‍ ಕೂಡ ಉಪಚುನಾವಣೆಗೆ ಸಿದ್ಧತೆ ಆರಂಭಿಸಿದೆ.

ಕಾಂಗ್ರೆಸ್‌‍ ತನ್ನ ಇಬ್ಬರು ಶಾಸಕರು ಮತ್ತು 6 ಸಂಸದರನ್ನು ಕಣಕ್ಕಿಳಿಸಿದೆ. ಅವರನ್ನು ಚುನಾವಣಾ ಕ್ಷೇತ್ರಗಳ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಜತೆಗೆ ರಾಷ್ಟ್ರೀಯ ತಂಡವೂ ಚುನಾವಣಾ ತಯಾರಿಯಲ್ಲಿ ನಿರತವಾಗಿದೆ. ಮತ್ತೊಂದೆಡೆ, ಬುಧವಾರ ಕಾಂಗ್ರೆಸ್‌‍ ವಾರ್‌ ರೂಮ್‌ನ ಉಸ್ತುವಾರಿಯನ್ನು ಘೋಷಿಸಿದೆ.

ಕಾಂಗ್ರೆಸ್‌‍ ಎಲ್ಲ 10 ಸ್ಥಾನಗಳಿಗೂ ವಾರ್‌ ರೂಂ ಉಸ್ತುವಾರಿಗಳನ್ನು ಮಾಡಿದೆ. ಕಾಂಗ್ರೆಸ್‌‍ ಎಲ್ಲಾ ಕ್ಷೇತ್ರಗಳಿಗೂ ಸಿದ್ಧತೆ ಆರಂಭಿಸಿದೆ. ಆದರೆ, ಮೀರಾಪುರ್‌, ಫುಲ್ಪುರ್‌, ಮಂಜ್ವಾ ಸೀಟುಗಳು ತನಗೆ ಹೆಚ್ಚು ಸೂಕ್ತವೆಂದು ಪರಿಗಣಿಸಿದ್ದಾರೆ.

ಎಸ್‌‍ಪಿ ಮೂಲಗಳ ಪ್ರಕಾರ, ಹರಿಯಾಣದಲ್ಲಿ ಕಾಂಗ್ರೆಸ್‌‍ ಸೀಟುಗಳನ್ನು ಹಂಚಿಕೊಳ್ಳದ ಕಾರಣ ಉನ್ನತ ನಾಯಕತ್ವವು ಕಂಗಾಲಾಗಿದೆ. ಅನೇಕ ಕಾಂಗ್ರೆಸ್‌‍ ನಾಯಕರು, ಮೈತ್ರಿ ಚರ್ಚೆಯಲ್ಲಿ, ಹರಿಯಾಣದಲ್ಲಿ ಎಸ್ಪಿ ಬೆಂಬಲವನ್ನು ತಿರಸ್ಕರಿಸಿದರು. ಅಷ್ಟೇ ಅಲ್ಲ, ಕೊನೆಯ ಕ್ಷಣದವರೆಗೂ ಚಿತ್ರವೂ ಕ್ಲಿಯರ್‌ ಆಗಿರಲಿಲ್ಲ. ಈ ಹಿಂದೆ ಮಧ್ಯಪ್ರದೇಶದಲ್ಲೂ ಇದೇ ದ್ರೋಹ ನಡೆದಿತ್ತು.

ಆದ್ದರಿಂದ, ಹರ್ಯಾಣದಲ್ಲಿ ಎಸ್‌‍ಪಿ ಬೆಂಬಲ ನೆಲೆಯನ್ನು ಹೊಂದಿಲ್ಲದಿರುವಂತೆ, ಯುಪಿಯಲ್ಲಿ ಕಾಂಗ್ರೆಸ್‌‍ಗೆ ಹೆಚ್ಚು ಅಸ್ತಿತ್ವವಿಲ್ಲ ಎಂದು ಎಸ್‌‍ಪಿ ನಾಯಕರು ಹೇಳುತ್ತಾರೆ. ಅದೇ ಸಮಯದಲ್ಲಿ, ಅನೇಕ ಹಿರಿಯ ಎಸ್ಪಿ ನಾಯಕರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಜೊತೆಗಿನ ಮೈತ್ರಿಯನ್ನು ಸಮರ್ಥಿಸಲಿಲ್ಲ. ಹೀಗಿರುವಾಗ ಉಪಚುನಾವಣೆಯಲ್ಲಿ ಉಭಯ ಪಕ್ಷಗಳ ನಡುವೆ ಮೈತ್ರಿ ಏರ್ಪಡುವ ನಿರೀಕ್ಷೆ ಗರಿಗೆದರಿದೆ.

RELATED ARTICLES

Latest News