Thursday, June 20, 2024
Homeರಾಷ್ಟ್ರೀಯಕೇಂದ್ರದಲ್ಲಿ ಸರ್ಕಾರ ರಚಿಸುವ ಕಾಂಗ್ರೆಸ್‌‍ ಪ್ರಯತ್ನ ಫಲಿಸಲ್ಲ : ಹೆಚ್‌ಡಿಕೆ

ಕೇಂದ್ರದಲ್ಲಿ ಸರ್ಕಾರ ರಚಿಸುವ ಕಾಂಗ್ರೆಸ್‌‍ ಪ್ರಯತ್ನ ಫಲಿಸಲ್ಲ : ಹೆಚ್‌ಡಿಕೆ

ಬೆಂಗಳೂರು, ಜೂ, 5 (ಪಿಟಿಐ) ಕೇಂದ್ರದಲ್ಲಿ ಸರ್ಕಾರ ರಚಿಸುವ ಕಾಂಗ್ರೆಸ್‌‍ನ ಪ್ರಯತ್ನ ಫಲಿಸುವುದಿಲ್ಲ ಎಂದು ಜೆಡಿಎಸ್‌‍ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದ 543 ಲೋಕಸಭಾ ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಫಲಿತಾಂಶ ಪ್ರಕಟಿಸಿದ್ದು, ಬಿಜೆಪಿ 240 ಮತ್ತು ಕಾಂಗ್ರೆಸ್‌‍ 99 ಸ್ಥಾನಗಳನ್ನು ಗೆದ್ದಿದೆ. ನವದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ರಾಜಧಾನಿಯಲ್ಲಿ ಎನ್‌ಡಿಎ ಘಟಕಗಳ ಸಭೆ ನಡೆಯಲಿದ್ದು, ಜೆಡಿಎಸ್‌‍ ಪರವಾಗಿ ತಾವು ಭಾಗವಹಿಸುವುದಾಗಿ ಹೇಳಿದರು.

ಸರ್ಕಾರ ರಚನೆಗೆ ಕಾಂಗ್ರೆಸ್‌‍ ಪಕ್ಷದ ಕಸರತ್ತು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಏನೂ ಆಗುವುದಿಲ್ಲ ಅವರ ಪ್ರಯತ್ನ ಫಲಿಸುವುದಿಲ್ಲ ಎಂದರು.ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌‍ ಎರಡು ಸ್ಥಾನ ಗಳಿಸಿದ್ದು ಕುಮಾರಸ್ವಾಮಿ ಅವರು ಮಂಡ್ಯದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ.

ಇವರೊಂದಿಗೆ ಕೋಲಾರದಿಂದ ಪಕ್ಷದ ಅಭ್ಯರ್ಥಿ ಮಲ್ಲೇಶ್‌ ಬಾಬು ಗೆಲುವು ಸಾಧಿಸಿದ್ದಾರೆ. ಆದರೆ, ಹಾಸನದಿಂದ ಜೆಡಿಎಸ್‌‍ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಸೋತಿದ್ದಾರೆ. ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ ಎನ್‌ಡಿಎ 19 ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿ 17 ಮತ್ತು ಜೆಡಿಎಸ್‌‍ -2 ಗೆದ್ದಿದೆ.

RELATED ARTICLES

Latest News