Monday, June 17, 2024
Homeರಾಜ್ಯಪೊಲೀಸ್‌‍ ಕಸ್ಟಡಿ ಅವಧಿ ಮುಕ್ತಾಯ, ನಾಳೆ ಕೋರ್ಟ್ ಮುಂದೆ ಪ್ರಜ್ವಲ್‌ ರೇವಣ್ಣ ಹಾಜರು

ಪೊಲೀಸ್‌‍ ಕಸ್ಟಡಿ ಅವಧಿ ಮುಕ್ತಾಯ, ನಾಳೆ ಕೋರ್ಟ್ ಮುಂದೆ ಪ್ರಜ್ವಲ್‌ ರೇವಣ್ಣ ಹಾಜರು

ಬೆಂಗಳೂರು, ಜೂ. 4 –ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪ್ರಜ್ವಲ್‌ ರೇವಣ್ಣ ಅವರನ್ನು ಎಸ್‌‍ಐಟಿ ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ. ಬಂಧನಕ್ಕೊಳಗಾಗಿರುವ ಪ್ರಜ್ವಲ್‌ ಅವರ ಪೊಲೀಸ್‌‍ ಕಸ್ಟಡಿ ಅವಧಿ ನಾಳೆಗೆ ಮುಗಿಯಲಿರುವುದರಿಂದ ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.

ಜರ್ಮನಿಯಿಂದ ಮೇ 31ರಂದು ಮಧ್ಯರಾತ್ರಿ ಬೆಂಗಳೂರಿಗೆ ಬಂದ ಪ್ರಜ್ವಲ್‌ ಅವರನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್‌‍ಐಟಿ ವಶಕ್ಕೆ ಪಡೆದು ನಂತರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ನ್ಯಾಯಾಲಯ 6 ದಿನಗಳ ಕಾಲ ಎಸ್‌‍ಐಟಿ ವಶಕ್ಕೆ ನೀಡಿದೆ.

ಪ್ರಜ್ವಲ್‌ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೆಲವೊಂದು ಪ್ರಶ್ನೆಗಳಿಗೆ ನಿರ್ಧಿಷ್ಟವಾದ ಉತ್ತರ ನೀಡಿಲ್ಲ ಎಂಬುದು ಗೊತ್ತಾಗಿದೆ.ಹೊಳೆನರಸಿಪುರ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಕೇಳಲಾದ ಪ್ರಶ್ನೆಗಳಿಗೆ ಪ್ರಜ್ವಲ್‌ ಸೂಕ್ತ ಉತ್ತರ ನೀಡಿಲ್ಲ. ತಮ ಮನೆಕೆಲಸದಾಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಯಾರೆಂಬುದು ಗೊತ್ತಿಲ್ಲ, ನಮಗೆ ಅವರ ಪರಿಚಯವೇ ಇಲ್ಲ ಎಂದು ಉತ್ತರಿಸಿದ್ದಾರೆ.

ನಿಮ ತಾಯಿ ಇಲ್ಲದಿದ್ದಾಗ ನೀವು ಹೊಳೆನರಸೀಪುರದ ಮನೆಗೆ ಏಕೆ ಹೋಗುತ್ತಿದ್ದೀರಿ ಎಂದು ಎಸ್‌‍ಐಟಿ ಪ್ರಶ್ನಿಸಿದಾಗ ಮೌನವಾಗಿದ್ದಾರೆ. ಅಲ್ಲದೇ ಮೊಬೈಲ್‌ನಲ್ಲಿರುವ ಪೋಟೋಗಳನ್ನು ತೋರಿಸಿ ಇವರು ಯಾರೆಂದು ಕೇಳಿದರೆ ಅದಕ್ಕೂ ಸಹ ಉತ್ತರ ನೀಡಿಲ್ಲ ಎಂಬುದು ಗೊತ್ತಾಗಿದೆ.

RELATED ARTICLES

Latest News